ಪಾವಗಡ :
ಇಲ್ಲಿನ ಕುರುಬ ರ ಹಳ್ಳಿ ಗೇಟ್ ಬಳಿಯಿರುವ ಕೋವಿಡ್ ಆರೈಕೆ ಕೇಂದ್ರದ ಸೋಂಕಿತರಿಗೆ ನಿತ್ಯ ಬಳಕೆಗೆ ಮತ್ತು ಕುಡಿಯಲು ಬಿಸಿ ನೀರಿನ ವ್ಯವಸ್ಥೆಗಾಗಿ ಶ್ರೀರಾಮಕೃಷ್ಣ ಸೇವಾಶ್ರಮದ ವತಿಯಿಂದ ಜೂನ್ 17ರಂದು ಸ್ವಾಮಿ ಜಪಾನಂದಜಿ ಎರಡು ಇನ್‍ಸ್ಟಂಟ್ ಗೀಸರ್‍ಗಳನ್ನು ನೀಡಿದರು.
ಅಲ್ಲಿಯ ಸೋಂಕಿತರು ಕುಡಿಯಲು ಬಿಸಿನೀರಿಲ್ಲದೆ ಬಳಲುತ್ತಿರುವ ವಿಚಾರವನ್ನು ಉಪವಿಭಾಗಾಧಿಕಾರಿ ಸೋಮಪ್ಪ ಕಡಕೋಳ ಸ್ವಾಮಿ ಜಪಾನಂದಜೀ ರವರ ಗಮನಕ್ಕೆ ತಂದು, ಸಹಾಯ ನೀಡುವಂತೆ ಮನವಿ ಮಾಡಿಕೊಂಡ ಕೆಲವೇ ಗಂಟೆಗಳಲ್ಲಿ ಎರಡು ಗೀಸರ್‍ಗಳನ್ನು ತಹಸೀಲ್ದಾರ್ ಕು.ಕಲ್ಯಾಣಿ ರವರಿಗೆ ಹಸ್ತಾಂತರ ಮಾಡಿದರು.
ಇದೇ ಸಂದರ್ಭದಲ್ಲಿ ತಾಲ್ಲೂಕಿನ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಪಲ್ಸ್ ಆ್ಯಕ್ಸಿಮೀಟರ್‍ನ್ನು ತಹಸೀಲ್ದಾರ್‍ರವರಿಗೆ ಹಸ್ತಾಂತರಿಸಲಾಯಿತು. ಕಂದಾಯ ನಿರೀಕ್ಷಕ ರಾಜಗೋಪಾಲ್, ಆಡಳಿತಾಧಿಕಾರಿ ಕು.ಜಯಶ್ರೀ ಹಾಗೂ ವಿವೇಕ ಬ್ರಿಗೇಡ್‍ನ ಲೋಕೇಶ್ ದೇವರಾಜ್ ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
