‘ಆಪರೇಷನ್ ಕಮಲ’ ದಲ್ಲಿ ರಾಜ್ಯಪಾಲರೂ ಭಾಗಿ..!?

ಬೆಂಗಳೂರು :

     ರಾಜ್ಯಪಾಲರೂ ಸಹಾ ‘ಆಪರೇಷನ್ ಕಮಲ’ ನಡೆಸುವ ಕಾರ್ಯದಲ್ಲಿ ಭಾಗಿಯಾಗಿದ್ದಾರೆ ಎಂದು ಡಿಸಿಎಂ ಪರಮೇಶ್ವರ್ ಗಂಭೀರ ಆರೋಪ ಮಾಡಿದ್ದಾರೆ.

      ಸುದ್ದಿಗಾರರೊಂದಿಗೆ ಮಾತನಾಡಿದ ಪರಮೇಶ್ವರ್, ರಾಜೀನಾಮೆ ನೀಡಲು ಹೋದ ಶಾಸಕರ ಜೊತೆ ರಾಜ್ಯಪಾಲರು 2 ಗಂಟೆಗಳ ಕಾಲ ಚರ್ಚಿಸುವ ಅಗತ್ಯತೆ ಏನಿತ್ತು…? ಪೊಲೀಸ್ ಆಯುಕ್ತರನ್ನು ಕರೆಸಿಕೊಂಡು ಅವರ ಜೊತೆಯಲ್ಲೇ ಕೂರಿಸಿಕೊಂಡು ಶಾಸಕರೊಂದಿಗೆ ಮಾತನಾಡುತ್ತೀರಿ ಎನ್ನುವುದಾದರೆ, ಕುದುರೆ ವ್ಯಾಪಾರಕ್ಕೆ ನೀವೇ ಕಾರಣೀಭೂತರು. ರಾಜ್ಯಪಾಲರೂ ಸೇರಿದಂತೆ ಎಲ್ಲ ಬಿಜೆಪಿ ಮುಖಂಡರು ಆಪರೇಷನ್ ಕಮಲದಲ್ಲಿ ಭಾಗಿಯಾಗಿದ್ದಾರೆ. ಎಂದು ಬಿಜೆಪಿ ವಿರುದ್ಧ ಪರಮೇಶ್ವರ್ ಕಿಡಿಕಾರಿದ್ದಾರೆ.

      ಬಿಜೆಪಿ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಅವರ ವಿಶೇಷ ವಿಮಾನದ ಮೂಲಕ ಶಾಸಕರನ್ನು ಮುಂಬೈನ ರೆಸಾರ್ಟ್ ಗೆ ಕಳುಹಿಸಲಾಗಿದೆ. ಇದರ ಅರ್ಥ ಏನು, ಇಷ್ಟೆಲ್ಲಾ ಆದರೂ ಸಹ ನಮಗೆ ಸಂಬಂಧವಿಲ್ಲ. ಅವರು ಏನಾದರೂ ಮಾಡಿಕೊಳ್ಳಲಿ ಎಂದು ಯಡಿಯೂರಪ್ಪ ಹೇಳುತ್ತಿದ್ದಾರೆ.. ಅವರೇ ಆಪರೇಷನ್ ಕಮಲ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.  

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link