ನವದೆಹಲಿ:
ಬಜೆಟ್ ನಲ್ಲಿ ಚಿನ್ನದ ಮೇಲಿನ ಅಮದು ಸುಂಕ ಕಡಿಮೆಯಾಗಿರುವ ಪರಿಣಾಮ ಇಂದು ಚಿನ್ನದ ದರ ಕುಸಿತ ಕಂಡಿದೆ.24 ಕ್ಯಾರಟ್ ಚಿನ್ನದ ಬೆಲೆ ಪ್ರತಿ 10 ಗ್ರಾಮ್ ಗೆ 4,332.0 ರೂಪಾಯಿಗಳಷ್ಟು ಕಡಿಮೆಯಾಗಿದ್ದು ಪ್ರತಿ ಗ್ರಾಮ್ ಬೆಲೆ 7071.6 ರೂಗಳಷ್ಟಾಗಿದೆ.
22 ಕ್ಯಾರಟ್ ಹಳದಿ ಲೋಹದ ದರ ಪ್ರತಿ ಗ್ರಾಮ್ ಗೆ 6,477.5 ರೂಪಾಯಿಗಳಷ್ಟಿದ್ದು, 10 ಗ್ರಾಮ್ ಚಿನ್ನದ ದರದಲ್ಲಿ 3,970.0 ರೂಗಳಷ್ಟು ಕುಸಿತ ದಾಖಲಾಗಿದೆ.24 ಕ್ಯಾರಾಟ್ ಚಿನ್ನದ ದರ ಕಳೆದ 1 ವಾರದಿಂದ ಶೇ.-0.94 ರಷ್ಟು ವ್ಯತ್ಯಾಸವಾಗಿದ್ದು, ಕಳೆದ ತಿಂಗಳು ಶೇ.-3.36 ರಷ್ಟು ವ್ಯತ್ಯಯವಾಗಿತ್ತು. ಎಂಸಿಎಕ್ಸ್‌ನಲ್ಲಿ ಬೆಳ್ಳಿ ಬೆಲೆಯು ಗಮನಾರ್ಹ ಇಳಿಕೆ ಕಂಡಿದ್ದು, ಪ್ರತಿ ಕೆಜಿಗೆ 88,995ರೂಗಳಿಂದ 84,275 ರೂಪಾಯಿಗಳಿಗೆ ಇಳಿದಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ
