ನಾಯಕನಹಟ್ಟಿ :
ವರದಿ ಹರೀಶ್ ನಾಯಕನಹಟ್ಟಿ
ರಾಜ್ಯದಲ್ಲಿ ಬಹುಮತದಿಂದ ಆಡಳಿತಕ್ಕೆ ಬಂದಿರುವ ರಾಜ್ಯ ಸರ್ಕಾರ ನುಡಿದಂತೆ ನಡೆಯುತ್ತಿದೆ ಎಂದು ರಸ್ತೆಗಳ ರಾಜ ಶಾಸಕ ಎನ್.ವೈ.ಗೋಪಾಲಕೃಷ್ಣ ಹೇಳಿದರು.ಸಮೀಪದ ತಳಕು ಹೋಬಳಿಯ ಮಂಗಳವಾರ ಲೋಕೋಪಯೋಗಿ ಇಲಾಖೆ ರಸ್ತೆ ಡಾಂಬರೀಕರಣಕ್ಕೆ ಸುಮಾರು 8 ಕೋಟಿ ರೂ. ವೆಚ್ಚದಲ್ಲಿ ವಿವಿಧ ಹಳ್ಳಿಗಳಲ್ಲಿ ಸಿಸಿ ರಸ್ತೆ ಮತ್ತು ಡಾಂಬರ್ ರಸ್ತೆ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸದರು.
ಸಮೀಪದ ಬೇಡರೆಡ್ಡಿಹಳ್ಳಿ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು 5 ಪಂಚ ಗ್ಯಾರೇಂಟಿ ಯೋಜನೆಗಳನ್ನು ಜಾರಿಗೆ ತರುವುದರ ಮೂಲಕ ರಾಜ್ಯದ ಎಲ್ಲಾ ಬಡ ಜನರಿಗೆ ಅನುಕೂಲವಾಗಿದೆ.ಕ್ಷೇತ್ರಕ್ಕೆ ಉತ್ತಮ ರಸ್ತೆ, ಕುಡಿಯುವ ನೀರು, ಆಸ್ಪತ್ರೆ, ಶಾಲೆಗಳು ಸೇರಿದಂತೆ ಹೆಚ್ಚು ಹೊತ್ತು ಕೊಡಲಾಗುತ್ತದೆ. ಗುತ್ತಿಗೆದಾರರು ಉತ್ತಮ ರಸ್ತೆ ಮಾಡುವುದರಿಂದ ಸಾರ್ವಜನಿಕರಿಗೆ ಅನುಕೂಲ ಮಾಡಬೇಕು.
ರಸ್ತೆ ಗುಣಮಟ್ಟ ಕಾಪಾಡಿದರೆ ಗ್ರಾಮಗಳ ಸಂಪರ್ಕ ಹೆಚ್ಚಾಗುತ್ತದೆ. ಸರ್ವತೋಮುಖ ಅಭಿವೃದ್ಧಿಗೆ ಹೆಚ್ಚು ಶ್ರಮ ವಹಿಸುತ್ತೇನೆ ಎಂದು ಭರವಸೆ ನೀಡಿದರು.ಜನರು ಬಹುದಿನಗಳ ಬೇಡಿಕೆ ಇಂದು ಹಿಡೇರಿದೆ. ಗ್ರಾಮಸ್ಥರು ಮುಂದೆ ನಿಂತು ರಸ್ತೆ ಡಾಂಬರೀಕರಣ ಮಾಡಿಸಿಕೊಳ್ಳಬೇಕು ಎಂದರು.ಈ ಕ್ಷೇತ್ರದಲ್ಲಿ 5 ಬಾರಿ ಶಾಸಕನಾದ ಸಂದರ್ಭದಲ್ಲಿ ಈ ರಸ್ತೆಯನ್ನು ಅಭಿವೃದ್ಧಿ ಮಾಡಿದ್ದೆ ಈಗ ನಾನೇ ಮತ್ತೆ ರಸ್ತೆ ಉದ್ಘಾಟನೆ ಮಾಡಿದ್ದು ನನಗೆ ಸಂತಸವಾಗಿದೆ.ಕೋಡಿಹಳ್ಳಿ ಕ್ರಾಸ್ನಿಂದ ದೇವರೆಡ್ಡಿಹಳ್ಳಿ ಗ್ರಾಮದವರೆಗೆ ರಸ್ತೆ ಅಭಿವೃದ್ಧಿಗೆ ಅನುದಾನ ನೀಡಿದ್ದೇನೆ.ಬೇಡರೆಡ್ಡಿಹಳ್ಳಿ ಸುಸಜ್ಜಿತ ಹೈಟೆಕ್ ಆಸ್ಪತ್ರೆಯನ್ನು ಅತೀ ಶೀಘ್ರದಲ್ಲಿ ಉದ್ಘಾಟಿಸುತ್ತೇವೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಉಪಸ್ಥಿತರಾದ ತಳಕು ಮತ್ತು ನಾಯಕನಹಟ್ಟಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗೇಶ್ರೆಡ್ಡಿ, ಕೆಡಿಪಿ ಸದಸ್ಯ ಎಸ್.ಪಿ.ವಿಶ್ವನಾಥರೆಡ್ಡಿ, ಜಾಕೀರ್ ಹುಸೇನ್, ಬೇಡರೆಡ್ಡಿಹಳ್ಳಿ ಗ್ರಾ.ಪಂ ಅಧ್ಯಕ್ಷ ಅರುಣ್ಕುಮಾರ್ ಹಾಗೂ ಗ್ರಾ.ಪಂ ಸದಸ್ಯರುಗಳು, ನಾಯಕನಹಟ್ಟಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪ.ಪಂ ಹಾಲಿ ಸದಸ್ಯ ಜೆ.ಆರ್.ರವಿಕುಮಾರ್, ಬೇಡರೆಡ್ಡಿಹಳ್ಳಿ ಗ್ರಾ.ಪಂ ಮಾಜಿ ಅಧ್ಯಕ್ಷ ವೇಣುಗೋಪಾಲ್ ರೆಡ್ಡಿ, ಕಾಂಗ್ರೆಸ್ ಮುಖಂಡ ಬ್ಯಾಂಕ್ ಸೂರನಾಯಕ,ಹಿರೇಹಳ್ಳಿ ಗ್ರಾ.ಪಂ ಮಾಜಿ ಅಧ್ಯಕ್ಷೆ ಹಾಲಿ ಸದಸ್ಯೆ ಮಂಜಮ್ಮ, ದಾಸರೆಡ್ಡಿ, ಬಿ.ಆರ್.ತಿಮ್ಮಾರೆಡ್ಡಿ,c ಜಿ.ಸಿ.ಗೋವಿಂದರೆಡ್ಡಿ, ಸೋಮರೆಡ್ಡಿ, ಶಿವರೆಡ್ಡಿ, ಎಸ್.ಚಂದ್ರಣ್ಣ, ಪೂಜಾರಿ ಕೃಷ್ಣಪ್ಪ, ಪೃತ್ವಿಪತಿ, ಜಯಣ್ಣ, ಮಲ್ಲಿಕಾರ್ಜುನ, ಸುರೇಶ್ ಬಾಬು, ಆಶೋಕ್ ರೆಡ್ಡಿ, ವರವು ಕಾಟಯ್ಯ, ಶಿವಮೂರ್ತಿ, ಕೋಡಿಹಳ್ಳಿ ತಿಪ್ಪೇಸ್ವಾಮಿ, ಆರ್.ಶ್ರೀಕಾಂತ್, ವಕೀಲ ಉಮಾಪತಿ,ಪ್ರಭುಸ್ವಾಮಿ, ಜಿ.ತಿಪ್ಪೇಸ್ವಾಮಿ, ಮುದಿಯಪ್ಪ, ಬಸಣ್ಣ.ಟಿ, ಸುರೇಂದ್ರ, ತಳಕು ಪಿಎಸ್ಐ ಶಿವಕುಮಾರ್ ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರುಗಳು ಇದ್ದರು.
