ಗುಬ್ಬಿ : ತಿಪ್ಪೆ ಗುಂಡಿಯಾಗುತ್ತಿರುವ ಕೆರೆ ರಕ್ಷಿಸಿ

ಗುಬ್ಬಿ :

      ತಾಲ್ಲೂಕಿನ ಹಾಗಲವಾಡಿ ಗ್ರಾಮದ ಹೃದಯಭಾಗದಲ್ಲಿರುವ ಕೆರೆಯು ತ್ಯಾಜ್ಯ ವಸ್ತುಗಳಿಂದ ತುಂಬಿ ತಿಪ್ಪೆಗುಂಡಿಯಂತಾಗಿದೆ. ತನ್ನ ಒಡಲಲ್ಲಿ ನೀರು ತುಂಬಿಕೊಂಡು ರೈತರಿಗೆ, ಜನ-ಜಾನುವಾರುಗಳಿಗೆ ಜೀವದಾಯಿನಿಯಾಗಬೇಕಾಗಿದ್ದ ಕೆರೆಯಲ್ಲಿ ಗ್ರಾಮದ ಕೆರೆಯ ಸಮೀಪದಲ್ಲೇ ಇರುವ ಬಸ್ಟಾಂಡ್‍ನ ಅಂಗಡಿ ಮಳಿಗೆಗಳು ಹಾಗೂ ಕೋಳಿ ಅಂಗಡಿಗಳ ತಾಜ್ಯದಿಂದ ತುಂಬುತ್ತಿರುವುದು ಬೇಸರದ ಸಂಗತಿ.

      ಸರ್ಕಾರವು ರಾಜ್ಯದ ಗ್ರಾಮಪಂಚಾಯತಿಗಳಿಗೆ ಗ್ರಾಮದ ಸ್ಚಚ್ಚತೆ ಕಾಪಾಡುವ ಉದ್ದೇಶದಿಂದ ಎಲ್ಲಾ ಪಂಚಾಯಿತಿಗಳಿಗೆ ಅಂದಾಜು 15 ಲಕ್ಷದ ರೂ.ಗಳಲ್ಲಿ ಘನತಾಜ್ಯ ಘಟಕ ಸ್ಥಾಪಿಸಿ ಹಸಿ, ಒಣ ಕಸ ಬೇರ್ಪಡಿಸುವ ಬಗ್ಗೆ 2020 ರಲ್ಲೆ ಸುತ್ತೋಲೆ ಹೊರಡಿಸಿದ್ದು, ಎಲ್ಲಾ ಪಂಚಾಯಿತಿಗಳು ಈ ವರ್ಷ ಯೋಜನೆಯನ್ನು ಜಾರಿಗೊಳಿಸುತ್ತಿವೆ. ಆದರೆ ಹಾಗಲವಾಡಿ ಗ್ರಾಮ ಪಂಚಾಯಿತಿ ಮಾತ್ರ ಯೋಜನೆ ಕುರಿತು ಮೌನವಹಿಸಿರುವುದು ದುರದೃಷ್ಟಕರ. ಕರ್ನಾಟಕ ಪಂಚಾಯತ್ ರಾಜ್ ಇಲಾಖೆ ಸ್ವಚ್ಛತೆ ಹಾಗೂ ನೀರನ ಸಂರಕ್ಷಣೆ ಬಗ್ಗೆ ಸಾಕಷ್ಟು ಯೋಜನೆಗಳನ್ನು ತಂದರೂ ಸಹ ಹಾಗಲವಾಡಿ ಪಂಚಾಯಿತಿ ಮಾತ್ರ ಯಾವುದೇ ಯೋಜನೆ ಜಾರಿಗೆ ತರದೆ ಜಾಣ ಕುರುಡು ಪ್ರದರ್ಶಿಸುತ್ತಿದೆ.

     ಆದ್ದರಿಂದ ಸಂಬಂಧಪಟ್ಟ ಇಲಾಖೆ, ಅಧಿಕಾರಿಗಳು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ತಾಜ್ಯ ವಸ್ತುಗಳಿಂದ ತುಂಬುತ್ತಿರುವ ಕೆರೆಯನ್ನು ಸಂರಕ್ಷಿಸಿ ಗ್ರಾಮದ ಸ್ವಚ್ಛತೆ ಕಾಪಾಡಬೇಕು. ಒಂದು ವೇಳೆ ನಿರ್ಲಕ್ಷಿಸಿದರೇ ಸದ್ಯದಲ್ಲೇ ಮುಂಗಾರು ಆರಂಭವಾಗಿ ಜೋರು ಮಳೆ ಬಂದರೆ ಇಡೀ ಗ್ರಾಮ ಸಾಂಕ್ರಾಮಿಕ ರೋಗಗಳಿಗೆ ತುತ್ತಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link