ಮುಂಬೈ:
ಉದ್ಯಮಿ ಗೌತಮ್ ಅದಾನಿ ಅವರ ಹಿರಿಯ ಪುತ್ರ ಜೀತ್ ಅದಾನಿ ಹಾಗೂ ದಿವಾ ಜೈಮಿನಿ ಶಾ ಅವರ ವಿವಾಹದ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಾಗಿ ಸದ್ದು ಮಾಡತೊಡಗಿದೆ.
ಈ ನಡುವೆ ಇಂದು ಎಕ್ಸ್ ನಲ್ಲಿ ಟ್ವೀಟ್ ಮಾಡಿರುವ ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ ಮಹತ್ವದ ವಿಷಯವೊಂದನ್ನು ಹಂಚಿಕೊಂಡಿದ್ದಾರೆ. “ನನ್ನ ಮಗ ಜೀತ್ ಮತ್ತು ಸೊಸೆ ದಿವಾ ಪವಿತ್ರ ಸಂಕಲ್ಪದೊಂದಿಗೆ ತಮ್ಮ ವೈವಾಹಿಕ ಜೀವನವನ್ನು ಪ್ರಾರಂಭಿಸುತ್ತಿರುವುದು ಅಪಾರ ಸಂತೋಷದ ವಿಷಯವಾಗಿದೆ.
ಜೀತ್ ಮತ್ತು ದಿವಾ ಅವರು ಪ್ರತಿ ವರ್ಷ 500 ದಿವ್ಯಾಂಗ ಮಹಿಳೆಯರ ಮದುವೆಗೆ ತಲಾ 10 ಲಕ್ಷ ರೂ. ಆರ್ಥಿಕ ನೆರವು ನೀಡುವ ಮೂಲಕ ‘ಮಂಗಳ ಸೇವೆ’ ಮಾಡಲು ಪಣ ತೊಟ್ಟಿದ್ದಾರೆ ಎಂದು ತಿಳಿಸಿದ್ದಾರೆ. ಈ ಪವಿತ್ರ ಪ್ರಯತ್ನದ ಮೂಲಕ ಅನೇಕ ವಿಕಲಾಂಗ ಹೆಣ್ಣುಮಕ್ಕಳು ಮತ್ತು ಅವರ ಕುಟುಂಬಗಳ ಜೀವನ ಸಂತೋಷ, ಶಾಂತಿ ಮತ್ತು ಗೌರವದಿಂದ ಸಾಗುತ್ತದೆ ಎಂದು ನಾನು ನಂಬುತ್ತೇನೆ, ಈ ಸೇವೆಯ ಹಾದಿಯಲ್ಲಿ ಮುಂದುವರಿಯಲು ಜೀತ್ ಮತ್ತು ದಿವಾ ಆಶೀರ್ವಾದ ಮತ್ತು ಶಕ್ತಿಯನ್ನು ನೀಡುವಂತೆ ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ಗೌತಮ್ ಅದಾನಿ ಬರೆದುಕೊಂಡಿದ್ದಾರೆ.
ಜೀತ್ ಹಾಗೂ ದಿವಾ ಅವರ ವಿವಾಹ ಮಹೋತ್ಸವ ಫೆಬ್ರವರಿ 7 ರಂದು ಅಹಮದಾಬಾದ್ ನಲಲಿ ನಡೆಯಲಿದ್ದು, ವಿವಾಹ ಪೂರ್ವ ಕಾರ್ಯಗಳು ಇಂದಿನಿಂದ ಆರಂಭವಾಗಿವೆ. ಜೀತ್ ಹಾಗೂ ದೀವಾ 2023 ಮಾರ್ಚ್ ನಿಂದಲೂ ಪರಸ್ಪರ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ವಿವಾಹ ಸಮಾರಂಭಕ್ಕೆ 300 ಗಣ್ಯರನ್ನು ಮಾತ್ರ ಆಹ್ವಾನಿಸಲಾಗಿದೆ ಎಂದು ವರದಿಯಾಗಿದೆ.