ಪ್ರಿಯಕರನಿಗಾಗಿ ಜೈಲಿಗೆ ಗಾಂಜಾ ತರುತ್ತಿದ್ದ ಯುವತಿಯ ಸೆರೆ

0
57

ಮಂಗಳೂರು:

      ಜೈಲಿನಲ್ಲಿದ್ದ ಪ್ರೇಮಿಗೆ ಗಾಂಜಾ ಕೊಡಲು ಹೋಗಿ ಮಂಗಳೂರು ವಿವಿಯ ಪತ್ರಿಕೋದ್ಯಮ ವಿದ್ಯಾರ್ಥಿನಿಯೊಬ್ಬಳು ಸಿಕ್ಕಿ ಬದ್ದಿರುವ ಘಟನೆ ನಡೆದಿದೆ. 

      ಇದೊಂದು ಲವ್‌ಜಿಹಾದ್ ಪ್ರಕರಣ ಎಂದು ಅರೋಪಿಸಲಾಗುತ್ತಿದೆ. ನಿನ್ನೆ ಮಂಗಳೂರು ಜೈಲಿಗೆ ವಿಚಾರಣಾಧೀನ ಕೈದಿಯನ್ನು ಭೇಟಿ ಯಾಗಲು ಬಂದಿದ್ದ ಯುವತಿಯನ್ನು ಸಿಸಿಬಿ ಪೊಲೀಸರು ಗಾಂಜಾ ಪ್ಯಾಕೆಟ್ ಸಮೇತ ಬಂಧಿಸಿದ್ದರು. ಜೈಲಿನಲ್ಲಿರುವ ತನ್ನ ಪ್ರಿಯಕರನಿಗೆ ಗಾಂಜಾ ನೀಡಲು ಬಂದಿದ್ದಾಗ ಯುವತಿ ಪೊಲೀಸರ ಬಲೆಗೆ ಬಿದ್ದಿದ್ದಾಳೆ. 

      ಮೂಲತಃ ಸುಳ್ಯ ಮೂಲದವಳಾದ ಯುವತಿ, ಮಂಗಳೂರಿನ ವಿಶ್ವವಿದ್ಯಾಲಯದ ಪತ್ರಿಕೊದ್ಯಮ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದು, ಆಕೆಗೆ ಜೈಲಿನಲ್ಲಿರುವ ಕೊಲೆ ಆರೋಪಿ ಮುಸ್ತಾಫ ಎಂಬಾತನೊಂದಿಗೆ ಸ್ನೇಹ ಬೆಳೆದಿತ್ತು. ನಂತರ ಸ್ನೇಹ ಪ್ರೇಮಕ್ಕೆ ತಿರುಗಿತ್ತು. ಹಲವಾರು ಅಪರಾಧ ಪ್ರಕರಣಗಳಲ್ಲಿ ಜೈಲು ಸೇರಿರುವ ಮುಸ್ತಫಾ ಗಾಂಜಾ ವ್ಯಸನಿ ಆಗಿದ್ದ. ಮುಸ್ತಾಫ ಜೈಲಿನಲ್ಲಿ ಇದ್ದುಕೊಂಡು ಯುವತಿಯ ಕೈಯಲ್ಲಿ ಗಾಂಜಾ ತರಿಸಿ ಕೊಳ್ಳುತ್ತಿದ್ದ ಎನ್ನಲಾಗಿದೆ.

  ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

LEAVE A REPLY

Please enter your comment!
Please enter your name here