ಹುಳಿಯಾರು:
ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಕಂದಿಕೆರೆ ಹೋಬಳಿಯ ಸಿದ್ದನಕಟ್ಟೆ ಗ್ರಾಮದಲ್ಲಿ ಭಾರತೀಯ ದೇಶಿ ತಳಿಯ ಸಂರಕ್ಷಣೆಗಾಗಿಯೇ ನೂತನವಾಗಿ ನಿರ್ಮಿಸಲಾಗಿರುವ ವಿಶ್ವಮಾತಾ ಗೋಶಾಲಾ ಕೇಂದ್ರದ ಲೋಕಾರ್ಪಣೆ ಇಂದು ನಡೆಯಲಿದೆ.
ವಿಶ್ವ ಮಾತಾ ಗೋ ಶಾಲೆಯ ಪ್ರಾರಂಭೋತ್ಸವದ ಅಂಗವಾಗಿ ವಿವಿಧ ಪೂಜಾ ಕೈಂಕರ್ಯಗಳು ನಡೆಯಲಿದ್ದು ನ.19 ರ ಗುರುವಾರ ಬೆ.5.30 ಕ್ಕೆ ಬ್ರಾಹ್ಮೀಮುಹೂರ್ತದಲ್ಲಿ ಗೋಶಾಲೆಯ ಪ್ರವೇಶ ಮತ್ತು ಗೋಪೂಜೆಯ ನಡೆಯಲಿದೆ. 8 ಗಂಟೆಗೆ ವೇದಪಾರಾಯಣ, ವಾಸ್ತು ಹೋಮ ನಡೆಯಲಿದೆ. 10 ಗಂಟೆಗೆ ಮಂಗಳನಿಧಿ ಕಾರ್ಯಕ್ರಮ ಹಾಗೂ 11 ಗಂಟೆಗೆ ಗೋ ಸಂರಕ್ಷಣೆ ಬಗ್ಗೆ ಕಿರುಪರಿಚಯ ಹಮ್ಮಿಕೊಳ್ಳಲಾಗಿದೆ.
ವಿಶ್ವ ಮಾತಾ ಗೋಶಾಲೆಗೆ ಪಶುಪಾಲನೆಯೇ ಮುಖ್ಯ ಉದ್ದೇಶವಾಗಿದ್ದು ದೇಶಿ ಹಸುಗಳ ಸಂರಕ್ಷಣೆ ಉದ್ದೇಶದಿಂದ ನಿರ್ಮಾಣವಾಗಿದೆ. ಅನಾಥ ಹಾಗು ಅಶಕ್ತ ಗೋವುಗಳ ರಕ್ಷಣೆಗೆ ಪೂರಕವಾದ ವಾತಾವರಣವನ್ನು ಈ ಗೋಶಾಲೆ ಕಲ್ಪಿಸಲಿದೆ ಎಂದು ಗೋ ಸಂರಕ್ಷಕ ಶ್ರೀಹರಿ ಶ್ರೀನಿವಾಸ ಚಾರ್ಯ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
