ಬೆಂಗಳೂರು:
ಸದ್ಯ ಅಗತ್ಯ ವಸ್ತುಗಳ ಬೆಲೆ ಏರುಮುಖವಾಗಿ ಹೋಗುತಿರುವಾಗ ಜನ ಹೈರಾಣಾಗಿದ್ದಾರೆ. ಇದರ ನಡುವೆ ವಿದ್ಯುತ್ ದರ ಏರಿಕೆಯ ಭಯದಲ್ಲಿದ್ದ ಜನರಿಗೆ ಕೊಂಚ ರಿಲೀಫ್ ಸಿಕ್ಕಂತಾಗಿದೆ ಅದೇನೆಂದರೆ ಸದ್ಯಕ್ಕೆ ವಿದ್ಯುತ್ ದರ ಏರಿಕೆ ಮಾಡುವ ಪ್ರಸ್ತಾವನೆ ಇಲ್ಲ ಎಂದು ಇಂಧನ ಸಚಿವ ಸುನಿಲ್ ಕುಮಾರ್ ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ರಾಜ್ಯದ ಜನರಿಗೆ ಸದ್ಯಕ್ಕೆ ಬಿಗ್ ರಿಲೀಫ್ ಕೊಟ್ಟಿದ್ದಾರೆ.
ವಿಧಾನ ಪರಿಷತ್ ಕಲಾಪದ ಶೂನ್ಯ ವೇಳೆಯಲ್ಲಿ ಕಾಂಗ್ರೆಸ್‌ನ ನಾಗರಾಜ್ ಯಾದವ್ ಎತ್ತಿದ ಪ್ರಶ್ನೆ ಸರ್ಕಾರ ಜನರಿಗೆ ವಿದ್ಯುತ್ ಬರೆ ಹಾಕಲು ಹೊರಟಿದೆಯೇ ? ಇನ್ನು ಮಾಧ್ಯಮಗಳಲ್ಲಿ ವಿದ್ಯುತ್ ದರ ಏರಿಕೆ ಅಂತ ಸುದ್ದಿ ಬರುತ್ತಿದೆ. ಸರ್ಕಾರ ಯಾವುದೇ ಕಾರಣಕ್ಕೂ ವಿದ್ಯುತ್ ದರ ಏರಿಕೆ ಮಾಡದಂತೆ ಒತ್ತಾಯಿಸಿದ್ದಾರೆ.
