‘ರಾಜ್ಯ ಸರ್ಕಾರಿ ನೌಕರ’ರಿಗೆ ಗುಡ್ ನ್ಯೂಸ್: ಶೀಘ್ರ ‘7ನೇ ವೇತನ ಆಯೋಗ’ ಜಾರಿ

ಬೆಂಗಳೂರು:

ರಾಜ್ಯ ಸರ್ಕಾರಿ ನೌಕರರ  ವೇತನ ಪರಿಷ್ಕರಣೆಗಾಗಿ 7ನೇ ವೇತನ ಆಯೋಗ ರಚನೆಯನ್ನು  ಸರ್ಕಾರ ಈ ಬಾರಿಯ ಬಜೆಟ್ ನಲ್ಲಿ ಘೋಷಿಸಲು ಸಿದ್ಧತೆ ನಡೆಸಿದೆ.

 ಅಲ್ಲದೇ 2022ರ ಜುಲೈನಿಂದ 7ನೇ ವೇತನ ಆಯೋಗ ಜಾರಿಗೆ ಬರಲಿದೆ ಎನ್ನಲಾಗುತ್ತಿದೆ. ಈ ಮೂಲಕ ರಾಜ್ಯ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ ಶೀಘ್ರವೇ ಸಿಗಲಿದೆ.

ಹೌದು.. ಲಭ್ಯವಿರುವಂತ ಮಾಹಿತಿ ಪ್ರಕಾರ ರಾಜ್ಯ ಸರ್ಕಾರ 7ನೇ ವೇತನ ಆಯೋಗವನ್ನು ರಚನೆ ಮಾಡುತ್ತಿದೆ. ಆದ್ರೇ ಆಯೋಗಕ್ಕೆ ನ್ಯಾಯಾಧೀಶರ ನೇಮಕವಾಗುವುದೇ, ನಿವೃತ್ತ ಅಧಿಕಾರಿ ಇರುವರೋ ಎನ್ನುವ ಪ್ರಶ್ನೆಗೆ ಉತ್ತರ, ಬಜೆಟ್ ನಲ್ಲಿ ಸಿಗಲಿದೆ.

ಕೇಂದ್ರದ ಮಾದರಿ ವೇತನ ಜಾರಿ ಮಾಡಿದ್ರೇ, ರಾಜ್ಯ ಸರ್ಕಾರಕ್ಕೆ ವಾರ್ಷಿಕ 7,500 ಕೋಟಿ ಹೆಚ್ಚಿನ ಮೊತ್ತದ ಅಗತ್ಯವಿದೆ. ಗ್ರೇಡ್ ಪೇ, ಇತರೆ ಭತ್ಯೆ ಸೇರಿ ಈ ಮೊತ್ತ 15 ಸಾವಿರ ಕೋಟಿ ಮೀರಲಿದೆ. ಆದ್ರೇ ಬಹುದೊಡ್ಡ ಹಣಕಾಸಿನ ಹೊರೆ ತಡೆದುಕೊಳ್ಳುವ ಸ್ಥಿತಿಯಲ್ಲಿ ರಾಜ್ಯವಿಲ್ಲ.

ಸದ್ಯಕ್ಕೆ ಮಧ್ಯಂತರ ವರದಿ ಪಡೆದು, ಜುಲೈಗೆ 7ನೇ ವೇತನ ಆಯೋಗ ಜಾರಿ ಮಾಡುವುದು, ಆ ನಂತ್ರ ಅಂತಿಮ ವರದಿ ಪಡೆದು ಅದರ ಜಾರಿ ಜವಾಬ್ದಾರಿಯನ್ನು ಮುಂದಿನ ಸರ್ಕಾರದ ಹೆಗಲಿಗೆ ಹಾಕುವ ಸರ್ಕಾರದ ತಂತ್ರ ಇರುವಂತೆ ಕಂಡು ಬಂದಿದೆ. ಆ ಬಗ್ಗೆ ಫೆ.14ರಿಂದ ಆರಂಭವಾಗುತ್ತಿರುವಂತ ಬಜೆಟ್ ಅಧಿವೇಶನದಲ್ಲಿ ಸ್ಪಷ್ಟ ಚಿತ್ರಣ ಲಭ್ಯವಾಗಲಿದೆ.

          ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap