ರಾಜ್ಯದ ಹಲವೆಡೆ ಎಗ್ಗಿಲ್ಲದೆ ಸಾಗಿದೆ ಗ್ಯಾಸ್‌ ರೀಫಿಲಿಂಗ್‌ ದಂಧೆ…!

ಗದಗ

    ಗದಗ-ಬೆಟಗೇರಿ ಅವಳಿ ನಗರದಲ್ಲಿ ಭಯಾನಕ ಗ್ಯಾಸ್ ರೀಫಿಲಿಂಗ್ ಮಾಫಿಯಾ  ಎಗ್ಗಿಲ್ಲದೇ ನಡೆದಿದೆ. ಪ್ರತಿ ಕ್ಷಣವೂ ಜನ್ರು ಭಯದಲ್ಲೇ ಬದುಕುವಂತಾಗಿದೆ. ಯಾವಾಗ ಬ್ಲಾಸ್ಟ್ ಆಗುತ್ತೋ, ದುರಂತ ಸಂಭವಿಸುತ್ತೋ ಅನ್ನೋ ಆತಂಕದಲ್ಲೇ ಜೀವನ ಮಾಡ್ತಾಯಿದ್ದಾರೆ. ಅಕ್ರಮ ಗ್ಯಾಸ್ ರೀಫಿಲಿಂಗ್ ದಂಧೆ ಅವಳಿ ನಗರದ ಜನ್ರನ್ನು ಬೆಚ್ಚಿಬಿಳಿಸಿದೆ. ಜಿಲ್ಲಾ ಕೇಂದ್ರದಲ್ಲೇ ರಾಜಾರೋಷವಾಗಿ ಈ ದಂಧೆ ನಡೆಯುತ್ತಿದ್ರೂ ಆಡಳಿತ ಕುಂಭಕರ್ಣ ನಿದ್ದೆ ಮಾಡ್ತಿದೆ. ಟಿವಿ9 ನಡೆಸಿದ ರಹಸ್ಯ ಕಾರ್ಯಾಚರಣೆಯಲ್ಲಿ ಭಯಾನಕ, ಕರಾಳ ದಂಧೆಯ ಅಸಲಿಯತ್ತು ಬಯಲಾಗಿದೆ.

   ಎರಡು ದಿನಗಳ ಹಿಂದೆಯೇ ಬೆಂಗಳೂರಿನ ಬೇಕರಿ ಅಂಗಡಿ ಸಿಲಿಂಡರ್​ಗಳು ಬ್ಲಾಸ್ಟ್ ಆಗಿ ಇಡೀ ಅಗಂಡಿ ಸುಟ್ಟು ಕರಕಲಾಗಿತ್ತು. ಈ ಘಟನೆ ಇನ್ನೂ ಕಣ್ಮುಂದೆ ಇರುವಾಗಲೇ ಅಕ್ರಮ ಗ್ಯಾಸ್ ರೀಫಿಲಿಂಗ್ ಡೇಂಜರ್ಸ್ ದಂಧೆ ಟಿವಿ9 ಬಯಲು ಮಾಡಿದೆ. ಈ ಭಯಾನಕ, ಡೇಂಜರ್ಸ್ ಅಕ್ರಮ ಗ್ಯಾಸ್ ರೀಫಿಲಿಂಗ್ ದಂಧೆ ರಾಜಾರೋಷವಾಗಿ ನಡೆಯುತ್ತಿದೆ. ಗದಗ-ಬೆಟಗೇರಿ ಅವಳಿ ನಗರದಲ್ಲಿ ಜನರ ಮಧ್ಯೆಯೇ ಅಕ್ರಮ ಗ್ಯಾಸ್ ರೀಫಿಲಿಂಗ್ ದಂಧೆ ಎಗ್ಗಿಲ್ಲದೇ ನಡೆಯುತ್ತಿದೆ. ಅವಳಿ ನಗರದ ಗಲ್ಲಿಗಲ್ಲಿಯಲ್ಲೂ, ಸಂದಿಗೊಂದಿಯಲ್ಲಿ ಶೆಡ್ ಹಾಕಿ ಗ್ಯಾಸ್ ರೀಫಿಲಿಂಗ್ ಮಾಡಲಾಗ್ತಾಯಿದೆ. ಟಿವಿ9 ರಹಸ್ಯ ಕಾರ್ಯಚರಣೆಯಲ್ಲಿ ಡೇಂಜರ್ಸ್ ದಂಧೆಯ ದೃಶ್ಯಗಳು ಸೆರೆಯಾಗಿವೆ.

   ಗ್ರಾಹಕರ ಮನೆಗಳಿಗೆ ಹೋಗಬೇಕಿರೋ ಗ್ಯಾಸ್ ಸಿಲಿಂಡರ್ ಗಳು ಈ ಅಕ್ರಮ ಅಡ್ಡಾದಲ್ಲಿ ಸಂಗ್ರಹ ಮಾಡಲಾಗಿದೆ. ಮಷಿನ್ ಮೂಲಕ ಅಕ್ರಮವಾಗಿ ಗ್ಯಾಸ್ ಆಟೋಗಳಿಗೆ ರೀಫಿಲಿಂಗ್ ಮಾಡಲಾಗ್ತಾಯಿದೆ. ಯಾರೂ ಕೂಡ ಕ್ರಮ ಕೈಗೊಳ್ಳುವ ಗೋಜಿಗೆ ಹೋಗ್ತಾಯಿಲ್ಲ. ಈ ಇಲಾಖೆಗಳು ಯಾಕೇ ಗಪ್ ಚುಪ್ ಆಗಿವೆ ಅನ್ನೋದು ಗೊತ್ತೇ ಆಗುತ್ತಿಲ್ಲ. ಸ್ಥಳೀಯರು ಹೇಳೋ ಪ್ರಕಾರ ಈ ಅಕ್ರಮ ಗ್ಯಾಸ್ ರೀಫಿಲಿಂಗ್ ಅಡ್ಡಾಗಳಿಂದ ಈ ಎರಡು ಇಲಾಖೆ ಅಧಿಕಾರಿಗಳಿಗೆ ಮಾಮುಲಿ ಹೋಗುತ್ತಂತೆ. ಹೀಗಾಗಿ ಡೇಂಜರ್ಸ್ ಅಂತ ಗೋತ್ತಿದ್ರೂ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ ಅನ್ನೋ ಆರೋಪ ಅವಳಿ ನಗರದಲ್ಲಿ ಕೇಳಿ ಬರ್ತಾಯಿದೆ. ಟಿವಿ9 ಕಳೆದ 15 ದಿನಗಳಿಂದ ಅವಳಿ ನಗರದ ಗಲ್ಲಿ ಗಲ್ಲಿಯಲ್ಲಿ ಸುತ್ತಾಡಿ ಈ ಅಕ್ರಮ ಗ್ಯಾಸ್ ರೀಫಿಲಿಂಗ್ ಅಡ್ಡಾಗಳನ್ನು ಪತ್ತೆ ಹಚ್ಚಿದೆ.

Recent Articles

spot_img

Related Stories

Share via
Copy link
Powered by Social Snap