ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಗೆ ಎರಡು ಪಿಸ್ತೂಲ್ ಬಳಗೆ ..!!

ಬೆಂಗಳೂರು

  ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಸಂಬಂಧ ವಶಕ್ಕೆ ಪಡೆದಿರುವ ಹತ್ಯೆಗೆ ಪಿಸ್ತೂಲ್ ನೀಡಿರುವ ಶಂಕೆಯ ಆರೋಪಿ ಮುಂಬೈನ ಶರದ್ ಕಲಾಸ್ಕರ್‍ನನ್ನು ವಿಶೇಷ ತನಿಖಾ ತಂಡ (ಎಸ್‍ಐಟಿ) ಅಧಿಕಾರಿಗಳು ತೀವ್ರ ವಿಚಾರಣೆ ನಡೆಸಿದ್ದಾರೆ.

   ಪಿಸ್ತೂಲ್ ತಯಾರಿಕೆಯಲ್ಲಿ ನಿಪುಣನಾಗಿದ್ದ ಶರತ್ ಕಲಾಸ್ಕರ್ ಗೌರಿ ಹತ್ಯೆಗೆ ಪಿಸ್ತೂಲ್ ಕಳುಹಿಸಿ ಕೊಟ್ಟಿರುವ ಮಾಹಿತಿ ಹಿನ್ನೆಲೆಯಲ್ಲಿ ಆತನನ್ನು ತೀವ್ರ ವಿಚಾರಣೆ ನಡೆಸಲಾಗಿದೆ. ಶರತ್ ಕಲಾಸ್ಕರ್‍ನನ್ನು ಬೆಳಗಾವಿಗೆ ಕರೆದುಕೊಂಡು ಹೋಗಿ ಸ್ಥಳ ಮಹಜರು ಮಾಡಿದ್ದಾರೆ. ಈತ ಈಗಾಗಲೇ ಬಂಧಿತರಾಗಿರುವ ಆರೋಪಿಗಳಿಗೆ ಬೆಳಗಾವಿಯಲ್ಲಿ ಶೂಟಿಂಗ್ ತರಬೇತಿ ನೀಡಿರುವ ಹಿನ್ನೆಲೆಯಲ್ಲಿ ಅಲ್ಲಿಗೆ ಕರೆತಂದು ಸ್ಥಳ ಪರೀಶೀಲನೆ ನಡೆಸಲಾಗಿದೆ. ಶರತ್ ತಯಾರಿಸುವ ಗನ್ ಮಾದರಿಯ ಬಗ್ಗೆ ಮಾಹಿತಿ ಪಡೆಯಲಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

   ಮಹಾರಾಷ್ಟ್ರದ ಎಟಿಎಸ್ ದಾಳಿ ವೇಳೆ ಮುಂಬೈನಲ್ಲಿ 19 ಪಿಸ್ತೂಲ್ ಜಪ್ತಿಯಾಗಿತ್ತು. ಜಪ್ತಿಯಾದ ಪಿಸ್ತೂಲ್‍ಗಳಲ್ಲಿ ಎರಡು ಗೌರಿ ಹತ್ಯೆಗೆ ಬಳಸಿರುವ ಅನುಮಾನ ಇದೆ. ಇನ್ನು ಬಂಧಿತ ಶರದ್ ಕಲಾಸ್ಕರ್ ಪಿಸ್ತೂಲ್ ತಯಾರಿಕೆ ಮಾಡಿರುವ ಆರೋಪ ಕೂಡ ಇದೆ. ಹಾಗೆಯೇ ಪಿಸ್ತೂಲ್‍ಗಳ ಬಳಕೆ ಮಾಡುವುದರಲ್ಲಿ ಕಲಾಸ್ಕರ್ ನಿಪುಣನಾಗಿದ್ದು, ಈ ನಿಟ್ಟಿನಲ್ಲಿ ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link