‌ಬಾಗಲಕೋಟೆ : ಮತ್ತೆ ಶುರುವಾಗಿದೆ ಆಮಿಷಗಳ ಪಾಲಿಟಿಕ್ಸ್

ಬಾಗಲಕೋಟೆ: 

      ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಮತದಾರರಿಗೆ ವಿವಿಧ ಗೃಹೋಪಯೋಗಿ ಉಪಕರಣಗಳನ್ನು ವಿತರಿಸುವ ಟ್ರೆಂಡ್ ಮತ್ತೆ ಶುರುವಾಗಿದೆ. ಆದರೆ ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ಬೆಂಬಲಿಗರು ಹಂಚಿಕೆ ಮಾಡುತ್ತಿದ್ದ ಸಕ್ಕರೆಯನ್ನ ಮಹಿಳೆಯೊಬ್ಬಳು ತಿರಸ್ಕರಿಸಿ ಸಕ್ಕರೆ ಚೀಲ ಮರಳಿ ಕೊಂಡೊಯ್ಯುವಂತೆ ಹೇಳಿರೋ ವಿಡಿಯೋ ಇದೀಗ ವೈರಲ್ ಆಗಿದೆ.

    ಮೂಲಗಳ ಪ್ರಕಾರ, ಗುರುವಾರ ನಿರಾಣಿ ಬೆಂಬಲಿಗರು ಬಿಳಗಿ ತಾಲೂಕಿನ ಗಲಗಲಿಯಲ್ಲಿರುವ ಮಹಿಳೆಯ ಮನೆಗೆ ಸಕ್ಕರೆ ಚೀಲವನ್ನು ತಂದಿದ್ದಾರೆ. ಮಹಿಳೆ ಅದನ್ನು ಸ್ವೀಕರಿಸಲು ನಿರಾಕರಿಸಿದಾಗ ಬೆಂಬಲಿಗರು ಬಲವಂತವಾಗಿ ಚೀಲವನ್ನು ಒಳಗೆ ತೆಗೆದುಕೊಂಡರು. ಆದರೆ, ಮಹಿಳೆ ಚೀಲವನ್ನು ಹೊತ್ತುಕೊಂಡು ಮನೆಯ ಹೊರಗೆ ಇಟ್ಟಿದ್ದು, ಸ್ವೀಕರಿಸಲು ನಿರಾಕರಿಸಿದ್ದಾರೆ.

   ಈ ದೃಶ್ಯವೆಲ್ಲಾ ವೀಡಿಯೋದಲ್ಲಿ ಸೆರೆಯಾಗಿದೆ. ಮಹಿಳೆಯರ ವರ್ತನೆ ಬೆಂಬಲಿಸಿ ವೀಡಿಯೋವನ್ನು ಸಾಮಾಜಿಕ ಕಾರ್ಯಕರ್ತ ಯಲ್ಲಪ್ಪ ಹೆಗಡೆ ಸೋಶಿಯಲ್ ಮಿಡಿಯಾದಲ್ಲಿ ಶೇರ್ ಮಾಡಿದ್ದಾರೆ. ಇದೀಗ ಮಹಿಳೆಯರ ವರ್ತನೆಗೆ ಭಾರೀ ಬೆಂಬಲ ವ್ಯಕ್ತವಾಗುತ್ತಿದೆ.

   ಈ ತಾಯಿಗಿರುವ ನಿಯತ್ತಿಗೆ ಜನತೆಯಿಂದ ಧನ್ಯವಾದಗಳು. ಆಸೆ, ಆಮಿಷಗಳಿಗೆ ಬಲಿಯಾಗದೆ ಪ್ರಬುದ್ಧತೆ ತೋರುವ ಇಂತಹ ಜನರಿಂದ ಮಾತ್ರ. ಪ್ರಜಾಪ್ರಭುತ್ವ ಉಳಿಯಲು ಸಾಧ್ಯ, ಇಂತಹ ಆಲೋಚನೆ ಎಲ್ಲ ಮತದಾರರಿಗೂ ಬರಬೇಕಿದೆ ಎಂದು ವೀಡಿಯೋ ಜೊತೆಗೆ ಪೋಸ್ಟ್ ಕೂಡ ವೈರಲ್ ಆಗಿದೆ.

  ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap