ಮೈಸೂರು:
650ಕ್ಕೂ ಹೆಚ್ಚು ಜನರು ಸತತವಾಗಿ ಅಹೋರಾತ್ರಿ 33 ಗಂಟೆ 33 ನಿಮಿಷ 33 ಸೆಕೆಂಡ್ ಹನುಮಾನ್ ಚಾಲೀಸ ಪಾರಾಯಣ ಮಾಡುವ ಮೂಲಕ ಗಿನ್ನಿಸ್ ವಿಶ್ವ ದಾಖಲೆಯಾಗಿದೆ.
ನಗರದ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರ ಅಧ್ವರ್ಯದಲ್ಲಿ ಅವಧೂತ ದತ್ತ ಪೀಠದ ನಾದಮಂಟಪದಲ್ಲಿ 650ಕ್ಕೂ ಹೆಚ್ಚು ಜನರು ಸತತವಾಗಿ ಅಹೋರಾತ್ರಿ 33 ಗಂಟೆ 33 ನಿಮಿಷ 33 ಸೆಕೆಂಡ್ ಹನುಮಾನ್ ಚಾಲೀಸ ಪಾರಾಯಣದೊಂದಿಗೆ ಹನುಮ ಜಯಂತಿಯನ್ನು ಸಂಪನ್ನಳಿಸಿದ್ದಾರೆ, ಈ ಹಿಂದೆ 2022ನೇ ಜುಲೈ 23 ರಂದು ದಾಖಲೆಯಾಗಿದ್ದ ವಡೋದರದ ಸ್ವಾಮಿನಾರಾಯಣ ಭಜನ್ ಯಾಗ, ಸದ್ಗುರು ಶ್ರೀ ಜ್ಞಾನಿವಂದಸ್ಜಿ ಸ್ವಾಮಿ – ಕುಂಡಲಧಾಮ ಅವರು 27 ಗಂಟೆ 27 ನಿಮಿಷ 27 ಸೆಕೆಂಡ್ ಪಾರಾಯಣ ಮಾಡಿ ಮಾಡಿದ್ದ ದಾಖಲೆ ಸೇರ್ಪಡೆಯಾಗಿತ್ತು,
