ಚಿನ್ನ, ಬೆಳ್ಳಿ ಬೆಲೆಯಲ್ಲಿ ಭಾರೀ ಇಳಿಕೆ

ಬೆಂಗಳೂರು:

       ಚಿನ್ನ, ಬೆಳ್ಳಿ ಕೊಳ್ಳುವುದೆಂದರೆ ಎಲ್ಲರಿಗೂ ಆಸಕ್ತಿಯ ವಿಷಯ. ಅದರಲ್ಲೂ ಮಹಿಳೆಯರಿಗೆ ಹೊಸ ಹೊಸ ಶೈಲಿಯ ಆಭರಣಗಳನ್ನು ಖರೀದಿಸಬೇಕು ಎಂಬ ಬಯಕೆ ಸದಾ ಇರುತ್ತದೆ. ಇದಕ್ಕಾಗಿಯೇ ತಾವು ವೃತ್ತಿ ಜೀವನಕ್ಕೆ ಕಾಲಿಟ್ಟನಂತರ ಒಡವೆ ಮಾಡಿಸಲು ಒಂದಷ್ಟು ಹಣ ಕೂಡಿಡುತ್ತಾರೆ. ಕೇವಲ ಆಭರಣದ ದೃಷ್ಟಿಯಿಂದಲ್ಲದೇ ಹೂಡಿಕೆಯ ರೂಪದಲ್ಲಿಯೂಚಿನ್ನಉತ್ತಮ ಆಯ್ಕೆ ಎಂದು ತಜ್ಞರು ಹೇಳುತ್ತಾರೆ.

          ಇದಲ್ಲದೇ ಬಹಳಷ್ಟು ಜನರಿಗೆ ಆಪತ್ಕಾಲದಲ್ಲಿ ಸಕಾಲಕ್ಕೆ ಆಪತ್ಬಾಂಧವನಾಗಿ ಒದಗುವುದು ಕೂಡಿಟ್ಟ ಆಭರಣಗಳು. ಆದರೆ ಆಭರಣಗಳ ಖರೀದಿಗೆ ಸರಿಯಾದ ಸಮಯ ಯಾವುದು ಎಂಬ ಬಗ್ಗೆ ಮಾತ್ರ ಗೊಂದಲ ಇರುತ್ತದೆ.

         ಹೀಗಾಗಿ ಚಿನ್ನ, ಬೆಳ್ಳಿ ಖರೀದಿಸುವ ಮುನ್ನ ದರ ನಿಗದಿಯ ಬಗ್ಗೆ ಒಮ್ಮೆ ಪರಿಶೀಲಿಸಿ. ಪ್ರತಿನಿತ್ಯ ಚಿನ್ನ , ಬೆಳ್ಳಿ ಬೆಲೆ  ಎಷ್ಟಿದೆ? ಎಂಬ ಕುರಿತಾಗಿ ಕುತೂಹಲ ಇರುತ್ತದೆ. ಹೀಗಿರುವಾಗ ಇಂದು (ಜನವರಿ 28, ಶುಕ್ರವಾರ) ಚಿನ್ನ, ಬೆಳ್ಳಿ ದರ ದೇಶದ ನಗರಗಳಲ್ಲಿ ಇಳಿಕೆಯಾಗಿದ್ದು, ಯಾವ ಯಾವ ನಗರಗಳಲ್ಲಿ ಎಷ್ಟಿದೆ? ಎಂಬ ವಿವರ ಈ ಕೆಳಗಿನಂತಿದೆ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ದರ 

ಬೆಂಗಳೂರಿನಲ್ಲಿ 22 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ 45,500 ರೂಪಾಯಿ ಹಾಗೂ 100 ಗ್ರಾಂ ಚಿನ್ನಕ್ಕೆ 4,55,000 ರೂಪಾಯಿ ನಿಗದಿಯಾಗಿದೆ. ದೈನಂದಿನ ದರ ಬದಲಾವಣೆಯಲ್ಲಿ ಸುಮಾರು 4,000 ರೂಪಾಯಿ ಇಳಿಕೆ ಆಗಿದೆ. ಅದೇ ರೀತಿ 24 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ 49,640 ರೂಪಾಯಿ ಹಾಗೂ 100 ಗ್ರಾಂ ಚಿನ್ನಕ್ಕೆ 4,96,400 ರೂಪಾಯಿ ನಿಗದಿಯಾಗಿದೆ.

ದೈನಂದಿನ ದರ ಬದಲಾವಣೆಯಲ್ಲಿ 4,600 ರೂಪಾಯಿಯಷ್ಟು ಇಳಿಕೆ ಕಂಡು ಬಂದಿದೆ. ಬೆಳ್ಳಿ ದರದಲ್ಲಿ ಇಂದು ಕೊಂಚ ಏರಿಕೆ ಕಂಡು ಬಂದಿದ್ದು, ಕೆಜಿ ಬೆಳ್ಳಿಗೆ 67,700 ರೂಪಾಯಿ ದಾಖಲಾಗಿದೆ. ಸುಮಾರು 800 ರೂಪಾಯಿಯಷ್ಟು ಇಳಿಕೆ ಕಂಡು ಬಂದಿದೆ.

ಚೆನ್ನೈನಲ್ಲಿ ಚಿನ್ನ, ಬೆಳ್ಳಿ ದರ 

ಚೆನ್ನೈನಲ್ಲಿ 22 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ 45,740 ರೂಪಾಯಿ ಹಾಗೂ 100 ಗ್ರಾಂ ಚಿನ್ನಕ್ಕೆ 4,57,400 ರೂಪಾಯಿ ನಿಗದಿಯಾಗಿದೆ. ಸುಮಾರು 6,300 ರೂಪಾಯಿಯಷ್ಟು ಇಳಿಕೆ ಕಂಡು ಬಂದಿದೆ. ಅದೇ ರೀತಿ 24 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ 49,900 ರೂಪಾಯಿ ಹಾಗೂ 100 ಗ್ರಾಂ ಚಿನ್ನಕ್ಕೆ 4,99,000 ರೂಪಾಯಿ ನಿಗದಿಯಾಗಿದೆ.

ಸುಮಾರು 6,900 ರೂಪಾಯಿಯಷ್ಟು ಇಳಿಕೆ ಕಂಡು ಬಂದಿದೆ. ಚೆನ್ನೈನಲ್ಲಿ ಬೆಳ್ಳಿ ಬೆಲೆಯಲ್ಲಿ ಕೊಂಚ ಇಳಿಕೆ ಕಂಡು ಬಂದಿದ್ದು ಕೆಜಿ ಬೆಳ್ಳಿಗೆ 67,700 ರೂಪಾಯಿ ನಿಗದಿಯಾಗಿದೆ. ಸುಮಾರು 800 ರೂಪಾಯಿಯಷ್ಟು ಇಳಿಕೆ ಕಂಡು ಬಂದಿದೆ.

ಹೈದರಾಬಾದ್​ನಲ್ಲಿ ಚಿನ್ನ, ಬೆಳ್ಳಿ ದರ

ಹೈದರಾಬಾದ್​ನಲ್ಲಿ 22 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ 45,500 ರೂಪಾಯಿ ಹಾಗೂ 100 ಗ್ರಾಂ ಚಿನ್ನಕ್ಕೆ 4,55,000 ರೂಪಾಯಿ ನಿಗದಿಯಾಗಿದೆ. ದೈನಂದಿನ ದರ ಬದಲಾವಣೆಯಲ್ಲಿ ಸುಮಾರು 4,000 ರೂಪಾಯಿಯಷ್ಟು ಇಳಿಕೆ ಕಂಡು ಬಂದಿದೆ. 24 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ 49,640 ರೂಪಾಯಿ ಹಾಗೂ 100 ಗ್ರಾಂ ಚಿನ್ನಕ್ಕೆ 4,96,400 ರೂಪಾಯಿ ನಿಗದಿಯಾಗಿದೆ.

ದೈನಂದಿನ ದರ ಬದಲಾವಣೆಯಲ್ಲಿ ಸುಮಾರು 4,600 ರೂಪಾಯಿ ಇಳಿಕೆ ಆಗಿದೆ. ಅದೇ ರೀತಿ ಬೆಳ್ಳಿ ದರದಲ್ಲಿ ಇಂದು ಕೊಂಚ ಪ್ರಮಾಣದಲ್ಲಿ ಇಳಿಕೆ ಕಂಡು ಬಂದಿದ್ದು, ಕೆಜಿ ಬೆಳ್ಳಿಗೆ 67,700 ರೂಪಾಯಿ ನಿಗದಿಯಾಗಿದೆ. ಸುಮಾರು 800 ರೂಪಾಯಿಯಷ್ಟು ಇಳಿಕೆ ಆಗಿದೆ.

ಮುಂಬೈನಲ್ಲಿ ಚಿನ್ನ, ಬೆಳ್ಳಿ ದರ 

ಮುಂಬೈನಲ್ಲಿ ಇಂದು 22 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ 45,500 ರೂಪಾಯಿ ಹಾಗೂ 100 ಗ್ರಾಂ ಚಿನ್ನಕ್ಕೆ 4,55,000 ರೂಪಾಯಿ ನಿಗದಿಯಾಗಿದೆ. ಸುಮಾರು 4,000 ರೂಪಾಯಿಯಷ್ಟು ಇಳಿಕೆ ಆಗಿದೆ. ಅದೇ ರೀತಿ 24 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ 49,640 ರೂಪಾಯಿ ಹಾಗೂ 100 ಗ್ರಾಂ ಚಿನ್ನಕ್ಕೆ 4,96,400 ರೂಪಾಯಿ ನಿಗದಿಯಾಗಿದೆ.

ಸುಮಾರು 1,900 ರೂಪಾಯಿಯಷ್ಟು ಇಳಿಕೆ ಆಗಿದೆ. ಬೆಳ್ಳಿ ಬೆಲೆಯಲ್ಲಿ ಇಂದು ಕೊಂಚ ಇಳಿಕೆ ಕಂಡಿದ್ದು, ಕೆಜಿ ಬೆಳ್ಳಿಗೆ 63,200 ರೂಪಾಯಿ ನಿಗದಿಯಾಗಿದೆ. ಸುಮಾರು 1,000 ರೂಪಾಯಿಯಷ್ಟು ಇಳಿಕೆ ಕಂಡು ಬಂದಿದೆ.

           ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link