ರೈತ ಸಿದ್ದರಾಜು ಆತ್ಮಹತ್ಯೆ ಪ್ರಕರಣ: ಕುಟುಂಬಕ್ಕೆ ಸರ್ಕಾರಿ ಸವಲತ್ತು ವಿತರಣೆ.

ಕೊರಟಗೆರೆ :

    ತಾಲ್ಲೂಕಿನ ಚನ್ನರಾಯನದುರ್ಗ ಹೋಬಳಿಯ ಬೂದಗವಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವಂತಹ ಬೆಂಡೋಣಿ ಗ್ರಾಮದ ಸಿದ್ದರಾಜು ಬಿ.ಎನ್ ಬಿನ್ ನರಸಿಂಹಯ್ಯ (45) ಎಂಬ ಬಡರೈತ ಸಾಲಬಾಧೆ ತಾಳಲಾರದೆ ತನ್ನದೇ ಜಮೀನಿನಲ್ಲಿ (ಸರ್ವೇ ನಂಬರ್ 22/2 ರಲ್ಲಿ) ಇರುವ ತುಗಲಿ ಮರಕ್ಕೆ ನೇಣು ಹಾಕಿಕೊಂಡು ಮೃತನಾಗಿದ್ದ ಘಟನೆ ಕಳೆದ ಮಂಗಳವಾರ ನಡೆದಿತ್ತು..

    ಕೊರಟಗೆರೆ ಕೆನರಾ ಬ್ಯಾಂಕ್ ನಲ್ಲಿ ದಾಳಿಂಬೆ ಬೆಳೆಯುವ ಸಲುವಾಗಿ ಐದು ಲಕ್ಷ ಸಾಲ, ವಿ ಎಸ್ ಎಸ್ ಎನ್ ಬೆಂಡೋಣಿ ಶಾಖೆಯಲ್ಲಿ ಐವತ್ತು ಸಾವಿರ ಸಾಲ, ಖಾಸಗಿ ಫೈನಾನ್ಸ್ ಸಂಸ್ಥೆಯಾದ ಸಮಸ್ತ ಫೈನಾನ್ಸ್ ನಲ್ಲಿ ಹೈನುಗಾರಿಕೆಗಾಗಿ 70,000 ಸಾಲವನ್ನು ಮಾಡಿದ್ದರು ಮತ್ತು ಮಗನ ಚಿಕಿತ್ಸೆಗಾಗಿ ಸ್ಥಳೀಯ ಸಾರ್ವಜನಿಕರಲ್ಲಿ ಕೈ ಸಾಲವನ್ನು ಸಹ ಮಾಡಿ ಅತಿಯಾದ ಬಡ್ಡಿಯಿಂದ ಸಾಲವನ್ನು ತೀರಿಸಲಾಗದೆ ಕೊರಟಗೆರೆಯ ಕೆನರಾ ಬ್ಯಾಂಕ್ ಕಳುಹಿಸಿದ್ದ ಲೀಗಲ್ ನೋಟಿಸ್ ತನ್ನ ಜೇಬಿನಲ್ಲಿಯೇ ಇಟ್ಟುಕೊಂಡು ಮರಕ್ಕೆ ನೀನು ತೆಗೆದುಕೊಂಡು ಆತ್ಮಹತ್ಯೆಯನ್ನು ಮಾಡಿಕೊಂಡಿದ್ದರು..

    ನಂತರ ಮಾತನಾಡಿದ ತಹಶೀಲ್ದಾರ್ ಮುನಿಶಾಮಿ ರೆಡ್ಡಿ ಮೃತ ರೈತನ ಕುಟುಂಬಕ್ಕೆ ಸರ್ಕಾರದಿಂದ ಸಿಗುವಂತಹ ಎಲ್ಲಾ ಪರಿಹಾರದ ಹಣ ಮತ್ತು ಸವಲತ್ತುಗಳನ್ನು ಒದಗಿಸಲಾಗುತ್ತಿದೆ ಹಾಗೂ ಮೃತನ ಹೆಂಡತಿಗೆ ವಿಧವಾ ವೇತನದ ಆದೇಶ ಪತ್ರ ಮತ್ತು ಮೃತ ರೈತನ ಮರಣ ಪ್ರಮಾಣ ಪತ್ರವನ್ನು ಕೇವಲ 72 ಗಂಟೆಗಳ ಅವಧಿಯಲ್ಲಿ ಸಂತ್ರಸ್ತೆಗೆ ನೀಡಿದ್ದೇವೆ ಹಾಗೂ ಮುಂದೆಯೂ ಕೂಡ ಇಲಾಖೆ ಮೃತ ರೈತನ ಕುಟುಂಬದ ಸಂಪರ್ಕದಲ್ಲಿ ಇದ್ದು ಇಲಾಖೆ ಕೆಲಸ ಮಾಡಲಿದೆ ಎಂದು ತಿಳಿಸಿದರು..

    ನಂತರ ಮಾತನಾಡಿದ ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕರಾದ ಹೆಚ್ ನಾಗರಾಜ್ ಕೃಷಿ ಇಲಾಖೆ ವತಿಯಿಂದ ಸಿಗುವಂತಹ ಪರಿಹಾರದ ಹಣವನ್ನು ಅತ್ಯಂತ ಜರೂರಾಗಿ ನೀಡಲಾಗುವುದು ಮತ್ತು ಸರ್ಕಾರದಿಂದ ಸಿಗುವಂತಹ ಸವಲತ್ತುಗಳನ್ನು ಮೃತರ ಕುಟುಂಬಕ್ಕೆ ಈಗಾಗಲೇ ನೀಡಿದ್ದೇವೆ. ಕೇವಲ 72 ಗಂಟೆಗಳಲ್ಲಿ ಕೃಷಿ ಇಲಾಖೆ ನೀಡುವ ಟಾರ್ಪಲ್,ಪೈಪ್, ಸಹಾಯಧನ ಮತ್ತು ಇತ್ಯಾದಿಗಳನ್ನು ಒದಗಿಸಲಾಗುದೆ ಎಂದು ತಿಳಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap