ಮಾರಣಹೋಮಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆ ನೇರ ಹೊಣೆ : ಮರುಳೀಧರ ಹಾಲಪ್ಪ

 ಗುಬ್ಬಿ : 

      ಎರಡು ಲಕ್ಷ ಕೋಟಿ ರೂ ಗಳನ್ನು ಮೀಸಲಿಟ್ಟಿರುವುದಾಗಿ ಹೇಳಿಕೊಂಡ ಕೇಂದ್ರ ಸರ್ಕಾರ ಕೋವಿಡ್ ಎರಡನೆ ಅಲೆಯನ್ನು ಸಮುದಾಯಕ್ಕೆ ತಂದು ಆಸ್ಪತ್ರೆಯಲ್ಲಿ ಹಾಸಿಗೆ ಇಲ್ಲದೆ ಆಕ್ಸಿಜನ್ ಕೊರತೆಯಿಂದ ನರಳಾಡಿಸಿ ಜನರ ಜೀವದ ಜೊತೆ ಆಟವಾಡುತ್ತಿದೆ ಈ ಮಾರಣಹೋಮಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆ ನೇರ ಹೊಣೆ ಎಂದು ಕೆ.ಪಿ.ಸಿ.ಸಿ. ವಕ್ತಾರ ಮರುಳೀಧರ ಹಾಲಪ್ಪ ಆರೋಪಿಸಿದರು.

      ಪಟ್ಟಣದ ತಾಲ್ಲೂಕು ಕಚೇರಿ ಬಳಿಯ ಅಶ್ವತ್ಥ ಕಟ್ಟೆಯಲ್ಲಿ ಕಾಂಗ್ರೆಸ್ ಘಟಕ ಆಯೋಜಿಸಿದ್ದ ಕೊರೋನಾ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು 1400 ಕೋಟಿ ಆಪತ್ತಿನ ನಿಧಿ ಎನ್ನುವ ಕೆಂದ್ರ ಸರ್ಕಾರ ಈವರೆವಿಗೂ ರಾಜ್ಯಕ್ಕೆ ಕಿಂಚಿತ್ತೂ ಕಾಳಜಿವಹಿಸಿಲ್ಲ. ಕಳೆದ ವರ್ಷ ಜೀವ ಪಣಕ್ಕಿಟ್ಟ ವಾರಿಯರ್ಸ್‍ಗಳಿಗೂ ಹಣ ನೀಡಿಲ್ಲ ಆಪತ್ತಿನ ನಿಧಿ ಎನಾಯಿತು ಎಂಬ ಲೆಕ್ಕ ಕೇಳುವಂತಿಲ್ಲ ಎಂದು ತಿಳಿಸಿದರು.
ಬೇರೆ ದೇಶಗಳಲ್ಲಿ ಮೂರನೇ ಅಲೆಯು ಆರಂಭವಾಗಿದೆ ನಮ್ಮಲ್ಲಿ ಎರಡನೇ ಅಲೆ ಗ್ರಾಮೀಣ ಭಾಗಕ್ಕೆ ಹರಡುವ ಮುನ್ನ ಅಗತ್ಯ ಕ್ರಮ ಕೈಗೊಳ್ಳಬೇಕಾದ ಸರ್ಕಾರ ಉಪಚುನಾವಣೆಯನ್ನು ಮುಂದಿಟ್ಟುಕೊಂಡು ಜನರ ಬಗ್ಗೆ ಕಾಳಜಿವಹಿಸಲಿಲ್ಲ ಇದರ ಫಲ ಈಗ ಇಡೀ ರಾಜ್ಯಕ್ಕೆ ಮಾರಕವಾದ ವೈರಸ್ ಸಣ್ಣ ಹಳ್ಳಿಗಳಲ್ಲೂ ಜೀವ ಬಲಿ ಪಡೆಯುತ್ತಿದೆ ಮುನ್ನೆಚ್ಚರಿಕೆಯ ಕ್ರಮವಹಿಸಲು ಮೀನಾಮೇಷ ಎಣಿಸುವ ಸರ್ಕಾರ ಕೇವಲ ಸಭೆಗಳನ್ನು ಮಾಡುತ್ತಾ ಕಾಲಹರಣ ಮಾಡುತ್ತಿದೆ ಎಂದು ತಿಳಿಸಿದರು.

      ದಿನ ಕಳೆದಂತೆ ನೂರಾರು ಬಲಿ ವೈರಸ್ ಪಡೆದಿದೆ ದ್ವಿಗುಣಗೊಳ್ಳುತ್ತಿರುವ ಕೋವಿಡ್ ಎರಡನೆ ಅಲೆ ಸಾವಿರಾರು ಸಂಖ್ಯೆಯಲ್ಲಿ ಬಲಿ ಪಡೆಯಲಿದೆ ಈ ನಿಟ್ಟಿನಲ್ಲಿ ತುರ್ತುಕ್ರಮ ಕೈಗೊಳ್ಳಬೇಕು ಬೆಂಗಳೂರು ನಗರಕ್ಕೆ ಸಂಬಂಧಪಟ್ಟಂತೆ ಸಭೆ ಕರೆದು ಬಿಜೆಪಿ ಸಚಿವರು, ಶಾಸಕರು, ಮಾತು ಆಡದೆ ಕಾಂಗ್ರೆಸ್‍ನಿಂದ ಮಾತ್ರ ಸಲಹೆ ಪಡೆದುಕೊಂಡಿದ್ದು ನಿರ್ಲಕ್ಷ್ಯಕ್ಕೆ ಮತ್ತೊಂದು ಸಾಕ್ಷಿ ಎಂದ ಅವರು ಆಕ್ಸಿಜನ್ ಕೊರತೆ ನೀಗಿಸಲು ಕ್ರಮವಹಿಸದ ಸರ್ಕಾರ ಆಸ್ಪತ್ರೆಗಳಲ್ಲಿ ಅಗತ್ಯ ಸಲವತ್ತು ಒದಗಿಸಲ್ಲ ಈ ಜತೆಗೆ ಮೃತಪಟ್ಟವರ ಶವಸಂಸ್ಕಾರಕ್ಕೂ ದಿನಗಳ ಕಾಲ ಅಲೆಯುವ ದುಸ್ಥಿತಿ ತಂದಿದೆ ಎಂದು ಅವರು ತಿಳಿಸಿದರು.

       ಕಾಂಗ್ರೆಸ್ ಜಿಲ್ಲಾಧ್ಯಕ್ಷ ಆರ್.ರಾಮಕೃಷ್ಣ ಮಾತನಾಡಿ ಲಸಿಕೆ ಕೊರತೆ ಆರಂಭವಾಗಿದ್ದ ಸಂದರ್ಭದಲ್ಲೆ ಕೋವಿಡ್ ಎರಡನೆ ಅಲೆ ಜನರ ಬಲಿ ಪಡೆಯುತ್ತಿದೆ ನಿಯಂತ್ರಣ ಕಳೆದುಕೊಂಡ ಸ್ಥಿತಿ ತಂದ ರಾಜ್ಯ ಸರ್ಕಾರ ವಿನಾಕಾರಣ ದಿನದೂಡುತ್ತಿದೆ ಲಾಕ್‍ಡ್ಡೌನ್ ಸಾಕಷ್ಟು ಆರ್ಥಿಕ ಪೆಟ್ಟು ನೀಡಿದೆ ಆದರೂ ಅನಿವಾರ್ಯ ಎನಿಸಿದ್ದಲ್ಲಿ ಮತ್ತೊಂದು ಪರ್ಯಾಯ ಮಾರ್ಗ ಅನುಸರಿಸಿ ಕಟ್ಟುನಿಟ್ಟಿನ ನಿಯಮ ಜಾರಿ ಮಾಡಬೇಕು ಎಂದು ಅವರು ತಿಳಿಸಿದರು.

      ಗುಬ್ಬಿ ಬ್ಲಾಕ್ ಅಧ್ಯಕ್ಷ ಎಸ್.ಎಲ್.ನರಸಿಂಹಯ್ಯ ಮಾತನಾಡಿ ರೂಪಾಂತರ ವೈರಸ್ ಮಾರಕವಾಗಿದೆ ವಿವಿಧ ರೀತಿಯಲ್ಲಿ ಎಲ್ಲಾ ವಯಸ್ಸಿನವರನ್ನು ಬಲಿ ಪಡೆದಿದೆ ಈ ನಿಟ್ಟಿನಲ್ಲಿ ಕಾಂಗ್ರೆಸ್ ರಾಜ್ಯದಲ್ಲಿ ಕರಪತ್ರ ಮೂಲಕ ಜಾಗೃತಿ, ಶವಸಂಸ್ಕಾರಕ್ಕೆ ಸಹಕಾರ ನೀಡುವುದು ಹಾಗೂ ಸಂತ್ರಸ್ತರ ನೆರವಿಗೆ ಸಹಾಯ ಹಸ್ತ ಎಂಬ ಕೇಂದ್ರ ತೆರೆದು ದೂರವಾಣಿ ಸಂಖ್ಯೆ ಮೂಲಕ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಕೆಲಸ ಕಾಂಗ್ರೆಸ್ ಮಾಡಲಿದೆ ಎಂದ ಅವರು ಲಸಿಕೆ ಪಡೆಯುವ ಬಗ್ಗೆ ಅಗತ್ಯ ಅರಿವು ಮೂಡಿಸಬೇಕಿತ್ತು ಈ ಬಗ್ಗೆ ಆಂದೋಲನ ಅಥವಾ ಅಭಿಯಾನ ಮಾಡಲು ಸಲಹೆ ನೀಡಿದರೆ ಬಿಜೆಪಿ ನಿರ್ಲಕ್ಷ್ಯ ತೋರಿದೆ ಎಂದು ತಿಳಿಸಿದರು.

      ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಜಿಲ್ಲಾ ಮುಖಂಡ ರೇವಣಸಿದ್ದಯ್ಯ, ನಿಟ್ಟೂರು ಬ್ಲಾಕ್ ಅಧ್ಯಕ್ಷ ನಿಂಬೆಕಟ್ಟೆ ಜಯಣ್ಣ, ಪಪಂ ಸದಸ್ಯ ಮಹಮದ್ ಸಾದಿಕ್, ಮುಖಂಡರಾದ ಜಯಣ್ಣ, ಸಲೀಪಾಷ, ಜಿ.ವಿ.ಮಂಜುನಾಥ್, ಸೌಭಾಗ್ಯಮ್ಮ, ಜಿ.ಎಸ್.ಮಂಜುನಾಥ್, ಮಹಮದ್ ರಫಿ, ರಂಗನಾಥ್ ಮುಂತಾದವರು ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link