ಬೆಂಗಳೂರು:
ಮೇ 10 ರಂದು ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಈಗಾಗಲೇ ಅಭ್ಯರ್ಥಿಗಳ ಎರಡು ಪಟ್ಟಿಯನ್ನು ಬಿಡುಗಡೆ ಮಾಡಿದ್ದರೆ, ಜೆಡಿಎಸ್ ಕೂಡಾ ಎರಡನೇ ಪಟ್ಟಿ ಬಿಡುಗಡೆಗೆ ಸಜ್ಜಾಗುತ್ತಿದೆ. ಆದರೆ, ಆಡಳಿತಾರೂಢ ಬಿಜೆಪಿ ಮಾತ್ರ ಇನ್ನೂ ಮೊದಲ ಪಟ್ಟಿ ಬಿಡುಗಡೆ ಮಾಡಿಲ್ಲ. ಇದಕ್ಕೆ ಅದರ ಅಭ್ಯರ್ಥಿಗಳ ಬಡಿದಾಟಕ್ಕಿಂತ ಬಣ ಬಡಿದಾಟವೇ ಪಟ್ಟಿ ಬಿಡುಗಡೆಗೆ ತಡೆಯೊಡ್ಡಿದೆ ಎಂದು ಕಾಂಗ್ರೆಸ್ ಹೇಳಿದೆ.
ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್, ಬಿಎಸ್ ಯಡಿಯೂರಪ್ಪ ಬಣ, ಬೊಮ್ಮಾಯಿ ಬಣ, ಆರ್ ಎಸ್ ಸ್ ಬಣ, ವಲಸಿಗರ ಬಣ, ಸಂತೋಷ್ ಬಣ, ಹೈಕಮಾಂಡ್ ಬಣಗಳ ಮೇಲಾಟದಲ್ಲಿ ಕನಿಷ್ಠ ಒಂದು ಪಟ್ಟಿಯನ್ನೂ ಬಿಡುಗಡೆ ಮಾಡಲಾಗಿಲ್ಲ. ಇದು ಬಿಜೆಪಿ “ಮುಳುಗಿದ ಹಡಗು” ಎಂಬುದಕ್ಕೆ ನಿದರ್ಶನ ಎಂದು ಕುಹಕವಾಡಿದೆ.