‘ರಾಷ್ಟ್ರ ಕಟ್ಟಲು ಗ್ರಾಮ ಪಂಚಾಯಿತಿ ಮೊದಲ ಹೆಜ್ಜೆ’ -ಸಚಿವ ಕೆ.ಎಸ್.ಈಶ್ವರಪ್ಪ

ತಿಪಟೂರು  : 

      ರಾಷ್ಟ್ರ ಕಟ್ಟಲು ಗ್ರಾಮ ಪಂಚಾಯಿತಿಯೇ ಮೊದಲ ಹೆಜ್ಜೆಯಾಗಿದ್ದು, ಪಕ್ಷವನ್ನು ಸಂಘಟಿಸಿ ದೇಶವನ್ನು ಕಟ್ಟಲು ಮೊದಲನೇ ಮೆಟ್ಟಿಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದರು.

      ನಗರದ ಪಿ.ಜಿ.ಎಂ. ಕಲ್ಯಾಣ ಮಂಟಪದಲ್ಲಿ ಗುರುವಾರ ನಡೆದ ಗ್ರಾಮ ಸ್ವರಾಜ್ ಬಿಜೆಪಿ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಈಗ ಬಂದಿರುವ ಗ್ರಾಮ ಪಂಚಾಯಿತಿ ಚುನಾವಣೆಯು ಲೋಕಸಭೆ, ವಿಧಾನಸಭೆ ಗೆಲುವಿಗಿಂತ ಹೆಚ್ಚು ಆಸಕ್ತಿವಹಿಸಿ ಗ್ರಾಮ ಪಂಚಾಯತಿ ಚುನಾವಣೆ ಮಾಡುತಿದ್ದೆವೆ. ರಾಜ್ಯದಲ್ಲಿ 6 ತಂಡ ಮಾಡಿಕೊಂಡು ಓಡಾಟ ಆರಂಭವಾಗಿದೆ. ಪ್ರತಿಜಿಲ್ಲೆಯಲ್ಲಿ 2 ಕಡೆ ಗ್ರಾಮ ಸ್ವರಾಜ್ ಸಮಾವೇಶ ಮಾಡುತಿದ್ದು ರಾಜ್ಯದ ಗ್ರಾಮ ಪಂಚಾಯಿತಿಗಳಲ್ಲಿ ಬಿ.ಜೆ.ಪಿ ಬೆಂಬಲಿತ ಶೇಕಡ 80ರಷ್ಟು ಅಭ್ಯರ್ಥಿಗಳು ಅಧಿಕಾರ ಹಿಡಿಯಲಿದ್ದಾರೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.

      ಇದೇ ಸಂದರ್ಭದಲ್ಲಿ ಸಂಸದ ಪ್ರತಾಪ್ ಸಿಂಹ ಮಾತನಾಡಿ, ನಾನು ಟಿಕೇಟ್ ನೀಡಿದ ಮೇಲೆ ಪಕ್ಷಕ್ಕೆ ಬಂದವನು, ನನಗೆ ಪಕ್ಷ ಸಂಘಟನೆ ಬಗ್ಗೆ ಗೊತ್ತಿಲ್ಲ. ಜನರು ಹಳ್ಳಿಗಳಲ್ಲಿ ಮೊದಲು ಮೂಲಭೂತ ಸೌಲಭ್ಯ ಕೇಳುತ್ತಾರೆ. ಹಾಗಾಗಿ ಮೊದಿಜೀಯವರಿಗೆ ಕೇಳಿದ್ದೇವೆ ಇದಕ್ಕೆ ಏನಾದರೂ ಪರಿಹಾರ ಕೊಡಬೇಕು. ಮೋದಿಜಿ ಹದಿನಾಲ್ಕನೆ ಹಣಕಾಸು ಯೊಜನೆಯಲ್ಲಿ ಕೇಂದ್ರದಿಂದ ನೇರವಾಗಿ ಗ್ರಾ.ಪಂ ಹಣ ನೀಡುವ ಯೋಜನೆ ಜಾರಿಗೆ ತಂದರು. ಮೊದಿಯಂತೆ ಕ್ರಿಯಾಶೀಲ ಸಚಿವರು ನಮ್ಮ ಸರ್ಕಾರದಲ್ಲಿ ಈಶ್ವರಪ್ಪನವರಿದ್ದು ಗ್ರಾಮಗಳ ಅಭ್ಯುದಯವನ್ನು ಮಾಡುತ್ತಾರೆಂದು ತಿಳಿಸಿದರು.

     ಜಾತಿ, ಕೇರಿ ಎಲ್ಲಾ ಬಿಟ್ಟು ಪಕ್ಷ ಸಂಘಟನೆಗೆ ಹೆಚ್ಚಿನ ಒತ್ತು ನೀಡಿ ಎಂದು ಕಾನೂನು ಮತ್ತು ಸಂಸದೀಯ ಸಚಿವ ಮಾಧುಸ್ವಾಮಿ ಕರೆನೀಡಿದರು.

      ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಶಾಸಕ ಬಿ.ಸಿ.ನಾಗೇಶ್, ಮಹಾತ್ಮ ಗಾಂಧೀಜಿಯವರ ಗ್ರಾಮಸ್ವರಾಜ್ಯ ಮತ್ತು ಗ್ರಾಮಗಳು ಉದ್ಧಾರವಾಗುವವರೆಗೂ ದೇಶವು ಅಭಿವೃದ್ಧಿಯಾಗುವುದಿಲ್ಲವೆಂದಿದ್ದಾರೆ. ಮೋದೀಜಿಯವರು ದೇಶವನ್ನು ಉನ್ನತ ಮಟ್ಟಕ್ಕೆ ತೆಗೆದುಕೊಂಡು ಹೋಗುತ್ತಿರುವ ಈ ಸಂದರ್ಭದಲ್ಲಿ ಗ್ರಾಮಗಳು ಅಭಿವೃದ್ಧಿಯಾದರೆ ದೇಶವು ಸರ್ವತೋಮುಖ ಅಭಿವೃದ್ಧಿಯನ್ನು ಕಾಣುತ್ತದೆ. ಈ ಎಲ್ಲಾ ಕಾರಣಿಗಳಿಗಾಗಿ ಪ್ರತಿಗ್ರಾಮ ಪಂಚಾಯಿತಿಯಲ್ಲೂ ಬಿ.ಜೆ.ಪಿ ಅಧಿಕಾರವನ್ನು ಹಿಡಿಯುವಂತೆ ಮಾಡುವ ಕೆಲಸವನ್ನು ನೀವು ಮಾಡಬೇಕು ಹಾಗೂ ಯಾವುದೇ ಕಾರಣಕ್ಕೂ ಉದಾಸೀನ ಮಾಡಬೇಡಿ ಎಂದು ಕಾರ್ಯಕರ್ತರಿಗೆ ಕರೆನೀಡಿದರು.

      ಕಾರ್ಯಕ್ರಮದಲ್ಲಿ ಜಿಲ್ಲಾ ಬಿ.ಜೆ.ಪಿ ಅಧ್ಯಕ್ಷ ಸುರೇಶ್‍ಗೌಡ, ಸಂಸದರಾದ ಜಿ.ಎಸ್ ಬಸವರಾಜು, ನಾರಾಯಣ ಸ್ವಾಮಿ, ಶಾಸಕರುಗಳಾದ ಜ್ಯೋತಿಗಣೇಶ್, ಮಸಾಲೆ ಜಯರಾಂ, ಮಾಜಿ ಸಚಿವ ಸೊಗಡು ಶಿವಣ್ಣ, ಎಂ ನಂದೀಶ್, ರಾಜ್ಯ ಕಾರ್ಯದರ್ಶಿ ವಿನಯ್ ಕುಲಕರ್ಣಿ ಮತ್ತಿತರರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link