ರಾಜ್ಯದ ರೈತರಿಗೆ ಗುಡ್ ನ್ಯೂಸ್: ಇನ್ಮುಂದೆ ಪೋಡಿ, ಹದ್ದುಬಸ್ತು, ಇತರೆ ನಕ್ಷೆಗಳು ‘ಆನ್ ಲೈನ್’ನಲ್ಲೇ ಲಭ್ಯ

ಬೆಂಗಳೂರು:

              ಇದುವರೆಗೆ ರೈತರು ಕಂದಾಯ ಇಲಾಖೆಯ ಕೆಲ ದಾಖಲೆಗಳನ್ನು ಪಡೆಯೋದಕ್ಕಾಗಿ ದಿನಂಪ್ರತಿ ಕಚೇರಿಗೆ ಅಲೆಯಬೇಕಾಗಿತ್ತು. ಆದ್ರೇ ಇದಕ್ಕೆ ಇನ್ಮುಂದೆ ಬ್ರೇಕ್ ಬೀಳಲಿದೆ. ಪೋಡಿ, ಹದ್ದುಬಸ್ತು, ಇತರೆ ನಕ್ಷೆಗಳನ್ನು ಇನ್ನೂ ಆನ್ ಲೈನ್ ನಲ್ಲಿಯೇ ಪಡೆದುಕೊಳ್ಳಬಹುದಾಗಿದೆ. ರೈತರು ತಮ್ಮ ಜಮೀನಿಗೆ ಸಂಬಂಧಿಸಿದ 11ಇ, ಪೋಡಿ, ಭೂ ಪರಿವರ್ತನೆ ಸ್ಕೆಚ್, ಹದ್ದುಬಸ್ತು ಮತ್ತು ಇತರೆ ನಕ್ಷೆಗಳನ್ನು ಇನ್ಮುಂದೆ ಆನ್ ಲೈನ ನಲ್ಲಿಯೇ ಪಡೆದುಕೊಳ್ಳಬಹುದಾಗಿದೆ.

ದೈಹಿಕ, ಮಾನಸಿಕ, ಭಾವನಾತ್ಮಕ ಖಾಯಿಲೆಗಳಿಂದ ಮುಕ್ತರಾಗಲು ಬೆಂಗಳೂರಿನಲ್ಲಿ ಮೊದಲ ಬಾರಿಗೆ ಏ. 23 ರಿಂದ 30 ರ ವರೆಗೆ “ಪ್ರೇಕ್ಷಾ ಧ‍್ಯಾನ ಶಿಬಿರ”

ಇದಕ್ಕಾಗಿ ರಾಜ್ಯದ ರೈತರು https://103.138.196.154/service19/Report/ApplicationDetails ಈ ಲಿಂಕ್ , ತಮಗೆ ಬೇಕಾದಂತ ದಾಖಲೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದು. ಅಲ್ಲದೇ ನಿಮ್ಮ ಅರ್ಜಿಯ ಸ್ಥಿತಿಗತಿ, ಅರ್ಜಿಗಳನ್ನು ಡೌನ್ ಲೋಡ್ ಕೂಡ ಮಾಡಿಕೊಳ್ಳಬಹುದಾಗಿದೆ.

ನೀವು ನಿಮ್ಮ ಜಮೀನಿನ ನಕ್ಷೆ ಕೇಳಿದ್ದರೇ, ಸರ್ವೆ ಸಿಬ್ಬಂದಿ ಮಾಪನ ಕಾರ್ಯ ಮುಗಿಸಿ, ನಕ್ಷೆ ಅನುಮೋದಿಸಿದ ತಕ್ಷಣ ಇದೇ ವೆಬ್ ಸೈಟ್ ನಲ್ಲಿ ಡೌನ್ ಲೋಡ್ ಕೂಡ ಮಾಡಿಕೊಳ್ಳಬಹುದಾಗಿದೆ.

       ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap