ನೈಋತ್ಯ ರೈಲ್ವೆ ನೌಕರರಿಗೆ ಗುಡ್‌ ನ್ಯೂಸ್‌ ನೀಡಿದ ಸರ್ಕಾರ

ಹುಬ್ಬಳ್ಳಿ: 

    ನೈಋತ್ಯ ರೈಲ್ವೆಯ(ಎಸ್‌ಡಬ್ಲ್ಯೂಆರ್‌ನ ಶೇ. 80 ರಷ್ಟು) ಸುಮಾರು 31,230 ರೈಲ್ವೆ ಉದ್ಯೋಗಿಗಳು ಅಸ್ತಿತ್ವದಲ್ಲಿರುವ ರಾಷ್ಟ್ರೀಯ ಪಿಂಚಣಿ ಯೋಜನೆಗೆ(ಎನ್‌ಪಿಎಸ್) ಪರ್ಯಾಯವಾಗಿ ಕೇಂದ್ರ ಸರ್ಕಾರ ಇತ್ತೀಚೆಗೆ ಘೋಷಿಸಿದ ಏಕೀಕೃತ ಪಿಂಚಣಿ ಯೋಜನೆ (ಯುಪಿಎಸ್) ಲಾಭ ಪಡೆಯಲಿದ್ದಾರೆ. ಇವರು ಪ್ರಸ್ತುತ NPS ಅಡಿಯಲ್ಲಿದ್ದಾರೆ.ಉದ್ಯೋಗಿಗಳಿಗೆ ಅಸ್ತಿತ್ವದಲ್ಲಿರುವ NPS ಮತ್ತು UPS ನಲ್ಲಿ ಯಾವುದಾದರು ಒಂದನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶವಿದೆ.

    ಈ ಕುರಿತು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜತೆ ಮಾತನಾಡಿದ SWR ಹಣಕಾಸು ಸಲಹೆಗಾರ ಮತ್ತು ಮುಖ್ಯ ಅಕೌಂಟ್ಸ್ ಅಧಿಕಾರಿ ಕುಸುಮಾ ಹರಿಪ್ರಸಾದ್ ಮತ್ತು ಮುಖ್ಯ ಸಿಬ್ಬಂದಿ ಅಧಿಕಾರಿ ಶುಜಾ ಮಹಮೂದ್ ಅವರು, ಯುಪಿಎಸ್ ಅಡಿ ಸರ್ಕಾರಿ ನೌಕರರು ನಿವೃತ್ತಿಯ ಹಿಂದಿನ 12 ತಿಂಗಳಿನಿಂದ ಅವರ ಸರಾಸರಿ ಮೂಲ ವೇತನದ ಶೇ. 50 ರಷ್ಟು ಪಿಂಚಣೆ ಪಡೆಯುತ್ತಾರೆ ಎಂದರು. 

   ಈ ಮಹತ್ವದ ಬೆಳವಣಿಗೆಯು ಸರ್ಕಾರಿ ನೌಕರರಿಗೆ ಪಿಂಚಣಿ ಪ್ರಯೋಜನಗಳನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. ನಿವೃತ್ತಿಯ ನಂತರ ಹೆಚ್ಚಿನ ಆರ್ಥಿಕ ಭದ್ರತೆಯನ್ನು ಖಾತರಿಪಡಿಸುತ್ತದೆ ಎಂದು ಅವರು ಹೇಳಿದ್ದಾರೆ.

Recent Articles

spot_img

Related Stories

Share via
Copy link