ದಾವಣಗೆರೆ ಬೆಣ್ಣೆದೋಸೆಗೆ ಮತ್ತೊಂದು ಗರಿ : ಕೇಂಧ್ರದಿಂದ ಜಿಐ ಮಾನ್ಯತೆ….!

ದಾವಣಗೆರೆ : 

    ರಾಜ್ಯದಲ್ಲಿ ಸಿಗುವ ಹಲವು ಜನಪ್ರಿಯ ದೋಸೆಗಳ ಪೈಕಿ ದಾವಣಗೆರೆ ಬೆಣ್ಣೆ ದೋಸೆ  ತುಂಬಾನೆ ಫೇಮಸ್. ಈ ದೋಸೆ ದಾವಣಗೆರೆಯಲ್ಲಿ ಹುಟ್ಟಿಕೊಂಡಿದ್ದರೂ, ಈ ರುಚಿಕರವಾದ ವಿಶೇಷ ದೋಸೆಯ ಹೋಟೆಲ್​ಗಳನ್ನು ಈಗ ದೇಶದಾದ್ಯಂತ ಕಾಣಬಹುದು. ಆದರೆ ಇತ್ತೀಚೆಗಷ್ಟೇ ದಾವಣಗೆರೆ ಬೆಣ್ಣೆ ದೋಸೆಗೆ ಭೌಗೋಳಿಕ ಸೂಚಕ  ಟ್ಯಾಗ್ ನೀಡಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ  ಘೋಷಿಸಿದೆ.

   ದಾವಣಗೆರೆಯ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಸದನದಲ್ಲಿ ಕೋರಿದ ಪ್ರಶ್ನೆಗೆ ಲಿಖಿತ ರೂಪದಲ್ಲಿ ಉತ್ತರಿಸಿದ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಖಾತೆ ರಾಜ್ಯ ಸಚಿವ ಜಿತಿನ್ ಪ್ರಸಾದ್, ದಾವಣಗೆರೆ ಬೆಣ್ಣೆದೋಸೆ ಹೆಚ್ಚು ಜನಪ್ರಿಯವಾಗಿದೆ. ಆದರೆ, ಕರ್ನಾಟಕ, ದಾವಣಗೆರೆಯ ಆಚೆಗಿನ ಪ್ರದೇಶಗಳನ್ನು ಒಳಗೊಂಡಂತೆ ಇತರೆ ಪ್ರದೇಶದಲ್ಲೂ ವ್ಯಾಪಕವಾಗಿ ಲಭ್ಯವಾಗಿರುವ ಈ ದೋಸೆ ಸಾಮಾನ್ಯ ವಸ್ತುವಾಗಿದೆ ಎಂದಿದ್ದಾರೆ.  

   ಜಿಐ ಟ್ಯಾಗ್‌ಗೆ ಅಗತ್ಯವಿರುವ ವಿಶಿಷ್ಟತೆಯು ಕಡಿಮೆಯಾಗಿದೆ, ಏಕೆಂದರೆ ಈ ದೋಸೆಯನ್ನು ಈಗ ಹಲವಾರು ಸ್ಥಳಗಳಲ್ಲಿ ತಯಾರಿಸುತ್ತಿರುವ ಕಾರಣ ಅದರ ವಿಶಿಷ್ಟ ಪ್ರಾದೇಶಿಕ ಗುರುತನ್ನು ಕಳೆದುಕೊಳ್ಳುತ್ತದೆ. ಉತ್ಪನ್ನವು GI ಟ್ಯಾಗ್‌ಗೆ ಅರ್ಹತೆ ಪಡೆಯಲು, ಅದು ನಿರ್ದಿಷ್ಟ ಪ್ರದೇಶಕ್ಕೆ ವಿಶಿಷ್ಟವಾಗಿರಬೇಕು, ನಿರ್ದಿಷ್ಟ ಉತ್ಪಾದನಾ ಪ್ರಕ್ರಿಯೆಗಳು, ಹವಾಮಾನ ಪರಿಸ್ಥಿತಿಗಳು ಮತ್ತು ಸ್ಥಳೀಯ ಪದಾರ್ಥಗಳನ್ನು ಒಳಗೊಂಡಿರುತ್ತದೆ. ಆ ಉತ್ಪನ್ನ ಪುರಾತನ ದಾಖಲಿತ ಇತಿಹಾಸವನ್ನು ಹೊಂದಿರಬೇಕು ಮತ್ತು ತಲೆಮಾರುಗಳ ಮೂಲಕ ಹಾದುಹೋಗುವ ಸಾಂಪ್ರದಾಯಿಕ ಕೌಶಲ್ಯಗಳನ್ನು ಹೊಂದಿರಬೇಕು ಎಂದು ಸಚಿವರು ತಿಳಿಸಿದ್ದಾರೆ.  

   ದಾವಣಗೆರೆ ಬೆಣ್ಣೆ ದೋಸೆಯನ್ನು ಭೌಗೋಳಿಕ ಸೂಚಕವಾಗಿ ನೋಂದಾಯಿಸಲು ಭೌಗೋಳಿಕ ಸೂಚನೆಗಳ ನೋಂದಣಿ ಕಚೇರಿಗೆ ಅರ್ಜಿ ಬಂದಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು. ನೋಂದಣಿ ಸ್ವಯಂಪ್ರೇರಿತ ಕಾರ್ಯವಲ್ಲ ಆದರೆ GI ಕಾಯಿದೆ ಮತ್ತು ನಿಯಮಗಳ ಅಡಿಯಲ್ಲಿ ಕಾನೂನು ಪ್ರಕ್ರಿಯೆಯಾಗಿದೆ. ಉತ್ಪಾದಕರ ಸಂಘ ಅಥವಾ ಉತ್ಪನ್ನವನ್ನು ತಯಾರಿಸುವ ಸಂಸ್ಥೆಯಿಂದ ಭೌಗೋಳಿಕ ಸೂಚನೆಗಳ ರಿಜಿಸ್ಟ್ರಾರ್‌ಗೆ ಅರ್ಜಿಯನ್ನು ಸಲ್ಲಿಸಬೇಕು ಎಂದು ತಿಳಿಸಿದರು.  

   ದಾವಣಗೆರೆ ಬೆಣ್ಣೆ ದೋಸೆಯ ಹಿಂದಿರೋದು ಚೆನ್ನಮ್ಮ ಎಂಬ ಮಹಿಳೆ. ಬೆಳಗಾವಿಯ ರಾಮದುರ್ಗ ತಾಲೂಕಿನಿಂದ ಕುಟುಂಬವೊಂದು ದಾವಣಗೆರೆ ವಲಸೆ ಬಂದಿತ್ತು. ಈ ಕುಟುಂಬದ ಚೆನ್ನಮ್ಮ ಎಂಬ ಮಹಿಳೆ ತನ್ನ ಮಕ್ಕಳ ಜೊತೆ ದೋಸೆ, ಚಟ್ನಿ, ಆಲೂಗಡ್ಡೆ ಪಲ್ಯ ತಯಾರಿ ಮಾರಾಟ ಮಾಡಲು ಆರಂಭಿಸಿದರು. ದಾವಣಗೆರೆಯ ವಸಂತ ಟಾಕೀಸ್ ಬಳಿಯ ಸಾವಳಗಿ ನಾಟಕ ಥಿಯೇಟರ್ ಮುಂದೆ ಚೆನ್ನಮ್ಮ ಅವರ ಪುಟ್ಟ ಉಪಾಹಾರ ಗೃಹದಲ್ಲಿ ದೋಸೆ ಮಾಡುತ್ತಿದ್ದರು.

   ಮೊದಲು ಚೆನ್ನಮ್ಮ ರಾಗಿ ಹಿಟ್ಟಿನ ದೋಸೆ ಮಾಡುತ್ತಿದ್ದರು. 1938ರ ಹೊತ್ತಿಗೆ ಚೆನ್ನಮ್ಮ ಅವರ ಮಕ್ಕಳಾದ ಶಾಂತಪ್ಪ ಮತ್ತು ಮಹದೇವಪ್ಪ ಅವರು ಅಕ್ಕಿ ಹಿಟ್ಟಿನ ದೋಸೆ ಮಾಡಲು ಶುರು ಮಾಡಿದರು. ಬೆಣ್ಣೆ ಬೆರೆಸಿದ ಬಿಸಿ ಬಿಸಿ ದೋಸೆಗೆ ದಾಲ್ ಸಾಥ್ ಕೊಡ್ತಿತ್ತು. ಮುಂದೆ ಇದೇ ಬೆಣ್ಣೆ ದೋಸೆ ಜಗತ್ಪ್ರಸಿದ್ಧವಾಯಿತು. ಮುಂದೆ ಶಾಂತಪ್ಪ ಅವರು 1944 ರಲ್ಲಿ “ಶಾಂತಪ್ಪ ದೋಸೆ ಹೋಟೆಲ್” ಎಂಬ ತಮ್ಮದೇ ಆದ ಉಪಾಹಾರ ಗೃಹವನ್ನು ತೆರೆದರು. ಇದೇ ದಾವಣಗೆರೆಯ ಅತ್ಯಂತ ಹಳೆಯ ಬೆಣ್ಣೆ ದೋಸೆ ಹೋಟೆಲ್.

    ಕರ್ನಾಟಕದಲ್ಲಿ ಮೈಸೂರು ಮಲ್ಲಿಗೆ, ಮೈಸೂರು ರೇಷ್ಮೆ, ನಂಜನಗೂಡು ರಸಬಾಳೆ, ಬೀದರ್‌ನ ಬಿದರಿ ಕಲೆ, ಚನ್ನಪಟ್ಟಣದ ಮರದ ಗೊಂಬೆಗಳು, ಇಳಕಲ್‌ ಹಾಗೂ ಮೊಳಕಾಲ್ಮುರು ಸೀರೆಗಳು, ಕೊಡಗಿನ ಕಿತ್ತಳೆ, ಅಪ್ಪೆಮಿಡಿ ಮಾವು, ಧಾರವಾಡ ಪೇಡಾ, ಬಾಬಾಬುಡನ್‌ಗಿರಿಯ ಅರೇಬಿಕಾ ಕಾಫಿ ಮುಂತಾದವು ಜಿಐ ಟ್ಯಾಗ್‌ ಪಡೆದಿವೆ.

Recent Articles

spot_img

Related Stories

Share via
Copy link
Powered by Social Snap