ಬೆಂಗಳೂರು:
ಕೊರೋನಾ ಸೋಂಕು ತಡೆಗೆ ರಾಜ್ಯಾದ್ಯಂತ ವೀಕೆಂಡ್ ಕರ್ಫ್ಯೂ ಜಾರಿ ಮಾಡಿದೆ. ಹೀಗಿದ್ದರೂ ಪ್ರವಾಸಿಗರಿಗೆ ಅನುಮತಿ ನೀಡಲಾಗಿದೆ. ಇದರೊಂದಿಗೆ ರಾಜ್ಯ ಸರ್ಕಾರ ಈ ಕುರಿತಂತೆ ಇದ್ದ ಗೊಂದಲವನ್ನು ದೂರ ಮಾಡಿದೆ.
ಈ ಮೊದಲೇ ವಾರಾಂತ್ಯದಲ್ಲಿ ಮನರಂಜನೆಗಾಗಿ ರೆಸಾರ್ಟ್, ಹೋಟೆಲ್, ಅರಣ್ಯಪ್ರದೇಶದಲ್ಲಿ ಸಫಾರಿಗೆ ನೋಂದಣಿ ಮಾಡಿಸಿದ ಪ್ರವಾಸಿಗರಿಗೆ ನಿಯಮ ಪಾಲನೆಯೊಂದಿಗೆ ಅನುಮತಿ ನೀಡಲಾಗಗಿದೆ.
ಕೊರೋನಾ ಕಾರಣದಿಂದಾಗಿ ಪ್ರವಾಸೋದ್ಯಮ ಮೊದಲೇ ಸಂಕಷ್ಟದಲ್ಲಿದೆ. ಹೀಗಾಗಿ ಸರ್ಕಾರ ಶುಕ್ರವಾರ ನಿಯಮ ಪಾಲನೆಯೊಂದಿಗೆ ಅನುಮತಿ ನೀಡಿ ಆದೇಶ ಜಾರಿ ಮಾಡಿದೆ. ಈಗಾಗಲೇ ಸಫಾರಿ, ಹೋಟೆಲ್, ರೆಸಾರ್ಟ್ ಗಳಿಗೆ ಹೋಗಲು ಬುಕ್ ಮಾಡಿರುವ ಪ್ರವಾಸಿಗರಿಗೆ ಅನುಕೂಲವಾಗುವಂತೆ ಈ ಕ್ರಮ ಕೈಗೊಳ್ಳಲಾಗಿದೆ.
ನಿಗದಿತ ಸ್ಥಳಕ್ಕೆ ತೆರಳುವ ಪ್ರವಾಸಿಗರು ಸೂಕ್ತ ದಾಖಲೆಗಳೊಂದಿಗೆ ವಾಹನಗಳಲ್ಲಿ ತೆರಳಬಹುದು. ಅತಿಥಿ ನಿವಾಸ, ಹೋಟೆಲ್ ಗಳಲ್ಲಿ ಪ್ರವಾಸಿಗರು ತಂಗಲು ನಿರ್ಬಂಧ ಇರುವುದಿಲ್ಲ. ಬುಕಿಂಗ್ ದಾಖಲೆಗಳೊಂದಿಗೆ ಹೋಟೆಲ್ ಪ್ರವೇಶಿಸಬಹುದಾಗಿದೆ ಎಂದು ಹೇಳಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ