ವಾರಣಾಸಿ:
ವಾರಣಾಸಿಯ ಗಂಗಾನದಿಯ ದಡದಲ್ಲಿರುವ ದಶಾಶ್ವಮೇಧ ಘಾಟ್‌ನಲ್ಲಿ ಪ್ರಾರ್ಥನೆ ಸಲ್ಲಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಉತ್ತರ ಪ್ರದೇಶದ ವಾರಣಾಸಿ ಲೋಕಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸುವ ಮುನ್ನ ಕಾಲ ಭೈರವ ದೇವಾಲಯಕ್ಕೆ ಭೇಟಿ ನೀಡಲು ನಮೋ ಘಾಟ್‌ಗೆ ಪ್ರಯಾಣ ಬೆಳೆಸಿದರು.
ಗಂಗಾ ಸಪ್ತಮಿಯ ಶುಭ ಸಂದರ್ಭದಲ್ಲಿ ಗಂಗಾ ಆರತಿ ಮತ್ತು ಗಂಗೆಗೆ ಪ್ರಾರ್ಥನೆ ಸಲ್ಲಿಸಿದ ನಂತರ ಪ್ರಧಾನಿ ನಮೋ ಘಾಟ್‌ಗೆ ವಿಹಾರ ಯಾತ್ರೆ ನಡೆಸಿದರು. ಕ್ರೂಸ್‌ನಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ನೀಡಿದ ಸಂದರ್ಶನದಲ್ಲಿ, ಗಂಗಾ ಮಾತೆ ನನ್ನನ್ನು ದತ್ತು ಪಡೆದುಕೊಂಡಿದ್ದಾಳೆ. ವಾರಣಾಸಿಯೊಂದಿಗೆ 10 ವರ್ಷಗಳ ಬಾಂಧವ್ಯವನ್ನು ಹೊಂದಿದ್ದೇನೆ ಎಂದು ಹೇಳಿದರು.
10 ವರ್ಷಗಳ ಹಿಂದೆ ಕಾಶಿಗೆ ಬಂದಾಗ ಹೇಳಿದ್ದೆ, ಗಂಗಾ ಮಾತೆ ನನ್ನನ್ನು ಕರೆದಿದ್ದಾಳೆ ಎಂದರು, ಕಳೆದ 10 ವರ್ಷಗಳಲ್ಲಿ ಗಂಗೆ ನನ್ನನ್ನು ದತ್ತು ತೆಗೆದುಕೊಂಡಿದ್ದಾಳೆ, ಎಲ್ಲವನ್ನೂ ದೇವರ ಪೂಜೆ ಎಂದು ಪರಿಗಣಿಸಿ ಮಾಡುತ್ತೇನೆ. ಕಳೆದ 10 ವರ್ಷಗಳಲ್ಲಿ, ಕಾಶಿಯ ಜನರು ನನ್ನನ್ನು ಬನಾರಸಿಯನ್‌ನನ್ನಾಗಿ ಮಾಡಿದ್ದಾರೆ, ನನ್ನ ಜವಾಬ್ದಾರಿಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ ಎಂದು ನಾನು ಭಾವಿಸುತ್ತೇನೆ. 140 ಕೋಟಿ ಜನತೆಗೆ ನನ್ನ ವಂದನೆಗಳು ಎಂದಿದ್ದಾರೆ.
ಲೋಕಸಭೆ ಚುನಾವಣೆಗೆ ಪ್ರಧಾನಿ ಮೋದಿ ನಾಮಪತ್ರ ಸಲ್ಲಿಕೆಗೂ ಮುನ್ನ ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಮತ್ತು ಎನ್‌ಡಿಎ ನಾಯಕರು ವಾರಣಾಸಿಯ ಡಿಎಂ ಕಚೇರಿಗೆ ಆಗಮಿಸಿದ್ದಾರೆ.
ಪಿಎಂ ಮೋದಿ ಹಾಲಿ ಸಂಸದ ಮತ್ತು ಬಿಜೆಪಿಯ ಅಭ್ಯರ್ಥಿ 2024 ರ ಸಾರ್ವತ್ರಿಕ ಚುನಾವಣೆಗೆ ವಾರಣಾಸಿ ಲೋಕಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಲಿದ್ದಾರೆ, ಅಲ್ಲಿಂದ ಅವರು ಕಳೆದ ಎರಡು ಬಾರಿ ಸತತವಾಗಿ ಹೆಚ್ಚಿನ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಮೋದಿ ಅವರು ನಾಮಪತ್ರ ಸಲ್ಲಿಸುವ ಮೊದಲು ಕಾಲ ಭೈರವ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದರು. ಮೂರನೇ ಅವಧಿಗೆ ದಾಖಲೆಯ ಮಟ್ಟದಲ್ಲಿ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ.