ನಟಿ ಹೇಮಲತಾ ಮನೆಯಲ್ಲಿ ಕಳ್ಳತನ; ರಾಜ್ಯೋತ್ಸವ ಪ್ರಶಸ್ತಿಯ 22 ಗ್ರಾಂ ಚಿನ್ನದ ಪದಕ ಮಾಯ

ತಿಪಟೂರು

     ಪಟ್ಟಣದ ವಿನಾಯಕ ನಗರದ ನಟಿ ಹೇಮಲತಾ ಅವರ ನಿವಾಸದಲ್ಲಿ ಕಳ್ಳತನ ನಡೆದಿದೆ. ರಂಗಭೂಮಿ ಕ್ಷೇತ್ರದಲ್ಲಿ ಹೇಮಲತಾ ಅವರ ಕೊಡುಗೆಯನ್ನು ಗುರುತಿಸಿ ನೀಡಲಾಗಿದ್ದ ರಾಜ್ಯೋತ್ಸವ ಪ್ರಶಸ್ತಿ ಪದಕವನ್ನು ಕಳವು ಮಾಡಲಾಗಿದೆ. ಕಳೆದ 2 ದಿನಗಳ ಹಿಂದೆ ಮನೆ ಕೆಲಸದವರು, 22 ಗ್ರಾಂ ಚಿನ್ನದ ಪದಕವನ್ನು ಕಳ್ಳತನ ಮಾಡಿದ್ದಾರೆ ಎಂದು ತಿಳಿದುಬಂದಿದೆ.

   ಒಂದು ತಿಂಗಳ ಹಿಂದೆಯೂ ಮನೆ ಕೆಲಸದವರಿಂದ ಸುಮಾರು 25 ಗ್ರಾಂ ಚಿನ್ನದ ಸರ ಕಳ್ಳತನ ಮಾಡಲಾಗಿತ್ತು. ಆಗ ಪೊಲೀಸರು ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು. ತಡರಾತ್ರಿ ಕೂಡ ಮನೆ ಕೆಲಸದವರಿಂಲೇ ಪುನಃ ಕಳ್ಳತನ ನಡೆದಿದೆ ಎನ್ನಲಾಗಿದೆ.

   ಡಿವೈಎಸ್‌ಪಿ ಅವರ ಮಾರ್ಗದರ್ಶನದಂತೆ ರಚಿಸಿದ್ದ ಜಯಲಕ್ಷ್ಮಮ್ಮ ನೇತೃತ್ವದಲ್ಲಿ ತಂಡವು ಕಾರ್ಯಾಚರಣೆ ನಡೆಸಿ ಕಳ್ಳರನ್ನು ಬಂಧಿಸಿದೆ. ತಿಪಟೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈ ಚಾಲಾಕಿ ಕಳ್ಳರು ಬೇರೆ ಎಲ್ಲೆಲ್ಲಿ ತಮ್ಮ ಕೈಚಳಕ ತೋರಿಸಿದ್ದಾರೆ ಎಂಬುದು ಪೊಲೀಸ್ ತನಿಖೆಯ ನಂತರ ಹೊರ ಬೀಳಬೇಕಾಗಿದೆ.

Recent Articles

spot_img

Related Stories

Share via
Copy link