ಬೆಂಗಳೂರು:
ಕೋವಿಡ್-19 ಮಾರಾಣಾಂತಿಕ ಸಾಂಕ್ರಾಮಿಕ ಭೀತಿಯೇ ಇನ್ನೂ ಜನರ ಮನಸ್ಸಿನಿಂದ ಹೋಗಿಲ್ಲ.. ಆಗಲೇ ಕುದುರೆಗಳಲ್ಲಿ ಗ್ಲಾಂಡರ್ಸ್ ರೋಗ (ಗ್ರಂಥಿ ರೋಗ)ಪತ್ತೆಯಾಗುವ ಮೂಲಕ ನಗರದಲ್ಲಿ ಮತ್ತೊಂದು ಸಾಂಕ್ರಾಮಿಕ ರೋಗ ಭೀತಿ ಆರಂಭವಾಗಿದೆ.
ಬೆಂಗಳೂರು ಉತ್ತರ ತಾಲೂಕಿನ ಡಿ.ಜೆ.ಹಳ್ಳಿಯ ಕುದುರೆಯೊಂದರಲ್ಲಿ ಗ್ಲಾಂಡರ್ಸ್ ರೋಗೋದ್ರೇಕ ದೃಢಪಟ್ಟಿದ್ದು, ರೋಗಗ್ರಸ್ಥ ಕುದುರೆ ಸಾವನ್ನಪ್ಪಿದ್ದು, ಮತ್ತೊಂದು ಕುದುರೆಗೆ ಸೋಂಕು ತಗುಲಿದೆ ಎಂದು ಹೇಳಲಾಗಿದೆ.
ರಾಜ್ಯ ಆರೋಗ್ಯ ಇಲಾಖೆಯು ಈ ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸಲು ತ್ವರಿತವಾಗಿ ಜಾಗೃತಿ ಮೂಡಿಸುತ್ತಿದೆ. ಸೋಂಕು ಪೀಡಿತ ಮತ್ತೊಂದು ಕುದುರೆಯನ್ನೂ ಕೂಡ ವೈಜ್ಞಾನಿಕವಾಗಿ ಕೊಲ್ಲುವ ಕುರಿತು ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.
ಪಶುಸಂಗೋಪನೆ ಮತ್ತು ಮೀನುಗಾರಿಕಾ ಇಲಾಖೆ ಪ್ರಕಾರ, ಬೆಂಗಳೂರು ಉತ್ತರ ತಾಲೂಕಿನ ಡಿಜೆ ಹಳ್ಳಿಯ ಮೋದಿ ರಸ್ತೆಯಲ್ಲಿರುವ ಖಾಲಿದ್ ಷರೀಫ್ ಎಂಬುವವರಿಗೆ ಸೇರಿದ ಕುದುರೆಗಳಲ್ಲಿ ಗ್ಲಾಂಡರ್ಸ್ ರೋಗ ಕಾಣಿಸಿಕೊಂಡಿದೆ. ಸಾಂಕ್ರಾಮಿಕ ಮತ್ತು ಸಾಂಕ್ರಾಮಿಕ ರೋಗಗಳ ಪ್ರಾಣಿಗಳ ನಿಯಂತ್ರಣ ಕಾಯ್ದೆ-2009 ಅನ್ವಯ ರೋಗ ಗ್ರಸ್ಥ ಕುದುರೆ ಇದ್ದ ಕೇಂದ್ರದಿಂದ 5-ಕಿಮೀ ವ್ಯಾಪ್ತಿಯನ್ನು ‘ಸೋಂಕಿತ ವಲಯ’ ಎಂದು ಘೋಷಿಸಲಾಗಿದೆ ಮತ್ತು 5-25 ಕಿಮೀ ವ್ಯಾಪ್ತಿಯ ಪ್ರದೇಶವನ್ನು ‘ಕಣ್ಗಾವಲು ವಲಯ’ ಎಂದು ಘೋಷಿಸಲಾಗಿದೆ.
ಅಧಿಸೂಚಿತ ಪ್ರದೇಶದ ಒಳಗೆ ಮತ್ತು ಹೊರಗೆ ಕುದುರೆಗಳು, ಕತ್ತೆಗಳು ಮತ್ತು ಹೇಸರಗತ್ತೆಗಳನ್ನು ಕೂಡಲೇ ಪರೀಕ್ಷೆಗೊಳಪಡಿಸುವಂತೆ ಅಧಿಕಾರಿಗಳು ಸೂಚಿಸಿದ್ದಾರೆ. ಜಿಲ್ಲೆಯಾದ್ಯಂತ ಸುಮಾರು 1,200 ಕುದುರೆಗಳು, ಕತ್ತೆಗಳು ಮತ್ತು ಹೇಸರಗತ್ತೆಗಳನ್ನು ಪರೀಕ್ಷೆಗೊಳಪಡಿಸಲಾಗುತ್ತಿದೆ.
ಈ ಪ್ರದೇಶದ ಒಳಗೆ ಮತ್ತು ಹೊರಗೆ ಕುದುರೆ, ಕತ್ತೆ ಮತ್ತು ಹೇಸರಗತ್ತೆಗಳ ಚಲನವಲನವನ್ನು ನಿರ್ಬಂಧಿಸಲಾಗಿದೆ.
ಮೌಲ್ಯಮಾಪನದ ಸಮಯದಲ್ಲಿ, ಎರಡು ಕುದುರೆಗಳು ಸೋಂಕಿಗೆ ಒಳಗಾಗಿರುವುದು ಕಂಡುಬಂದಿದೆ. ಮಂಗಳವಾರ ಒಂದು ಕುದುರೆ ಸಾವನ್ನಪ್ಪಿದ್ದು, ರೋಗಕ್ಕೆ ಯಾವುದೇ ಚಿಕಿತ್ಸೆ ಇಲ್ಲದ ಕಾರಣ ಬುಧವಾರ ಇನ್ನೊಂದು ಕುದುರೆಗೆ ದಯಾಮರಣ ನೀಡಲು ನಿರ್ಧರಿಸಲಾಗಿದೆ ಎಂದು ಹೇಳಿದ್ದಾರೆ.
ಅಂತೆಯೇ “ನಾವು ರೋಗಕ್ಕೆ ತುತ್ತಾದ ಎಲ್ಲಾ ಕುದುರೆಗಳನ್ನು ಕೊಲ್ಲುತ್ತೇವೆ. ಇದನ್ನು ಇತರ ಎರಡು ಜಿಲ್ಲೆಗಳಲ್ಲಿ ಮಾಡಲಾಗಿದೆ. ಕೇಂದ್ರ ಸರ್ಕಾರದ ಆದೇಶದಂತೆ, ಮಾಲೀಕರಿಗೆ ಪ್ರತೀ ಕುದುರೆಗೆ 25,000 ರೂ. ಮತ್ತು ಕತ್ತೆ/ಕುದುರೆ/ ಹೇಸರಗತ್ತೆಗಳಿಗೆ ರೂ. 16,000 ಪರಿಹಾರ ನೀಡಲಾಗುತ್ತದೆ” ಎಂದು ಪಾಳೇಗಾರ ಹೇಳಿದರು. ಎಂದರು.