ಬೆಂಗಳೂರು
ಬೆಂಗಳೂರಿನ ವಿಶ್ವವಿದ್ಯಾನಿಲಯದ ಜ್ಞಾನಭಾರತಿ ಆವರಣದಲ್ಲಿ ಅಪಘಾತಗಳನ್ನು ತಡೆಯುವ ನಿಟ್ಟಿನಲ್ಲಿ ಸರಕು ವಾಹನಗಳಿಗೆ ನಿರ್ಬಂಧ ಹೇರಲಾಗಿದೆ. ವಿದ್ಯಾರ್ಥಿಗಳ ಮತ್ತು ಸಾರ್ವಜನಿಕ ಹಿತದೃಷ್ಟಿಯಿಂದ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡಲು ವಿಶ್ವವಿದ್ಯಾಲಯಕ್ಕೆ ಗೂಡ್ಸ್ ವಾಹನಗಳು ಪ್ರವೇಶಿಸಿದಂತೆ ನಿರ್ಬಂಧ ಹೇರಲಾಗಿದೆ.
ಮೈಸೂರು ರಸ್ತೆಯಲ್ಲಿ ಟ್ರಾಫಿಕ್ ಜಾಮ್ ತಪ್ಪಿಸಿಕೊಳ್ಳಲು ವಿವಿ ಕ್ಯಾಂಪಸ್ಗೆ ಸರಕು ವಾಹನಗಳು ನುಗ್ಗುತ್ತಿದ್ದವು. ಟಿಪ್ಪರ್, ಲಾರಿ, ಟೆಂಪೋ,ಗೂಡ್ಸ್ ಆಟೋಗಳ ಓಡಾಟದಿಂದ ಕ್ಯಾಂಪಸ್ನಲ್ಲಿ ಅಪಘಾತ ಹೆಚ್ಚಾಗಿತ್ತು. ಈ ಹಿಂದೆ ಕ್ಯಾಂಪಸ್ನಲ್ಲಿ ಬಿಎಂಟಿಸಿ ಬಸ್ ಹರಿದು ವಿದ್ಯಾರ್ಥಿನಿ ಮೃತಪಟ್ಟದ್ದಳು.
ಉಲ್ಲಾಳ, ಮರಿಯಪ್ಪನಪಾಳ್ಯ, ನಾಗರಭಾವಿ ಸರ್ಕಲ್, ಜ್ಞಾನಭಾರತಿ ಕಡೆಯಿಂದ ಯಾವುದೇ ಸರಕು ವಾಹನಗಳು ವಿಶ್ವವಿದ್ಯಾಲಯ ಪ್ರವೇಶಿದಂತೆ ಪರ್ಯಾಯ ಮಾರ್ಗವನ್ನು ಬಳಸಬೇಕೆಂದು ಕಡ್ಡಾಯ ಮಾಡಲಾಗಿದೆ.
ಆದರೆ, ಬೆಂಗಳೂರು ವಿವಿ ಕ್ಯಾಂಪಸ್ನಲ್ಲಿ ಬೃಹತ್ ಹಾಗೂ ಸರಕು ವಾಹನಗಳ ನಿಷೇಧಕ್ಕೆ ಡೋಂಟ್ ಕೇರ್ ಎನ್ನಲಾಗುತ್ತಿದೆ. ಕ್ಯಾಂಪಸ್ನಲ್ಲಿ ಬೃಹತ್ ಹಾಗೂ ಸರಕು ವಾಹನಗಳ ಓಡಾಟಕ್ಕೆ ಬ್ರೇಕ್ ಹಾಕಿದರೂ ವಾಹನಗಳು ಓಡಾಟ ನಡೆಸುತ್ತಿವೆ. ಕೇವಲ ಆದೇಶ ಮಾಡಿ ಪೊಲೀಸ್ ಇಲಾಖೆ ಹಾಗೂ ವಿವಿ ಸುಮ್ಮನಾಗಿದೆ. ಕ್ಯಾಂಪಸ್ ಒಳ ಪ್ರವೇಶ ನಿಷೇಧ ಮಾಡದೆ ನಿರ್ಲಕ್ಷ್ಯ ವಹಿಸಲಾಗಿದೆ. ಎಲ್ಲಾ ರಸ್ತೆಗಳಿಂದಲೂ ವಿವಿ ಕ್ಯಾಂಪಸ್ ಗೆ ಬೃಹತ್ ಹಾಗೂ ಸರಕು ವಾಹನಗಳು ಬರುತ್ತಿವೆ.
ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಸಾರ್ವಜನಿಕ ವಾಹನಗಳ ಓಡಾಟ ಹೆಚ್ಚಾಗಿರುವುದರಿಂದ ವಿದ್ಯಾರ್ಥಿ ಹಾಗೂ ಶಿಕ್ಷಕರ ವಲಯಕ್ಕೆ ಕಿರಿಕಿರಿ ಎದುರಾಗಿದೆ. ಕಳೆದ ವರ್ಷವಷ್ಟೇ ವಾಹನಗಳ ಆರ್ಭಟದಿಂದ ವಿದ್ಯಾರ್ಥಿನಿ ಬಲಿಯಾಗಿದ್ದು, ಘಟನೆ ಮಾಸುವ ಮುನ್ನವೇ ಮತ್ತೆ ವಾಹನಗಳ ಸಂಚಾರ ಏರಿಕೆ ಸಮಸ್ಯೆ ತಂದೊಡಿದೆ. ಹೀಗಾಗಿ ಸರ್ಕಾರ ಹಾಗೂ ವಿವಿ ಕಬ್ಬನ್ ಪಾರ್ಕ್ನಲ್ಲಿರುವಂತೆ ರೂಲ್ಸ್ ವಿವಿಯಲ್ಲಿಯೂ ಜಾರಿಗೆ ಮುಂದಾಗಿತ್ತು.