16,000 ಅಧಿಕ ‘ಗೃಹಲಕ್ಷ್ಮಿ’ಯರಿಗೆ GST ಶಾಕ್ …!

ಬೆಂಗಳೂರು:

   ಗೃಹಲಕ್ಷ್ಮಿ ಯೋಜನೆಯಡಿ ನೊಂದಾಯಿಸಲ್ಪಟ್ಟ ರಾಜ್ಯದ 16 ಸಾವಿರಕ್ಕೂ ಅಧಿಕ ಲಾನುಭವಿಗಳು ಜಿಎಸ್‌ಟಿ ತಾಂತ್ರಿಕ ಕಾರಣದಿಂದ ಯೋಜನೆಯಿಂದ ವಂಚಿತರಾಗಿದ್ದಾರೆ.ಪತಿ ಮತ್ತು ಮಕ್ಕಳ ಕಾರಣದಿಂದ ಯಜಮಾನಿ ಫಲಾನುಭವಿ ಪಟ್ಟಿಯಿಂದ ಹೊರಗುಳಿಯುವಂತಾಗಿದೆ. ಈ ಸಮಸ್ಯೆಯನ್ನು ಬಗೆಹರಿಸುವಂತೆ ರಾಜ್ಯ ಸರ್ಕಾರ ಆದಾಯ ತೆರಿಗೆ ಇಲಾಖೆಗೆ ಸೂಚನೆ ನೀಡಿದೆ.ಹೀಗಾಗಿ ನಿಜವಾದ ಜಿಎಸ್‌ಟಿ ಪಾವತಿದಾರರು ಯಾರು ಎಂಬುದನ್ನು ಪತ್ತೆ ಮಾಡಲು ಆದಾಯ ತೆರಿಗೆ ಇಲಾಖೆ ಕ್ರಮ ಕೈಗೊಂಡಿದೆ.

   ಬೆಳೆ ಸಾಲ ಹೊರತಾಗಿ ವೈಯಕ್ತಿಕ ಸಾಲ, ವಾಹನ ಸಾಲ ಇತರೆ ಕಾರಣಗಳಿಗೆ ಪಡಿತರ ಚೀಟಿ ಹೊಂದಿದ ವ್ಯಕ್ತಿ ರಾಷ್ಟ್ರೀಕೃತ ಅಥವಾ ಇತರೆ ಬ್ಯಾಂಕುಗಳಲ್ಲಿ ಸಾಲ ಪಡೆಯುತ್ತಾರೆ. ಈ ಸಾಲಕ್ಕೆ ಜಿಎಸ್‌ಟಿ ಹಾಕಲಾಗುತ್ತದೆ. ವ್ಯಕ್ತಿಯ ಪಾನ್ ಕಾರ್ಡ್ ಸಂಖ್ಯೆ ಜೋಡಣೆಯಾಗಿರುತ್ತದೆ. ಸಾಲ ಪಡೆದ ಕಾರಣಕ್ಕೆ ಪಡಿತರ ಚೀಟಿದಾರರು ಕೂಡ ಜಿಎಸ್‌ಟಿ ಪಾವತಿದಾರರಾಗುತ್ತಿದ್ದಾರೆ. ಸಾಲಕ್ಕೆ ಜಾಮೀನು ನೀಡಿದವರು ಪಡಿತರ ಚೀಟಿಯನ್ನು ಜಿಎಸ್‌ಟಿ ಪಾವತಿದಾರ ಪಟ್ಟಿಗೆ ಸೇರ್ಪಡೆ ಮಾಡಲಾಗುತ್ತಿದೆ.

   ನ್ಯಾಯಬೆಲೆ ಅಂಗಡಿಗಳಲ್ಲಿ ಇ-ಕೆವೈಸಿ ಮಾಡಿದ ಸಂದರ್ಭದಲ್ಲಿ ಪತಿ, ಮಕ್ಕಳು ಸಾಲ ಪಡೆದು ಜಿಎಸ್‌ಟಿ ಪಾವತಿಸಿದ್ದರಿಂದ ಪಡಿತರ ಚೀಟಿ ಹೊಂದಿದ ಮನೆ ಯಜಮಾನಿಗೆ ಗೃಹಲಕ್ಷ್ಮಿ ಯೋಜನೆಯ ನಗದು ಪಾವತಿಯಾಗುತ್ತಿಲ್ಲ. ಯೋಜನೆಗೆ ಅರ್ಹರಾಗಿದ್ದರು ಹಣ ಸಿಗದಂತಾಗಿದೆ ಎಂದು ಹೇಳಲಾಗಿದೆ.

   ಈ ಹಿನ್ನೆಲೆಯಲ್ಲಿ ಸರ್ಕಾರ ಎಲ್ಲ ಜಿಲ್ಲೆಗಳಿಂದ ಮಾಹಿತಿ ನೀಡುವಂತೆ ಆದೇಶಿಸಿದೆ. ಗೃಹಲಕ್ಷ್ಮಿ ಯೋಜನೆಗೆ ಅರ್ಹರಿದ್ದರೂ ಜಿ.ಎಸ್.ಟಿ. ಪಾವತಿದಾರ ಎಂಬ ಮಾಹಿತಿ ತೋರಿಸುತ್ತಿರುವ ಪಡಿತರ ಕಾರ್ಡ್ ಮಾಹಿತಿಯನ್ನು ಆದಾಯ ತೆರಿಗೆ ಮತ್ತು ವಾಣಿಜ್ಯ ಇಲಾಖೆಗೆ ನೀಡಿ ಸತ್ಯಾಂಶ ತಿಳಿದು ಪ್ರಕ್ರಿಯೆ ಮುಂದುವರಿಸುವಂತೆ ತಿಳಿಸಲಾಗಿದೆ.

Recent Articles

spot_img

Related Stories

Share via
Copy link