ಗುಬ್ಬಿ :
ತಾಲ್ಲೂಕು ಮುಜರಾಯಿ ದೇವಾಲಯಗಳ ಅರ್ಚಕರ ತಸ್ತೀಕ್ ಹಣ ಬಿಡುಗಡೆ ಸೇರಿದಂತೆ ಎಲ್ಲಾ ರೀತಿಯ ಸಮಸ್ಯೆಗಳನ್ನು ತ್ವರಿತವಾಗಿ ಇತ್ಯರ್ಥಪಡಿಸುವಂತೆ ತಹಸೀಲ್ದಾರ್ ಡಾ:ಪ್ರದೀಪ್ ಕುಮಾರ್ ಹಿರೇಮಠ್ ಅವರಿಗೆ ತಾಲ್ಲೂಕಿನ ಅರ್ಚಕರು ಮನವಿ ಮಾಡಿಕೊಂಡ ಹಿನ್ನಲೆಯಲ್ಲಿ ಅರ್ಚಕರ ಸಮಸ್ಯೆಗಳನ್ನು ಬಗೆಹರಿಸಲು ಸೂಕ್ತ ಕ್ರಮ ಕೈಗೊಳ್ಳುವುದಾಗಿ ಎಂದು ತಹಸೀಲ್ದಾರ್‍ರವರು ಭರವಸೆ ನೀಡಿದ್ದಾರೆ ಎಂದು ಅರ್ಚಕರ ಸಂಘದ ಮಹಾರುದ್ರೇಶ್ ತಿಳಿಸಿದರು.
ಅರ್ಚಕರ ಸಂಘದ ಪದಾಧಿಕಾರಿಗಳು ತಹಸೀಲ್ದಾರ್ ಕಚೇರಿಗೆ ಭೇಟಿ ನೀಡಿ ಮನವಿ ಸಲ್ಲಿಸಿದ ನಂತರ ಮಾತನಾಡಿದ ಅವರು ಅರ್ಚಕರ ಸಮಸ್ಯೆಗಳ ಬಗ್ಗೆ ಹಲವು ಭಾರಿ ಮನವಿ ಮಾಡಿದ್ದು ಸಮಸ್ಯೆ ಬಗೆಹರಿದಿರಲಿಲ್ಲ ಸಮಸ್ಯೆಗಳ ಬಗ್ಗೆ ತಹಸೀಲ್ದಾರ್ ಅವರಿಗೆ ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ತ್ವರಿತವಾಗಿ ಸಮಸ್ಯೆಗಳನ್ನು ಇತ್ಯರ್ಥಪಡಿಸುವುದಾಗಿ ತಿಳಿಸಿದ್ದಾರೆ ಇದರಿಂದ ಕಳೆದ ಹಲವು ತಿಂಗಳುಗಳಿಂದ ನೆನೆಗುದಿಗೆ ಬದ್ದಿದ್ದ ಅರ್ಚಕರ ಸಮಸ್ಯೆ ಬಗೆಹರಿಯಲಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಅರ್ಚಕರ ಸಂಘದ ವತಿಯಿಂದ ತಹಸೀಲ್ದಾರ್ ಅವರನ್ನು ಅಭಿನಂಧಿಸಿದರು. ಈ ಸಂದರ್ಭದಲ್ಲಿ ಅರ್ಚಕರ ಸಂಘದ ಕಾರ್ಯದರ್ಶಿಯಾದ ಜನಾರ್ಥನಾಚಾರ್ಯ ಪದಾಧಿಕಾರಿಗಳಾದ ಯೋಗನಂದಮೂರ್ತಿ, ಮಾಜಿ ಅಧ್ಯಕ್ಷ ಬಸವರಾಜ್, ಶ್ರೀನಿವಾಸ್, ನರಸಿಂಹಜೀಯರ್, ಚನ್ನಬಸವರಾದ್ಯ, ರವಿ, ಅಶ್ವಥ್, ವಿಷ್ಣು, ರುದ್ರೇಶ್, ಅಶ್ವಥ್, ನಾರಾಯಣಾಚಾರ್ಯ, ಗಿರೀಶ್, ಶಿವಣ್ಣ ಮುಂತಾದವರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ