ಶಿರಾ:
ನಗರದಲ್ಲಿ ಸೆಪ್ಟಂಬರ್ 23 ರಂದು ಗಣಪತಿ ಮಂಡಳಿಯಿಂದ ಸಾಮೂಹಿಕ ಗಣಪತಿ ವಿಸರ್ಜನಾ ಮಹೋತ್ಸವ ನಡೆಯಲಿದ್ದು ನಗರದ ಸಾರ್ವಜನಿಕರು, ವಿವಿಧ ಸಂಘಟನೆಗಳು ಈ ಸಾಮೂಹಿಕ ವಿಸರ್ಜನಾ ಮಹೋತ್ಸವವನ್ನು ಯಶಸ್ವಿಗೊಳಿಸುವಂತೆ ಶಾಸಕ ಬಿ.ಸತ್ಯನಾರಾಯಣ್ ಮನವಿ ಮಾಡಿದರು.
ನಗರದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿ.ಸತ್ಯನಾರಾಯಣ್ ದೇಶಾಧ್ಯಂತ ಗಣಪತಿ ವಿಸರ್ಜನೆಯನ್ನು ಭಕ್ತಾಧಿಗಳು ಶ್ರದ್ಧಾ-ಭಕ್ತಿಗಳಿಂದ ಕೈಗೊಳ್ಳುತ್ತಾರೆ. ಅಂತೆಯೇ ಶಿರಾ ನಗರದಲ್ಲೂ ಗಣಪರಿ ಮಮಡಳಿಯು ಪ್ರತೀ ವರ್ಷವೂ ವಿಶೇಷ ಕಾರ್ಯಕ್ರಮಗಳನ್ನು ಕೈಗೊಳ್ಳುತ್ತಾ ಬಂದಿದೆ ಎಂದರು.
ಈ ವರ್ಷ ವಿಶೇಷವಾಗಿ ಎಲ್ಲಾ ಗಣಪತಿಗಳನ್ನು ಸೆಪ್ಟಂಬರ್ 23 ರಂದು ಸಾಮೂಹಿಕವಾಗಿ ವಿಸರ್ಜಿಸುವ ಏರ್ಪಾಟು ಮಾಡಿಕೊಳ್ಳಲಾಗಿದ್ದು ಈ ಸಂದರ್ಬದಲ್ಲಿ ನಡೆಯುವ ಮೆರವಣಿಗೆಯಲ್ಲಿ ಎಲ್ಲರೂ ಶ್ರದ್ಧಾಭಕ್ತಿಗಳಿಂದ ಕಾರ್ಯಕ್ರಮಕ್ಕೆ ಪ್ರೋತ್ಸಾಹ ನೀಡಬೇಕಿದ್ದು ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡಬಾರದು ಎಂದು ಅವರು ಮನವಿ ಮಾಡಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
