ಶಿರಸಿ :
ತಾಲೂಕಿನ ಬನವಾಸಿ ರಸ್ತೆ ಶ್ರೀನಗರ ಸರಕಾರಿ ಶಾಲೆಯ ಶಿಕ್ಷಕಿಯಾಗಿದ್ದ ಸವಿತಾ ಮಂಜುನಾಥ ಗೌಡ ಇಂದು ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟ ದಾರುಣ ಘಟನೆ ವರದಿಯಾಗಿದೆ.ಅವರು ನಾಗ ಪಂಚಮಿ ಹಬ್ಬದ ಪ್ರಯುಕ್ತ ತಮ್ಮ ಪತಿಯೊಂದಿಗೆ ಬೈಕ್ ನಲ್ಲಿ ಮಂಜುಗುಣಿ ದೇವಾಲಯಕ್ಕೆ ತೆರಳುವಾಗ,ಮಳೆ ಬಂದಿದ್ದರಿಂದ ಕೊಡೆ ಬಿಡಿಸಲು ಹೋಗಿ ಆಯ ತಪ್ಪಿ ರಸ್ತೆಗೆ ಬಿದ್ದಿದ್ದರಿಂದ ತಲೆಗೆ ಬಲವಾಗಿ ಪೆಟ್ಟು ಬಿದ್ದಿತ್ತು ಎನ್ನಲಾಗಿದೆ.ಸ್ಥಳೀಯ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಧಾರವಾಡ ಒಯ್ಯುವ ಮಾರ್ಗದಲ್ಲಿ ಅವರು ಕೊನೆಯುಸಿರೆಳೆದರೆಂದು ತಿಳಿದು ಬಂದಿದೆ.








