ಮಲ್ಲಿಕಾರ್ಜುನ ಖರ್ಗೆ ಪಿಎಂ ಅಭ್ಯರ್ಥಿ ಮೋಸದಾಟ- ಕಾರಜೋಳ

ಹುಬ್ಬಳ್ಳಿ:

     ಕಾಂಗ್ರೆಸ್ ನಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರನ್ನ ಪ್ರಧಾನಿ ಅಭ್ಯರ್ಥಿಯನ್ನಾಗಿ ಬಿಂಬಿಸುವ ಯತ್ನ ನಡೆಸಲಾಗುತಿದ್ದು ಇದೊಂದು ಮೋಸದಾಟ ಅಷ್ಟೇ ಎಂದು ಮಾಜಿ ಉಪ ಮುಖ್ಯಮಂತ್ರಿ ಹಾಗೂ ಹಿರಿಯ ಭಾರತೀಯ ಜನತಾ ಪಕ್ಷದ ನಾಯಕ ಗೋವಿಂದ ಕಾರಜೋಳ ಗಂಭೀರ ಆರೋಪ ಮಾಡಿದರು.

     ನಗರದಲ್ಲಿ ಶುಕ್ರವಾರ ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು ಮಲ್ಲಿಕಾರ್ಜುನ ಖರ್ಗೆ ಯಾವುದೇ ಕಾರಣಕ್ಕೂ ಕಾಂಗ್ರೆಸ್ ನಲ್ಲಿ ಪ್ರಧಾನಿ ಆಗಲ್ಲ ಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬರಲ್ಲ ಪ್ರಧಾನಿ ನರೇಂದ್ರ ಮೋದಿ ಅವರು ಇರುವವರಗೆ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ ಉದ್ದೇಶ ಪೂರ್ವಕವಾಗಿಯೇ ಮಲ್ಲಿಕಾರ್ಜುನ ಖರ್ಗೆ ಅವರ ಹೆಸರು ಮುನ್ನಲೇ ತರಲಾಗುತ್ತದೆ

    ದಲಿತರನ್ನ ಪ್ರಧಾನಿ ಅಭ್ಯರ್ಥಿ ಘೋಷಣೆ ಮಾಡಿದವು ಆದರೆ ಅಧಿಕಾರಕ್ಕೆ ಬರಲಿಲ್ಲ ಅಂತಾ ಕಾಂಗ್ರೆಸ್ ನವರು ಗೊಬೆ ಕುರಿಸುವ ಹುನ್ನಾರ ಆಗಿದ ಎಂದ ಅವರು ದಲಿತರ ಮೇಲೆ ಕಾಂಗ್ರೆಸ್ ಗೆ ಪ್ರೀತಿ ಇದ್ದರೆ 2013 ರಲ್ಲಿಯೇ ಮಾಡಬೇಕಿತ್ತುಕಾಂಗ್ರೆಸ್ ಸ್ಪಷ್ಟವಾದ ಬಹುಮತ ಬಂದಿತ್ತು ಕೆಪಿಸಿಸಿ ಅಧ್ಯಕ್ಷರಾಗಿ ಜಿ ಪರಮೇಶ್ವರ ರಾಜ್ಯ ಸುತ್ತಾಡಿ ಪಕ್ಷವನ್ನ ಅಧಿಕಾರಕ್ಕೆ ತಂದರು ಆದರೆ ಜಿ ಪರಮೇಶ್ವರಗೂ ಏನು ಮಾಡಲಿಲ್ಲಅಂದು ಮಲ್ಲಿಕಾರ್ಜುನ ಖರ್ಗೆ ಮುಖ್ಯಮಂತ್ರಿ ಆಗಬೇಕು ಅಂತಾ ಮಾಡಿದರು ಆವಾಗ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಪಕ್ಷದ ಆಂತರಿಕ ಚುನಾವಣೆ ನಡೆಸಿದರು

    ಸಿದ್ದರಾಮಯ್ಯಾ ಹಾಗೂ ಮಲ್ಲಿಕಾರ್ಜುನ ಖರ್ಗೆಗೆ ಶಾಸಕರು ಮತ ಚಲಾವಣೆ ಮಾಡಿದರು ಮಲ್ಲಿಕಾರ್ಜುನ ಖರ್ಗೆಗೆ ಕೇವಲ 16-17 ಮತ ಬಂದವು ಆದರೆ ಸಿದ್ದರಾಮಯ್ಯಾಗೆ ಅಧಿಕ ಮತ ಬಂದವು ಸಿದ್ದರಾಮಯ್ಯಾ ಸಿಎಂ ಅಭ್ಯರ್ಥಿ ಆಗಿ ಘೋಷಣೆ ಮಾಡಲಾಯಿತುನಾವು ಕಾಂಗ್ರೆಸ್ ಆಡಳಿತವನ್ನ ಬಹಳ ದಿನಗಳಿಂದ ನೋಡಿದ್ದೇವೆ60 ವರ್ಷಗಳ ಆಡಳಿತ, ಜೊತೆಗೆ ಜವಾಹರಲಾಲ್ ನೆಹರು ಮನೆತನದ 36 ವರ್ಷ ಆಡಳಿತ ಗೊತ್ತುಈಗ ಕಾಂಗ್ರೆಸ್ ನರಿಗೆ ದಲಿತರ ಮೇಲೆ ಪ್ರೀತಿ ಉಕ್ಕಿ ಬಂದಿದೆ

    ಬರಿ ದಲಿತರ ಮೇಲಿನ‌ ಡಾಂಭಿಕ ಫ್ರೀತಿ ಅದು ಎಂದರು. ಇನ್ನು ಬಿಜೆಪಿ ಜೆಡಿಎಸ್ ಜೊತೆಗೆ ಲೋಕಸಭಾ ಚುನಾವಣೆಯಲ್ಲಿ ಸ್ಥಾನ ಹಾಗೂ ಕ್ಷೇತ್ರ ಹಂಚಿಕೆ ವಿಚಾರವಾಗಿ ಮಾತನಾಡಿದ ಅವರು ವಿಧಾನ ಪರಿಷತ್ ಚುನಾವಣಾ ಎದುರುಸುತ್ತೇವೆಲೋಕಸಭಾ ಚುನಾವಣೆಯಲ್ಲಿ ಟಿಕೆಟ್, ಸ್ಥಾನ ಹಂಚಿಕೆಯಲ್ಲಿ ಭಿನ್ನಾಭಿಪ್ರಾಯ ಸಹಜಇದನ್ನು ನಮ್ಮ ಪಕ್ಷದ ಹಿರಿಯ ನಾಯಕರು ನೋಡಿಕೊಳ್ಳುತ್ತಾರೆ ಇದೊಂದು ರಾಷ್ಟ್ರೀಯ ಮಟ್ಟದಲ್ಲಿ ನಡೆದ ಹೊಂದಾಣಿಕೆ ಎಂದರು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಪಕ್ಷದ ಆಂತರಿಕ ವಿಚಾರ ಬಹಿರಂಗ ಪ್ರಸ್ತಾಪ ವಿಚಾರವಾಗಿನಾನು ಏನು ಕಮೆಂಟ್ ಮಾಡಲ್ಲಈ ಬಗ್ಗೆ ಏನು ಪ್ರತಿಕ್ರಿಯೆ ಕೊಡಲ್ಲ ಎಂದರು.

    ಹಿಂದುಳಿದ ವರ್ಗದವರಿಗೆಮೀಸಲಾತಿ ವಿಚಾರ ಕುರಿತು ಸರ್ಕಾರದ ನಡೆ ವಿಚಾರ ಮಾತನಾಡಿದ ಅವರು ಮೀಸಲಾತಿ ವಿಚಾರದಲ್ಲಿ ರಾಜಕಾರಣ ಮಾಡಬಾರದು ಮೀಸಲಾತಿ ಎಂದರೆ ಅದೊಂದು ಹಿಂದುಳಿದ ವರ್ಗಗಳ ಶ್ರೇಯಸ್ಸಿಗಾಗಿ ಇರಬೇಕು ಸಾಮಾಜಿಕ ಆರ್ಥಿಕ, ರಾಜಕೀಯವಾಗಿ ತುಳಿತಕ್ಕೆ ಒಳಗಾದವರ ಏಳ್ಗಗೆ ಇರಬೇಕು ಆದರೆ ಇದು ಆಗತಾ ಇಲ್ಲ ಎಂದು ಕಳವಳ ವ್ಯಕ್ತಪಡಿಸಿದರು.

    ಇನ್ನು ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತ ಬಂಧನ ವಿಚಾರವಾಗಿ ಕಿಡಿ ಕಾರಿದ ಅವರು
ಕೊಡಲೇ ಕರವೇ ಕಾರ್ಯಕರ್ತರ ಬಿಡುಗಡೆ ಮಾಡಲಿ ಸರಕಾರ ಕನ್ನಡ ಪರ ಹೋರಾಟಗಾರ ಹತ್ತಿಕ್ಕುವ ಕೆಲಸ ಮಾಡಬಾರದುಸ್ವಾತಂತ್ರ್ಯ ಬಂದು ಇಷ್ಟು ದಿನಗಳು ಆದವು ಇನ್ನು ಕನ್ನಡ ನೆಲದಲ್ಲಿ ಕನ್ನಡಕ್ಕಾಗಿ ಹೋರಾಟ ಮಾಡಬೇಕಾಗಿದೆ ಕನ್ನಡ ಪರ ಹೋರಾಟಗಾರರ ಬೇಡಿಕೆಗಳನ್ನ ಸರಕಾರ ಈಡೇರಿಸಬೇಕು 
ಸಿದ್ದರಾಮಯ್ಯಾನವರು ಕನ್ನಡ ಕಾವಲು ಸಮಿತಿ ಅಧ್ಯಕ್ಷರಾಗಿದ್ದವರು ಆದರೆ ಈ ರೀತಿಯಾಗಿ ಕನ್ನಡ ಪರ ಹೋರಾಟಗಾರರ ಮೇಲೆ ದೌರ್ಜನ್ಯ ಸರಿಯಲ್ಲ ಎಂದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

 

Recent Articles

spot_img

Related Stories

Share via
Copy link