ಗೃಹ ಲಕ್ಷ್ಮಿ : ಸಿಹಿ ಸುದ್ದಿ ಕೊಟ್ಟ ಲಕ್ಷ್ಮಿ ಹೆಬ್ಬಾಳ್ಕರ್

ಬೆಳಗಾವಿ :

    ಕಳೆದ ಜೂನ್​​ ತಿಂಗಳಿನ ನಂತರ ರಾಜ್ಯ ಕಾಂಗ್ರೆಸ್​ ಸರ್ಕಾರದ ಮಹತ್ವಕಾಂಕ್ಷೆಯ ಗೃಹಲಕ್ಷ್ಮಿ ಯೋಜನೆಯಡಿ ಪ್ರತಿ ಮನೆಯ ಯಜಮಾನಿಯ ಖಾತೆಗೆ 2,000 ಸಾವಿರ ರೂಪಾಯಿ ಜಮೆ ಆಗದ ಕಾರಣ ಫಲಾನುಭವಿಗಳು ಸದ್ಯ ಕಂಗಾಲಾಗಿದ್ದಾರೆ.ಇದೀಗ ಇನ್ನೊಂದು ವಾರದ ಒಳಗೆ ಜುಲೈ ತಿಂಗಳ ಹಣ ಫಲಾನುಭವಿಗಳ ಖಾತೆಗೆ ವರ್ಗಾವಣೆ ಆಗಲಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್​ ಅವರು ಶುಭ ಸುದ್ದಿ ನೀಡಿದ್ದಾರೆ.

   ಜುಲೈ, ಆಗಸ್ಟ್ ತಿಂಗಳ ಹಣ ಈವರೆಗೂ ಜಮೆ ಆಗಿಲ್ಲ. ಅಲ್ಲದೇ ಸೆಪ್ಟೆಂಬರ್ ತಿಂಗಳು ಮುಗಿತಾ ಬರುತ್ತಿದ್ದೂ, ಈ ಕಂತಿನ ಹಣವೂ ಬಾರದ ಕಾರಣ ಫಲಾನುಭವಿಗಳಲ್ಲಿ ಆತಂಕಕ್ಕೆ ಕಾರಣವಾಗಿದೆ.ಆದರೆ ಯಾವುದೇ ಕಾರಣಕ್ಕೂ ಯೋಜನೆ ನಿಲ್ಲಲ್ಲ. ಜುಲೈ ತಿಂಗಳ ಹಣ ಇನ್ನೊಂದು ವಾರದೊಳಗೆ ಹಾಗೂ ನಂತರ ಆಗಸ್ಟ್​, ಅಕ್ಟೋಬರ್​​ ತಿಂಗಳ ಆರಂಭದಲ್ಲಿ ಸೆಪ್ಟೆಂಬರ್ ಕಂತಿನ ಹಣ ಫಲಾನುಭವಿಗಳ ಖಾತೆಗೆ ವರ್ಗಾವಣೆ ಆಗಲಿದೆ. ಖಾತೆಗೆ ಹಣ ವರ್ಗಾವಣೆ ಪ್ರಕ್ರಿಯೆ ನಡೆಯುತ್ತಿದೆ. ಯೋಜನೆ ಬಗ್ಗೆ ಅಪಪ್ರಚಾರ ಮಾಡುವವರ ಬಗ್ಗೆ ಕಿವಿಕೊಡಬೇಡಿ ಎಂದು ಹೆಬ್ಬಾಳ್ಕರ್ ಹೇಳಿದ್ದಾರೆ.​