ನಾಯಕನಹಟ್ಟಿ ಸಮೀಪದ ಮನುಮೈನಹಟ್ಟಿಯಲ್ಲಿ ಸಂಭ್ರಮದ ಗೋಧಿ ಹಬ್ಬ ಆಚರಣೆ

ನಾಯಕನಹಟ್ಟಿ

   ಮನುಮೈನಹಟ್ಟಿ ಶೈಕ್ಷಣಿಕ ಪ್ರಗತಿಗೆ ಗ್ರಾಮದ ಪ್ರತಿಯೊಬ್ಬರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಸಂಸ್ಕಾರ ಕಲಿಸಿ ನಿವೃತ್ತ ಕೆಎಎಸ್ ಅಧಿಕಾರಿ ಎನ್. ರಘುಮೂರ್ತಿ ಗ್ರಾಮಸ್ಥರಿಗೆ ಕಿವಿಮಾತು ಹೇಳಿದರು.

   ಬುಧವಾರ ಹೋಬಳಿಯ ಎನ್ ಮಹದೇವಪುರ ಗ್ರಾ.ಪಂ. ವ್ಯಾಪ್ತಿಯ ಮನುಮೈನಹಟ್ಟಿ ಗ್ರಾಮದ ಶ್ರೀ ಸದ್ಗುರು ಸೇವಾಲಾಲ್ ಹಾಗೂ ಶ್ರೀ ಮಾರಿಯಮ್ಮ ದೇವಿಯ ತೀಜ್ (ಗೋಧಿ) ಹಬ್ಬದಲ್ಲಿ ಭಾಗವಹಿಸಿ ನಂತರ ಮಾಧ್ಯಮದೊಂದಿಗೆ ಮಾತನಾಡಿದ ಅವರು. ದಕ್ಷಿಣ ಭಾರತದಲ್ಲಿ ಸಂಸ್ಕೃತಿಯವಾಗಿ ಶ್ರೀಮಂತವಾದ ಸಮಾಜ ಇದ್ದರೆ ಅದು ಬಂಜಾರ ಸಮುದಾಯ ಶ್ರೀ ಸದ್ಗುರು ಸೇವಾಲಾಲ್ ಹಾಕಿಕೊಟ್ಟ ದಾರಿಯಲ್ಲಿ ಬಂಜಾರ ಸಮುದಾಯ ಇಡೀ ದಕ್ಷಿಣ ಭಾರತದಲ್ಲಿ ಸಾಂಸ್ಕೃತಿಕವಾಗಿ ನೆಲೆಗಟ್ಟಿನಲ್ಲಿ ಸ್ವಾಭಿಮಾನ ಇಟ್ಟುಕೊಂಡು ಬಂಜಾರ ಸಮುದಾಯ ಬದುಕುತ್ತಿದ್ದಾರೆ.

   ಇತ್ತೀಚಿನ ದಿನಗಳಲ್ಲಿ ಒಳ್ಳೆಯ ಶಿಕ್ಷಣ ಪಡೆದುಕೊಂಡು ಈ ರಾಷ್ಟ್ರದಲ್ಲಿ ಸಾಂಸ್ಕೃತಿಕ ಮತ್ತು ಧಾರ್ಮಿಕ ಆಚರಣೆಗಳು ಇರುವುದರಿಂದ ದಕ್ಷಿಣ ಭಾರತ ಹಾಗೂ ಈ ಭಾಗದಲ್ಲಿ ಜನ ನೆಮ್ಮದಿಯಿಂದ ಇದ್ದಾರೆ. ಇಡೀ ಮನುಕುಲಕ್ಕೆ ಸಮಾಜಕ್ಕೆ ಬಂಜಾರ ಸಮುದಾಯ ನಮಗೆಲ್ಲಾ ಪ್ರೇರಣೆಯಾಗಿದೆ ಆದ್ದರಿಂದ ಬಂಜಾರ ಸಮುದಾಯ ಈ ಧಾರ್ಮಿಕ ಆಚರಣೆ ಕಾರ್ಯಗಳ ಯಾವತ್ತೂ ಕೈ ಬಿಡಬಾರದು ಈ ಗ್ರಾಮದಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯ ಸಹ ಅಂಬೇಡ್ಕರ್ ಮತ್ತು ಬಸವಣ್ಣನ ತತ್ವ ಆದರ್ಶಗಳನ್ನ ಮೈಗೂಡಿಸಿಕೊಂಡು ಉತ್ತಮ ಬದುಕು ಕಟ್ಟಿಕೊಳ್ಳಬೇಕು ಎಂದರು.

    ಇದೇ ಸಂದರ್ಭದಲ್ಲಿ ಮನುಮೈನಹಟ್ಟಿ ಶ್ರೀ ಸೇವಾಲಾಲ್ ಸೇವಾ ಸಮಿತಿ. ಶ್ರೀ ದಂಡಿನ ಮಾರಮ್ಮ ಸೇವಾ ಸಮಿತಿ, ಗ್ರಾಮದ ನಾಯಕ್. ಡಾವ್ .ಖರಭಾರಿ. ಗ್ರಾಮ ಪಂಚಾಯಿತಿ ಸದಸ್ಯರು ಯುವಕರು ಮಹಿಳೆಯರು ಹಾಗೂ ಎಲ್ಲಾ ಮನುಮೈನಹಟ್ಟಿ ಗ್ರಾಮದ ಸಮಸ್ತ ಗ್ರಾಮಸ್ಥರು ಇದ್ದರು

Recent Articles

spot_img

Related Stories

Share via
Copy link