ನವದೆಹಲಿ
ಸಂಸದ ಅಸಾದುದ್ದೀನ್ ಓವೈಸಿ ಅವರ ನವದೆಹಲಿಯಲ್ಲಿರುವ ನಿವಾಸದ ಮೇಲೆ ಅಪರಿಚಿತ ದುಷ್ಕರ್ಮಿಗಳು ಕಲ್ಲೂ ತೂರಾಟ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಇದೇ ಮಾದರಿಯಲ್ಲಿ 2014ರಿಂದಲೂ ಕಲ್ಲೂ ತೂರಾಟ ನಡೆದಿದ್ದು, ಇದು 4ನೇ ಘಟನೆಯಾಗಿದೆ ಎಂದು ಓವೈಸಿ ತಿಳಿಸಿದ್ದಾರೆ. ಘಟನೆ ನಡೆದಾಗ ಅಸಾದುದ್ದೀನ್ ಓವೈಸಿ ರಾಜಸ್ಥಾನಕ್ಕೆ ಭೇಟಿ ನೀಡಿದ್ದರು. ಈಗ ನಡೆದಿರುವ ಕೃತ್ಯಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರಿಗೆ ದೂರು ಸಲ್ಲಿಸಿರುವುದಾಗಿ ಹೇಳಿದ್ದಾರೆ.ನನ್ನ ದೆಹಲಿ ನಿವಾಸದ ಮೇಲೆ ಮತ್ತೆ ದಾಳಿ ನಡೆದಿದೆ. 2014ರಿಂದ ಇದೇ ಮಾದರಿ ದಾಳಿ ನಡೆಯುತ್ತಿದ್ದು, ಇದು ನಾಲ್ಕನೇ ಘಟನೆಯಾಗಿದೆ. ಇಂದು ರಾತ್ರಿ, ನಾನು ಜೈಪುರದಿಂದ ಹಿಂತಿರುಗಿದ್ದೆ.
ಆಗ ದುಷ್ಕರ್ಮಿಗಳ ಗುಂಪೊಂದು ಕಲ್ಲು ತೂರಾಟ ನಡೆಸಿದ್ದರಿಂದ ಕಿಟಕಿಗಳು ಒಡೆದವು ಎಂದು ನನ್ನ ಮನೆಯ ಸಹಾಯಕರು ತಿಳಿಸಿದ್ದರು. ಕಿಡಿಗೇಡಿಗಳನ್ನು ತಕ್ಷಣವೇ ದೆಹಲಿ ಪೊಲೀಸರು ಹಿಡಿಯಬೇಕು ಎಂದು ಅವರು ಸರಣಿ ಟ್ವೀಟ್‌ಗಳಲ್ಲಿ ಹೇಳಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
