ಪಾಂಟಿಂಗ್ ಆಸ್ಟ್ರೇಲಿಯಾ ಬಗ್ಗೆ ಕಾಳಜಿ ವಹಿಸಲಿ, ಭಾರತದ ಬಗ್ಗೆ ಅಲ್ಲ: ಗೌತಮ್ ಗಂಭೀರ್

ಮುಂಬೈ

   ಭಾರತ ತಂಡದಲ್ಲಿ ವಿರಾಟ್ ಕೊಹ್ಲಿ ಅವರ ಫಾರ್ಮ್ ನ್ನು ಟೀಕಿಸಿದ್ದ ಆಸ್ಟ್ರೇಲಿಯಾದ ಮಾಜಿ ಆಟಗಾರ ರಿಕಿ ಪಾಂಟಿಂಗ್ ವಿರುದ್ಧ ಭಾರತದ ಮುಖ್ಯ ಕೋಚ್ ಗೌತಮ್ ಗಂಭೀರ್ ಸೋಮವಾರ ತೀವ್ರ ವಾಗ್ದಾಳಿ ನಡೆಸಿದ್ದಾರೆ.

   ಕಳೆದ ಐದು ವರ್ಷಗಳಲ್ಲಿ ಭಾರತದ ಬ್ಯಾಟರ್ ಕೇವಲ ಎರಡು ಟೆಸ್ಟ್ ಶತಕಗಳನ್ನು ಗಳಿಸಿದ್ದು, ಕೊಹ್ಲಿಯ ಫಾರ್ಮ್ ಕಳವಳಕಾರಿಯಾಗಿದೆ ಫಾರ್ಮ್ ಗೆ ಮರಳಲು ಕೊಯ್ಲಿ ಅವರಿಗೆ ಇನ್ನೂ ಸಾಮರ್ಥ್ಯವಿದೆ. ಅದನ್ನು ಮಾಡಲು ಆಸ್ಟ್ರೇಲಿಯಾಕ್ಕಿಂತ ಉತ್ತಮವಾದ ಸ್ಥಳವಿಲ್ಲ ಎಂದು ಪಾಂಟಿಂಗ್ ಇತ್ತೀಚೆಗೆ ಹೇಳಿದ್ದರು.

   ಈ ಕುರಿತು ಇಂದು ಸುದ್ದಿಗೋಷ್ಠಿಯಲ್ಲಿ ಕಿಡಿಕಾರಿದ ಗೌತಮ್ ಗಂಭೀರ್, ಪಾಂಟಿಂಗ್‌ಗೂ ಭಾರತೀಯ ಕ್ರಿಕೆಟ್‌ಗೂ ಏನು ಸಂಬಂಧ? ಅವರು ಆಸ್ಟ್ರೇಲಿಯಾ ಕ್ರಿಕೆಟ್ ಬಗ್ಗೆ ಮೊದಲು ಯೋಚಿಸಬೇಕು ಎಂದು ಭಾವಿಸುತ್ತೇನೆ. ಅದಕ್ಕಿಂತ ಮುಖ್ಯವಾಗಿ, ವಿರಾಟ್ ಮತ್ತು ರೋಹಿತ್ ಬಗ್ಗೆ ನನಗೆ ಯಾವುದೇ ಕಾಳಜಿ ಇಲ್ಲ ಎಂದರು. ಕೊಹ್ಲಿ ಈ ವರ್ಷ ಕಾನ್ಫುರದಲ್ಲಿ ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ನಲ್ಲಿ ಕೇವಲ ಅರ್ಧ ಶತಕ ಗಳಿಸಿದ್ದರು. ಅವರ ಕೊನೆಯ ಟೆಸ್ಟ್ ಶತಕ ಜುಲೈ 2023 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧವಾಗಿತ್ತು. 2016 ರಿಂದ 2019 ರವರೆಗೆ ಟೆಸ್ಟ್ ಕ್ರಿಕೆಟ್‌ನಲ್ಲಿ 34 ಟೆಸ್ಟ್ ಪಂದ್ಯಗಳಲ್ಲಿ 2 ಶತಕದೊಂದಿಗೆ 31.68ರ ಸರಾಸರಿಯಲ್ಲಿ 1,838 ರನ್ ಗಳಿಸಿದ್ದಾರೆ.

  2024 ರಲ್ಲಿ ಆರು ಪಂದ್ಯಗಳಲ್ಲಿ ಕೇವಲ 22. 72 ರನ್ ಗಳ ಸರಾಸರಿ ಹೊಂದಿದ್ದಾರೆ. ಇತ್ತೀಚಿನ ಐಸಿಸಿ ವಿಮರ್ಶೆಯ ಸಂಚಿಕೆಯಲ್ಲಿ ಮಾತನಾಡಿದ ಪಾಂಟಿಂಗ್, ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್ ಆಗಿ ಆಡುವವರು ಐದು ವರ್ಷಗಳಲ್ಲಿ ಕೇವಲ ಎರಡು ಟೆಸ್ಟ್ ಪಂದ್ಯಗಳಲ್ಲಿ ಶತಕ ಗಳಿಸಿರುವವರು ಬಹುಶ; ಯಾರು ಇರಲಕ್ಕಿಲ್ಲ ಎಂದು ಕೊಹ್ಲಿಯನ್ನು ಟೀಕಿಸಿದ್ದರು. 

   ವಿರಾಟ್ ಬಗ್ಗೆ ಮೊದಲೇ ಹೇಳಿದ್ದೇನೆ, ಯಾವುದೇ ಸಂದೇಹವಿಲ್ಲ, ಅವರು ಶ್ರೇಷ್ಠ ಆಟಗಾರರಾಗಿದ್ದು, ಆಸ್ಟ್ರೇಲಿಯಾ ವಿರುದ್ಧ ಆಡಲು ಇಷ್ಟಪಡುತ್ತಾರೆ. ಅವರ ದಾಖಲೆ ಆಸ್ಟ್ರೇಲಿಯಾದಲ್ಲಿಯೇ ತುಂಬಾ ಚೆನ್ನಾಗಿದೆ. ಅದನ್ನು ಈ ಸರಣಿಯಲ್ಲಿಯೂ ಮಾಡಬಹುದು ಹಾಗಾಗಿ ಮೊದಲ ಪಂದ್ಯದಲ್ಲಿ ವಿರಾಟ್ ರನ್ ಗಳಿಸುವುದರಲ್ಲಿ ಆಶ್ಚರ್ಯವಾಗುವುದಿಲ್ಲ ಎಂದು ಗೌತಮ್ ಗಂಭೀರ್ ಹೇಳಿದರು.

   ಇದೇ ತಿಂಗಳು ಆಸ್ಟ್ರೇಲಿಯಾದಲ್ಲಿ ಆರಂಭವಾಗಲಿರುವ ಬಾರ್ಡರ್- ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಆಸ್ಟ್ರೇಲಿಯಾ ನಮ್ಮ ಎದುರಾಳಿಯಾಗಿದ್ದು, ಖಂಡಿತವಾಗಿಯೂ ಜಯ ಸಾಧಿಸುತ್ತೇವೆ ಎಂಬ ವಿಶ್ವಾಸದೊಂದಿಗೆ ತೆರಳುತ್ತಿದ್ದೇವೆ ಎಂದು ತಿಳಿಸಿದರು.

   ಆಸ್ಟ್ರೇಲಿಯಾ ವಿರುದ್ಧದ ಐದು ಪಂದ್ಯಗಳ ಸರಣಿ ಇದೇ 26 ರಿಂದ ಆರಂಭವಾಗಲಿದೆ. ಮೊದಲ ಪಂದ್ಯ ಪರ್ತ್ ನಲ್ಲಿ ನಡೆಯಲಿದೆ. ಒಂದು ವೇಳೆ ಆ ಪಂದ್ಯಕ್ಕೆ ರೋಹಿತ್ ಲಭ್ಯವಾಗದಿದ್ದರೆ ವೇಗಿ ಉಪ ನಾಯಕ ಜಸ್ಪ್ರೀತ್ ಬೂಮ್ರಾ ತಂಡದ ನಾಯಕರಾಗಲಿದ್ದಾರೆ ಎಂದು ಗಂಭೀರ್ ಖಚಿತಪಡಿಸಿದ್ದಾರೆ

Recent Articles

spot_img

Related Stories

Share via
Copy link