ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ : ‘ನಿವೃತ್ತಿ ವಯಸ್ಸು’ ಹೆಚ್ಚಳ

ವದೆಹಲಿ :

   ಪ್ರಸ್ತುತ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸರ್ಕಾರಿ ನೌಕರರಿಗೆ ವಿಶೇಷ ಗಮನ ನೀಡುತ್ತಿವೆ. ಅವರಿಗೆ ಒದಗಿಸಬೇಕಾದ ಸೌಲಭ್ಯಗಳ ಬಗ್ಗೆ ವಿಶೇಷ ಗಮನ ಹರಿಸಲಾಗುತ್ತಿದೆ. ಅದ್ರಂತೆ, ಕೇಂದ್ರ ಸರ್ಕಾರಿ ನೌಕರರು ಈಗಾಗಲೇ ನಿವೃತ್ತಿ ವಯೋಮಿತಿಯನ್ನ ಹೆಚ್ಚಿಸುವಂತೆ ಒತ್ತಾಯಿಸುತ್ತಿದ್ದಾರೆ.

   ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿರುವ ನರೇಂದ್ರ ಮೋದಿ ಸರ್ಕಾರ ಕೇಂದ್ರ ಸರ್ಕಾರಿ ನೌಕರರ ನಿವೃತ್ತಿ ವಯಸ್ಸನ್ನು ಹೆಚ್ಚಿಸುವ ನಿರ್ಧಾರ ಕೈಗೊಂಡಿದೆ ಎಂಬ ಸುದ್ದಿ ಬಂದಿದೆ.

   ಪ್ರಸ್ತುತ, ಕೇಂದ್ರ ಸರ್ಕಾರಿ ನೌಕರರ ನಿವೃತ್ತಿ ವಯಸ್ಸು 60 ವರ್ಷಗಳಾಗಿದ್ದು, ಇದನ್ನು ಇನ್ನೂ ಎರಡು ವರ್ಷಗಳವರೆಗೆ ಅಂದರೆ 62 ವರ್ಷಗಳವರೆಗೆ ವಿಸ್ತರಿಸುವ ಮಹತ್ವದ ನಿರ್ಧಾರವನ್ನ ಕೇಂದ್ರ ಸಂಪುಟ ತೆಗೆದುಕೊಂಡಿದೆ ಎಂಬ ವರದಿಗಳು ಇತ್ತೀಚೆಗೆ ಬಂದಿವೆ .ಇದರಿಂದಾಗಿ ಅನುಭವಿ ಉದ್ಯೋಗಿಗಳ ಸೇವೆಯನ್ನ ಹೆಚ್ಚು ದಿನ ಪಡೆಯಬಹುದು ಎಂದು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ ಎಂಬ ಸುದ್ದಿ ಹಬ್ಬಿದೆ. ಈಗಿರುವ ಉದ್ಯೋಗಗಳನ್ನ ಬದಲಿಸದೆ, ನಿವೃತ್ತಿ ವಯಸ್ಸನ್ನು ಹೆಚ್ಚಿಸಿರುವುದು ನಿರುದ್ಯೋಗಿಗಳ ಅಸಮಾಧಾನಕ್ಕೆ ಕಾರಣವಾಗುವುದು ಖಚಿತ.

   ಈ ವಯೋಮಿತಿ ಹೆಚ್ಚಳ ಪ್ರಸ್ತಾವನೆ ಬಹಳ ದಿನಗಳಿಂದ ಕೇಂದ್ರದಲ್ಲಿ ಬಾಕಿ ಇದೆ. ಇತ್ತೀಚೆಗಷ್ಟೇ ಮಹಾರಾಷ್ಟ್ರ ಮತ್ತು ಜಾರ್ಖಂಡ್ ಚುನಾವಣೆಗೂ ಮುನ್ನ ಕೇಂದ್ರ ಸಚಿವ ಸಂಪುಟ ನೌಕರರ ನಿವೃತ್ತಿ ವಯೋಮಿತಿ ಹೆಚ್ಚಳಕ್ಕೆ ಅನುಮೋದನೆ ನೀಡಿದೆ.ನಿವೃತ್ತಿ ವಯಸ್ಸನ್ನು ಹೆಚ್ಚಿಸುವ ನಿರ್ಧಾರವು 1 ಏಪ್ರಿಲ್ 2025 ರಿಂದ ಜಾರಿಗೆ ಬರಲಿದೆ ಎಂದು ಅವರು ಹೇಳಿದರು. ಒಟ್ಟಿನಲ್ಲಿ ಈ ನಿರ್ಧಾರದಿಂದ ಕೆಲವು ಲಕ್ಷ ಜನರಿಗೆ ಅನುಕೂಲವಾಗುವುದು ಖಚಿತ.

Recent Articles

spot_img

Related Stories

Share via
Copy link
Powered by Social Snap