GST ತಿದ್ದುಪಡಿ ಮಸೂದೆ ಅಂಗೀಕಾರ….!

ನವದೆಹಲಿ:

     ಕೇಂದ್ರ ಸರ್ಕಾರ ಆನ್‌ಲೈನ್ ಗೇಮಿಂಗ್, ಕ್ಯಾಸಿನೊಗಳು ಮತ್ತು ಕುದುರೆ ರೇಸ್ ಕ್ಲಬ್‌ಗಳ ಮೇಲೆ ಶೇಕಡಾ 28 ರಷ್ಟು ತೆರಿಗೆ ವಿಧಿಸಲು ಕೇಂದ್ರಿಯ ಮತ್ತು ಸಮಗ್ರ ಜಿಎಸ್‌ಟಿ ಕಾನೂನು ತಿದ್ದುಪಡಿ ಮಸೂದೆಯನ್ನು ಶುಕ್ರವಾರ ಲೋಕಸಭೆ ಅಂಗೀಕರಿಸಿದೆ.

   ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಅಮಾನತು ವಿರೋಧಿಸಿ ಪ್ರತಿಪಕ್ಷಗಳ ಪ್ರತಿಭಟನೆಯ ನಡುವೆಯೇ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಂಸತ್ತಿನ ಮುಂಗಾರು ಅಧಿವೇಶನದ ಕೊನೆಯ ದಿನವಾದ ಇಂದು ಸದನದಲ್ಲಿ GST ಮಸೂದೆ ಮಂಡಿಸಿದರು.

   ಕೇಂದ್ರ ಸರಕು ಮತ್ತು ಸೇವಾ ತೆರಿಗೆ (ತಿದ್ದುಪಡಿ) ಮಸೂದೆ, 2023, ಮತ್ತು ಸಮಗ್ರ ಸರಕು ಮತ್ತು ಸೇವಾ ತೆರಿಗೆ (ತಿದ್ದುಪಡಿ) ಮಸೂದೆ, 2023 ಅನ್ನು ಲೋಕಸಭೆಯಲ್ಲಿ ಯಾವುದೇ ಚರ್ಚೆಯಿಲ್ಲದೆ ಧ್ವನಿ ಮತದ ಮೂಲಕ ಅಂಗೀಕರಿಸಲಾಗಿದೆ.

    ಕ್ಯಾಸಿನೊಗಳು, ಕುದುರೆ ರೇಸಿಂಗ್ ಮತ್ತು ಆನ್‌ಲೈನ್ ಗೇಮಿಂಗ್‌ ಮೇಲಿನ ತೆರಿಗೆ ಕುರಿತು ಸ್ಪಷ್ಟತೆ ನೀಡಲು, 2017 ರ CGST ಕಾಯಿದೆಯ ಶೆಡ್ಯೂಲ್ III ರಲ್ಲಿನ ನಿಬಂಧನೆಗಳಿಗೆ ತಿದ್ದುಪಡಿ ತರಲಾಗಿದೆ.

    IGST ಕಾಯಿದೆಯಲ್ಲಿನ ತಿದ್ದುಪಡಿಯು ಆನ್‌ಲೈನ್ ಗೇಮಿಂಗ್‌ಗೆ GST ವಿಧಿಸುವ ನಿಬಂಧನೆಗೆ ಸಂಬಂಧಿಸಿದ್ದು. ಇಂತಹ ಗೇಮಿಂಗ್‌ ಘಟಕಗಳು ಭಾರತದಲ್ಲಿ GST ನೋಂದಣಿ ಮಾಡಿಸುವುದು ಅಗತ್ಯವಾಗಿದೆ.

    ಇನ್ನು ವಿದೇಶಿ ಆನ್‌ಲೈನ್ ಗೇಮಿಂಗ್ ಪ್ಲಾಟ್‌ಫಾರ್ಮ್​​​ಗಳು ನೋಂದಣಿ ಮತ್ತು ತೆರಿಗೆ ಪಾವತಿಯ ನಿಬಂಧನೆಗಳನ್ನು ಅನುಸರಿಸದಿದ್ದಲ್ಲಿ ಭಾರತದೊಳಗೆ ಈ ಗೇಮಿಂಗ್​​ಗಳಿಗೆ ಪ್ರವೇಶವನ್ನು ನಿರ್ಬಂಧಿಸಲಾಗುವುದು ಎಂಬುದನ್ನು ಈ ತಿದ್ದುಪಡಿಯಲ್ಲಿ ತಿಳಿಸಲಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap