ತಾಂತ್ರಿಕ ಹುದ್ದೆ ನೇಮಕಾತಿ : ಸರ್ಕಾರದ ಹಸ್ತಕ್ಷೇಪವಿಲ್ಲ : ರಾಜ್ಯ ಸರ್ಕಾರ ಸ್ಪಷ್ಟನೆ

ಬೆಂಗಳೂರು:

    ಖಾಸಗಿ ವಲಯದ ತಾಂತ್ರಿಕ ಉದ್ಯೋಗಗಳ ನೇಮಕಾತಿ ವಿಚಾರದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ರಾಜ್ಯ ಸರ್ಕಾರ ಸ್ಪಷ್ಟಪಡಿಸಿದೆ. ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರು ಮಾತನಾಡಿ, ನಾವು ಟೆಕ್ನಿಕಲ್ ವಿಚಾರಗಳಿಗೆ ಕೈ ಹಾಕಲ್ಲ. ಅಲ್ಲಿ ಯಾವ ರೀತಿ ಜನ ಬೇಕು, ಅದನ್ನು ಅವರು ತೀರ್ಮಾನ ಮಾಡುತ್ತಾರೆ. ನಮ್ಮ ಸರ್ಕಾರ ಕನ್ನಡಿಗರ ಸ್ವಾಭಿಮಾನ ಎತ್ತಿ ಹಿಡಿಯುವ ಕೆಲಸ ಮಾಡಿದೆ ಎಂದು ಹೇಳಿದರು.

    ಕನ್ನಡ ಬೋರ್ಡ್, ಭಾಷೆ, ಧ್ವಜ ಬಳಕೆ, ನಮ್ಮ ಸಂಸ್ಕೃತಿ, ಕಡತಗಳಲ್ಲಿ ಕನ್ನಡ ಬಳಕೆ ಮಾಡಲಾಗುತ್ತಿದೆ. ಮುಂದೆ ರಾಜ್ಯದಲ್ಲಿ ಉದ್ಯೋಗ ಸೃಷ್ಟಿ ಇರಬಹುದು. ಕಡ್ಡಾಯವಾಗಿ ಕನ್ನಡಿಗರಿಗೆ ಇಷ್ಟು ಪರ್ಸೆಂಟ್ ಇರಬೇಕು. ಇದರ ಬಗ್ಗೆ ತೀರ್ಮಾನ ನಾವು ಮಾಡಿದ್ದೇವೆ ಹಾಗೂ ವಿಧೇಯಕ ಮಂಡಿಸುತ್ತಿದ್ದೇವೆಂದು ತಿಳಿಸಿದರು. 

   ಸರ್ಕಾರ ನಿರ್ಧಾರಕ್ಕೆ ಕಿರಣ್ ಮಜುಂದಾರ್ ಶಾ, ಮೋಹನ್ ದಾಸ್ ಪೈ ವಿರೋಧ ವ್ಯಕ್ತಪಡಿಸಿರುವ ಕುರಿತು ಮಾತನಾಡಿ, ಟಕ್ನಿಕಲ್ ಇದ್ದ ಕಡೆ ಏನು ಮಾಡಲು ಆಗಲ್ಲ. ನಾವು ಕೂಡ ಅರ್ಥ ಮಾಡಿಕೊಳ್ಳುತ್ತೇವೆ ಎಂದರು,ಅವರು ಕೂಡ ರಾಜ್ಯದಿಂದಲೇ ಬೆಳದಿರುವವರು. ಟೆಕ್ನಿಕಲ್ ಬೇಕಾಗುವ ಕಡೆ ರಿಯಾಯಿತಿ ಕೋಡುತ್ತೇವೆ. ಸರ್ಕಾರದ ಗಮನಕ್ಕೆ ಅವರು ತರಬೇಕು. ಸದನ ಇರುವುದರಿಂದ ಸಂಪೂರ್ಣ ಮಾಹಿತಿ ಹೇಳಲು ಆಗಲ್ಲ ಎಂದು ಹೇಳಿದರು

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap