ಬೆಂಗಳೂರು:
ಎರಡು ದಿನಗಳ ಹಿಂದೆಯಷ್ಟೇ ಬಿಜೆಪಿ ಅವಧಿಯ ಪ್ರಮುಖ ಭ್ರಷ್ಟಾಚಾರ ಹಗರಣಗಳ ವಿರುದ್ಧ ತನಿಖಾಸ್ತ್ರ ಪ್ರಯೋಗದ ಸುಳಿವು ನೀಡಿದ್ದ ಹೊಸ ಸರಕಾರ, ಈಗ ಚುನಾವಣೆ ಹೊಸ್ತಿಲಲ್ಲಿ ನೀಡಲಾಗಿದ್ದ ವಿವಿಧ ಕಾಮಗಾರಿಗಳನ್ನು ಸ್ಥಗಿತಗೊಳಿಸುವುದರ ಜತೆಗೆ ಬಿಲ್ ಪಾವತಿಗೂ ತಡೆ ನೀಡಿ ಆದೇಶ ಹೊರಡಿಸಿದೆ.
ಈ ಹಿಂದಿನ ಸರಕಾರ ಕೈಗೊಂಡಿದ್ದ ಎಲ್ಲ ಇಲಾಖೆಗಳ ಹಾಗೂ ಇಲಾಖೆಗಳ ಅಧೀನಕ್ಕೊಳ ಪಡುವ ನಿಗಮ/ ಮಂಡಳಿಪ್ರಾಧಿಕಾರಗಳ ಕಾಮಗಾರಿಗಳಿಗೆ ಸಂಬಂಧಿಸಿದ ಹಣ ಪಾವತಿ ಯನ್ನು ತತ್‌ಕ್ಷಣ ತಡೆಹಿಡಿಯುವುದರ ಜತೆಗೆ ಪ್ರಾರಂಭವಾಗದಿರುವ ಎಲ್ಲ ಕಾಮಗಾರಿಗಳನ್ನು ಸ್ಥಗಿತಗೊಳಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದು, ಸೋಮವಾರ ಆರ್ಥಿಕ ಇಲಾಖೆ ಈ ಸಂಬಂಧ ಆದೇಶವನ್ನೂ ಹೊರಡಿಸಿದೆ. ಇದರೊಂದಿಗೆ ಕಾಮಗಾರಿಗೆ ಹಣ ಹಾಕಿರುವ ಗುತ್ತಿಗೆದಾರರು ಹಾಗೂ ಆ ಕಾಮಗಾರಿ ಕೊಡಿಸಿ ದವರು ಅತಂತ್ರರಾಗುವಂತಾಗಿದೆ.
ಚುನಾವಣೆಗೆ ನಾಲ್ಕಾರು ತಿಂಗಳು ಬಾಕಿ ಇರು ವಾಗ ಬಿಜೆಪಿ ಸುಮಾರು 16 ಸಾವಿರ ಕೋಟಿ ರೂ.ಗಳಿಗೂ ಅಧಿಕ ಮೊತ್ತದ ಸಾವಿರಾರು ಕಾಮ ಗಾರಿಗಳಿಗೆ ಟೆಂಡರ್ ನೀಡಿರುವ ಆರೋಪ ಕೇಳಿ ಬಂದಿತ್ತು. ಈ ಸಂಬಂಧ ದಾಖಲೆಗಳನ್ನೂ ಕಾಂಗ್ರೆಸ್ ಆಗ ಬಿಡುಗಡೆ ಮಾಡಿತ್ತು. ಅವುಗಳ ಪೈಕಿ ಈಗ ಕೆಲವು ಪೂರ್ಣಗೊಂಡು ಬಿಲ್ ಪಾವತಿ ಹಂತದಲ್ಲಿ ಇದ್ದು, ಕೆಲವು ಆರಂಭಗೊಂಡಿಲ್ಲ.
ರಸ್ತೆ ಅಭಿವೃದ್ಧಿ, ಬೈಪಾಸ್, ಮೇಲ್ಸೇತುವೆಗಳು ಸಹಿತ ಹತ್ತಾರು ಕಾಮಗಾರಿಗಳಿಗೆ ನೂರಾರು ಕೋಟಿ ರೂ.ಗಳನ್ನು ಗುತ್ತಿಗೆದಾರರು ಕೈಗೆತ್ತಿಕೊಂಡಿದ್ದಾರೆ. ಈಗಾಗಲೇ ಹಣ ಹೂಡಿಕೆ ಮಾಡಿದ್ದಾರೆ. ಕೆಲವರು ಸಾಲ ತಂದು ಕೆಲಸ ಮಾಡಿರುವುದೂ ಇದೆ. ಈ ಹಂತ ದಲ್ಲಿ ಹೊರಬಿದ್ದಿರುವ ಸರಕಾರಿ ಆದೇಶ ಆಘಾತ ನೀಡಿದೆ. ಕಾಮಗಾರಿ ಉಳಿಸಿಕೊಳ್ಳಲು ಅಥವಾ ಹಣ ಬಿಡುಗಡೆಗೆ ಅವರೆಲ್ಲರೂ ಹೊಸ ಸರಕಾರಕ್ಕೆ ದುಂಬಾಲು ಬೀಳುವುದು ಅನಿವಾರ್ಯವಾಗಿದೆ.
ಚುನಾವಣೆ ಪೂರ್ವದಲ್ಲೇ ಕಾಂಗ್ರೆಸ್ ಈ ಸುಳಿವು ನೀಡಿತ್ತು. ಅಲ್ಲದೆ, ಈ ಕಾಮಗಾರಿಗಳ ಟೆಂಡರ್ ನೀಡಿರುವುದರ ಹಿಂದೆ ಚುನಾವಣೆಗೆ ಹಣ ಕ್ರೋಡೀಕರಣದ ದುರುದ್ದೇಶ ಅಡಗಿದೆ ಎಂದೂ ಗಂಭೀರವಾಗಿ ಆರೋಪಿಸಿತ್ತು. ಈ ಸಂಬಂಧ ಚುನಾವಣ ಆಯೋಗಕ್ಕೂ ದೂರು ಸಲ್ಲಿಸಿತ್ತು. ದೂರನ್ನು ಪರಿಶೀಲಿಸಿದ್ದ ಆಯೋಗವು ಆ ಎಲ್ಲ ಟೆಂಡರ್ ಪ್ರಕ್ರಿಯೆಗೆ ತಡೆ ನೀಡಲು ಸೂಚಿಸಿತ್ತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
