ಮಧುಗಿರಿ:
ಕಾಂಗ್ರೆಸ್ ಪಕ್ಷದೊಳಗೆ ಇದ್ದುಕೊಂಡು ಬಿಜೆಪಿ ಪಕ್ಷದ ಪರವಾಗಿ ಪ್ರಚಾರ ಮಾಡುವವರನ್ನು ಕಾಂಗ್ರೆಸ್ ಹೈ ಕಮಾಂಡ್ ನಾಯಕರು ಪಕ್ಷದಿಂದ ಉಚ್ಚಾಟಿಸುವಂತೆ ಮಿಡಗೇಶಿಯ ಗ್ರಾಮ ಪಂಚಾಯತಿಯ ಮಾಜಿ ಅಧ್ಯಕ್ಷ ಎಸ್ ಎನ್ ರಾಜು ಒತ್ತಾಯಿಸಿದರು.
ಪಟ್ಟಣದ ಉಪವಿಭಾಗಾಧಿಕಾರಿಗಳ ಕಚೇರಿಯಲ್ಲಿ ಮಿಡಿಗೇಶಿ ಗ್ರಾಮ ಪಂಚಾಯತಿಯ ಸದಸ್ಯರು ಸಮೂಹಿಕ ರಾಜೀನಾಮೆ ಸಲ್ಲಿಸಿ ನಂತರ ಮಾತನಾಡಿದ ಅವರು, ಉಪ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಸದನದಲ್ಲಿ ಬಿಜೆಪಿಯ ಸದಾ ವತ್ಸಲೇ ಮಾತೃ ಭೂಮಿ ಎಂಬ ಸಮೂಹ ಗಾಯನವನ್ನು ಸದನದಲ್ಲಿ ಹಾಡಿದ್ದಾರೆ. ಇತ್ತೀಚೆಗೆ ರಾಹುಲ್ ಗಾಂಧಿಯವರು ಗುಜರಾತ್ ಗೆ ಭೇಟಿ ನೀಡಿದ್ದಾಗ ಕಾಂಗ್ರೆಸ್ ಪಕ್ಷದಲ್ಲಿರುವ ಬಿಜೆಪಿ ಪ್ರಚಾರಕರನ್ನು ಕಾಂಗ್ರೆಸ್ ನಿಂದ ತೆಗೆದು ಹಾಕುವುದಾಗಿ ಘೋಷಣೆ ಮಾಡಿದ್ದು ಈಗ ಅದೇ ಡಿಕೆ ಶಿವಕುಮಾರ್ ರವರನ್ನು ಪಕ್ಷದಿಂದ ಉಚ್ಚಾಟಿಸ ಬೇಕು.
ನಮ್ಮ ಮಾಜಿ ಸಚಿವ ಕೆ.ಎನ್ ರಾಜಣ್ಣ ನವರು ಓಟ್ ಚೋರಿ ಬಗ್ಗೆ ಮಾತನಾಡಿರುವುದು ಸರಿಯಿದೆ ಆದರೆ ಅವರು ಮಾತನಾಡಿರುವ ವಿಡಿಯೊ ತುಣುಕುಗಳನ್ನು ತಿರುಚಿರುವ ಕೆಲ ಕಿಡಿಗೇಡಿಗಳು ಹೈ ಕಮಾಂಡ್ ಗೆ ಸಲ್ಲಿಸಿದ್ದಾರೆ. ರಾಜಣ್ಣ ನವರನ್ನು ಸಚಿವ ಸಂಪುಟದಿಂದ ವಜಾ ಮಾಡಿರುವ ಕ್ರಮ ಸರಿಯಿಲ್ಲ.
ಇದರಿಂದ ಬೇಸತ್ತು ನಮ್ಮ ಪಂಚಾಯತಿಯ ಸದಸ್ಯರೆಲ್ಲರೂ ಸಮೂಹಿಕ ರಾಜೀನಾಮೆ ನೀಡಿದ್ದಾರೆ.ನಾನು ಹುಟ್ಟಿದಾಗಿನಿಂದಲೂ ಕಾಂಗ್ರೆಸ್ ಪಕ್ಷದ ಅನೂಯಾಯಿಯಾಗಿದ್ದು ರಾಜಣ್ಣನವರನ್ನು ಮತ್ತೆ ಸಂಪುಟಕ್ಕೆ ಮರು ಸೇರ್ಪಡೆ ಮಾಡದೆ ಹೋದರೆ ನಾನು ಕಾಂಗ್ರೆಸ್ ಪಕ್ಷವನ್ನು ತ್ಯಜಿಸಲಿದ್ದೇನೆ. ಕಾಂಗ್ರೆಸ್ ಪಕ್ಷ ನುಡಿದಂತೆ ನಡೆಯ ಬೇಕು ತನ್ನ ಮಾತಿಗೆ ಬದ್ಧತೆ ತೋರಿಸ ಬೇಕೆಂದರು.
ಮಾಜಿ ಗ್ರಾಪಂ ಸದಸ್ಯ ಮಂಜುನಾಥ್ ಪಿ ಎಲ್ ಮಾತನಾಡಿ ಕೆ.ಎನ್ ರಾಜಣ್ಣ ಅಹಿಂದ ನಾಯಕರಾಗಿದ್ದಾರೆ ಸರ್ವ ಧರ್ಮಗಳ ಸಮುದಾಯದವರನ್ನು ಸಮಾನತೆಯಿಂದ ಕಾಣುತ್ತಾ ಅಹಿಂದ ವರ್ಗದವರಿಗೆ ರಾಜಕೀಯ ಶಕ್ತಿಯನ್ನು ನೀಡಿದ್ದಾರೆ. ಅವರನ್ನು ಕಾಂಗ್ರೆಸ್ ಹೈ ಕಮಾಂಡ್ ವಜಾ ಮಾಡಿರುವುದು ಖಂಡನೀಯವಾಗಿದೆ.
ಮಿಡಿಗೇಶಿ ಗ್ರಾಮ ಪಂಚಾಯಿತಿ ರಾಜೀನಾಮೆ ಕೊಟ್ಟ ಸದಸ್ಯರುಗಳು ಅಧ್ಯಕ್ಷೆ ಲಕ್ಷ್ಮೀದೇವಮ್ಮ ಸದಸ್ಯರುಗಳಾದ ವಿಜಯಕುಮಾರ್ ಸುರೇಶ್ ರಾಜಗೋಪಾಲ್ ರಾಧಾ ಭಾಗ್ಯಮ್ಮ ಮಂಜಮ್ಮ ಸುಕನ್ಯ ವೇಣುಗೋಪಾಲ ರೆಡ್ಡಿ ಬಿಟಿ ರಾಜಗೋಪಾಲ್
