ಬೆಂಗಳೂರು
ರೈತರಿಗೆ ಉಚಿತ ಮೂಲ ಸೌಕರ್ಯದ ಅಡಿಯಲ್ಲಿ ಕೃಷಿ ಪಂಪ್ ಸೆಟ್ ಗಳಿಗೆ ಟ್ರಾನ್ಸ್ ಫಾರ್ಮರ್ ಸಹಿತ ಅಳವಡಿಕೆ ಸೌಲಭ್ಯವನ್ನು ಕಲ್ಪಿಸಲಾಗಿತ್ತು. ಆದ್ರೇ ಇದೀಗ ಈ ಮೂಲ ಸೌಕರ್ಯವನ್ನು ರದ್ದುಗೊಳಿಸಿ ಬಿಗ್ ಶಾಕ್ ನೀಡಲಾಗಿದೆ.
ಈ ಸಂಬಂಧ ರಾಜ್ಯ ಸರ್ಕಾರ ಆದೇಶ ಮಾಡಿದ್ದು, ಸ್ವಂತ ಖರ್ಚಿನಲ್ಲೇ ರೈತರು ತಮ್ಮ ಕೃಷಿ ಜಮೀನುಗಳಿಗೆ ವಿದ್ಯುತ್ ಸಂಪರ್ಕವನ್ನು ಕೊಳವೆ ಬಾವಿಗಳಿಗೆ ಅಳವಡಿಸಿಕೊಳ್ಳುವಂತೆ ತಿಳಿಸಿ, ಶಾಕ್ ನೀಡಿದೆ.
ರಾಜ್ಯ ಸರ್ಕಾರದಿಂದ ಶೀಘ್ರ ವಿದ್ಯುತ್ ಯೋಜನೆಯ ಅಡಿಯಲ್ಲಿ ಈ ಹಿಂದೆ ಅಕ್ರಮ ಸಕ್ರಮ ಮಾಡಿಕೊಡೋ ಯೋಜನೆ ರೂಪಿಸಿತ್ತು. ಇದರ ಅಡಿಯಲ್ಲಿ ಪ್ರತಿ ಕೊಳವೆ ಬಾವಿಗೆ ರೈತರಿಂದ ಶುಲ್ಕದ ರೂಪದಲ್ಲಿ 24 ಸಾವಿರ ರೂ ಕಟ್ಟಿಸಿಕೊಳ್ಳುತ್ತಿತ್ತು.
ಇದೀಗ ರಾಜ್ಯ ಸರ್ಕಾರ ಈ ಯೋಜನೆಯನ್ನು ರದ್ದುಗೊಳಿಸಿದೆ. ಹೀಗಾಗಿ ಇನ್ಮುಂದೆ ರೈತರು ಹೊಸದಾಗಿ ಕೊಳವೆ ಬಾವಿ ಕೊರೆದ್ರೇ, ಅದಕ್ಕೆ ವಿದ್ಯುತ್ ಸಂಪರ್ಕವನ್ನು ತಾವೇ ಮಾಡಿಸಿಕೊಳ್ಳಬೇಕಿದೆ.
ರಾಜ್ಯ ಸರ್ಕಾರ ಉಚಿತ ಮೂಲ ಸೌಕರ್ಯ ಯೋಜನೆಯನ್ನು ರದ್ದುಗೊಳಿಸಿರೋ ಕಾರಣ, ಈಗ ಸ್ವಂತ ಖರ್ಚಿನಿಂದಲೇ ತಮ್ಮ ಕೊಳವೆ ಬಾವಿಗಳಿಗೆ ರೈತರು ವಿದ್ಯುತ್ ಸಂಪರ್ಕ ಪಡೆಯೋದಕ್ಕೆ ಲಕ್ಷಾಂತರ ಹಣ ಖರ್ಚು ಮಾಡಬೇಕಿದೆ. ಮೊದಲೇ ಬರಗಾಲದಿಂದ ತತ್ತರಿಸಿರೋ ರೈತರಿಗೆ ಈಗ ಸರ್ಕಾರ ಈ ಬರೆಯನ್ನು ಎಳೆದಂತೆ ಆಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ