ನಾಯಕನಹಟ್ಟಿ :
ರಾಮಸಾಗರ ಗ್ರಾಮದಲ್ಲಿ ಕಂದಾಯಾಧಿಕಾರಿಗಳು ಹಾಗೂ ಪೊಲೀಸ್ ಇಲಾಖೆ ಮತ್ತು ಗ್ರಾಮಸ್ತರು ಹಾಗೂ ದೇವಸ್ಥಾನ ಸಮಿತಿಯ ಸದಸ್ಯರನ್ನೊಳಗೊಂಡು ಸಭೆ ನಡೆಯಿತು. ಸದರಿ ಸಭೆಯಲ್ಲಿ ಶ್ರೀ ಗಾದ್ರಿಪಾಲನಾಯಕ ಸ್ವಾಮಿಯ ನೂತನ ದೇವಸ್ಥಾನ ಮತ್ತು ಕಳಸ ಪ್ರತಿಷ್ಠಾಪನೆ ಕಾರ್ಯಕ್ರಮವನ್ನು ಮ್ಯಾಸ ನಾಯಕ ಬುಡಕಟ್ಟು ಸಂಸ್ಕೃತಿ ವಿಧಿ ವಿಧಾನದ ಮೂಲಕ ಮಾಡಲು ತೀರ್ಮಾನಿಸಲಾಯಿತು. ಎಲ್ಲಾ ಗ್ರಾಮಸ್ಥರು, ಭಕ್ತಾಧಿಗಳು ಚಪ್ಪಾಳೆ ಮೂಲಕ ಸಮ್ಮತಿಸಲಾಯಿತು.ಪಿ.ಎಂ.ಮಂಜಣ್ಣ, ಲೈಸೆನ್ಸ್ ದಾರರು, ಶ್ರೀ ಗಾದ್ರಿಪಾಲನಾಯಕ ಸ್ವಾಮಿ ದೇವಸ್ಥಾನ ಹಾಗೂ ಮ್ಯಾಸ ನಾಯಕ ಬುಡಕಟ್ಟು ಕಟ್ಟೆಮನೆ ಯಜಮಾನರು, ದೈವಸ್ತರು. ರಾಮಸಾಗರ, ಗ್ರಾಮಸ್ತರು ಇದ್ದರು
