ಬೆಂಗಳೂರು
ಮಳವಳ್ಳಿ ತಾಲ್ಲೂಕು ವ್ಯಾಪ್ತಿಯಲ್ಲಿ ಬರುವ ಕಾವೇರಿ ಕಣಿವೆಯ ಪ್ರಸಿದ್ಧ ತಾಣವಾದ ಗಗನಚುಕ್ಕಿ -ಭರಚುಕ್ಕಿ ಪ್ರವಾಸ ತಾಣದ ಅಭಿವೃದ್ಧಿಗೆ ಕ್ರಮಕೈಗೊಳ್ಳಲಾಗುವುದು ಎಂದು ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ.ಸುನಿಲ್ ಕುಮಾರ್ ವಿಧಾನಸಭೆಗಿಂದು ತಿಳಿಸಿದರು.
ಪ್ರಶ್ನೋತ್ತರ ವೇಳೆಯಲ್ಲಿ ಸದಸ್ಯರಾದ ಡಾ: ಅನ್ನದಾನಿ ಅವರ ಪ್ರಶ್ನೆಗೆ ಪ್ರವಾಸೋದ್ಯಮ ಸಚಿವರ ಪರವಾಗಿ ಉತ್ತರ ನೀಡಿದ ಸಚಿವರು, ಪ್ರವಾಸಿ ತಾಣವಾದ ಗಗನಚುಕ್ಕಿ-ಭರಚುಕ್ಕಿಗೆ ಸಂಪರ್ಕ ಕಲ್ಪಿಸಲು ರೋಪ್ ವೇ ನಿರ್ಮಾಣ ಮಾಡಲು ಕ್ರಮ ವಹಿಸಲಾಗುವುದು ಎಂದರು. 2022-23ನೇ ಸಾಲಿನ ಆಯವ್ಯಯದಲ್ಲಿ ರೂ.20 ಕೋಟಿ, ಹೆಚ್ಚುವರಿ ಅನುದಾನ ರೂ. 20 ಕೋಟಿ ಒಟ್ಟು 40 ಕೋಟಿ ಅನುದಾನವನ್ನು ಮುಂದುವರೆದ ಕಾಮಗಾರಿಗಳಿಗೆ ಪ್ರಗತಿಗನುಗುಣವಾಗಿ ಬಿಡುಗಡೆ ಮಾಡಲಾಗಿದೆ. ಅನುದಾನದ ಕೊರತೆಯಿಂದ ನೂತನ ಕಾಮಗಾರಿಗಳನ್ನು ಕೈಗೆತ್ತಿಕೊಂಡಿರುವುದಿಲ್ಲ ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ