ಕುಣಿಗಲ್ :
ನಿಷೇಧಿತ ಗಾಂಜಾವನ್ನು ಮಾರಾಟ ಮಾಡಲು ಸಾಗಾಣಿಕೆ ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು ಸೆರೆಹಿಡಿದಿದ್ದಾರೆ.
ಕುಣಿಗಲ್ ಪೊಲೀಸ್ ಠಾಣೆ ವ್ಯಾಪ್ತಿಯ ರಾಜ್ಯ ಹೆದ್ದಾರಿ 33 ರಸ್ತೆಯಲ್ಲಿಯ ಗವಿಮಠ ಬ್ರಿಡ್ಜ್ ಹತ್ತಿರ ಬ್ಯಾಗಿನಲ್ಲಿ ಕುಣಿಗಲ್ ಕೋಟೆ ಪ್ರದೇಶದ ಕಾರ್ ಡ್ರೈವರ್ ಆಗಿ ಕೆಲಸ ಮಾಡುವ ಆರೋಪಿ ರಿಯಾಜ್ ಪಾಷಾ ಎಂಬಾತನು ಗಾಂಜಾವನ್ನು ಸಾಗಿಸುವ ಸಂದರ್ಭದಲ್ಲಿ ಗಸ್ತಿನಲ್ಲಿದ್ದ ಪೊಲೀಸರು ಅನುಮಾನದ ಮೇಲೆ ಪರಿಶೀಲಿಸಲಾಗಿ ಆತನ ಬ್ಯಾಗಿನಲ್ಲಿ 950 ಗ್ರಾಂ ಗಾಂಜಾ ಪತ್ತೆಯಾಗಿದೆ. ಕೂಡಲೇ ಆತನನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದಾಗಿ ಎಂದು ಪೊಲಿಸ್ ಇನ್ಸ್ಪೆಕ್ಟರ್ ಡಿ.ಎಲ್. ರಾಜು ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ