ಶಿವಮೊಗ್ಗ : ವೈರಲ್ ಆಗ್ತಿದೆ ಗೀತಾ ಶಿವರಾಜ್ ಕುಮಾರ್ ಹೇಳಿಕೆ

 

     ಸಾಮಾನ್ಯವಾಗಿ ಪಂಚಾಯತ್ ಎಲೆಕ್ಷನ್ ಆಗಲಿ ಪುರುಷರಿಗೆ ಜಾಸ್ತಿ ಪ್ರಾತಿನಿಧ್ಯ ಸಿಗುತ್ತಿತ್ತು. ನಮ್ಮ ರಾಜೀವ್ ಗಾಂಧಿಯವರು ಪ್ರೈಮ್ ಮಿನಿಸ್ಟರ್ ಆಗಿದ್ರು. ಅವ್ರು ನಮ್ಮ ಮಹಿಳೆಯರೆಲ್ಲ ಸಮಾನವಾಗಿ ಇರಬೇಕು ಅಂತ 33.3 ಪರ್ಸೆಂಟ್ ಮೀಸಲಾತಿಯನ್ನು ತಂದ್ರು, ಅದಕ್ಕಿಂತ ಮೊದಲು ಮೀಸಲಾತಿ ಅಂತ ನಮ್ಮ ಹೆಣ್ಣು ಮಕ್ಕಳಿಗೆ ಇರಲಿಲ್ಲ, ಪಂಚಾಯತ್‌ನಲ್ಲೇ ಮೀಸಲಾತಿ ಇರಲಿಲ್ಲ ಅಂದ್ರೆ ಎಂಎಲ್ ಎ, ಎಂಪಿ ಆಗೋಕೆ ಹೇಗೆ ಸಾಧ್ಯ,

     ಮಹಿಳೆಯರು ಉನ್ನತ ಸ್ಥಾನಕ್ಕೆ ಬರೋದು ಹೇಗೆ ಅಂತ ಮೀಸಲಾತಿ ತಂದ್ರು ಎಂದು ಗೀತಾ ಶಿವರಾಜ್‌ಕುಮಾರ್ ಹೇಳಿದ್ದಾರೆ.

    ಮಹಿಳಾ ಮೀಸಲಾತಿ ಅನುಷ್ಠಾನ ಮಾಡಿದ್ರು. ಇದು ಆಗಿದ್ದು 1992ರಲ್ಲಿ ಅಂತ ಗೀತಾ ಶಿವರಾಜ್‌ಕುಮಾರ್ ಹೇಳಿದ್ದಾರೆ. ಇದಾದ ಮೇಲೆ ನಮ್ಮ ಹೆಣ್ಣು ಮಕ್ಕಳು ಎಲ್ಲಿಂದ ಎಲ್ಲಿಗೋ ರೀಚ್ ಆದ್ರು. ಬಹಳ ಧೈರ್ಯ, ಶಕ್ತಿವಂತರು ನಮ್ಮ ಹೆಣ್ಣು ಮಕ್ಕಳು ಅಂತ ಗೀತಾ ಶಿವರಾಜ್‌ಕುಮಾರ್ ಹೇಳಿದ್ದಾರೆ.

      ಈ ಮೀಸಲಾತಿ ಬಂದ ಮೇಲೆಯೇ ಇಂದಿರಾ ಗಾಂಧಿ ದೇಶದ ಪ್ರಧಾನಿಯಾದ್ರು ಅಂತ ಗೀತಾ ಶಿವರಾಜ್‌ಕುಮಾರ್ ಹೇಳಿದ್ದಾರೆ. ಅಲ್ಲದೇ ಮಾಯಾವತಿ, ಜಯಲಲಿತಾ ಅಂತವರು ಸಿಎಂ ಆದ್ರೂ ಅಂತಲೂ ಗೀತಾ ಶಿವರಾಜ್‌ಕುಮಾರ್ ಹೇಳಿದ್ದಾರೆ. ಗೀತಾ ಅವರ ಈ ಭಾಷಣ ಎಲ್ಲೆಡೆ ವೈರಲ್ ಆಗುತ್ತಿದೆ.

Recent Articles

spot_img

Related Stories

Share via
Copy link
Powered by Social Snap