ಗುಬ್ಬಿ :

ತಾಲ್ಲೂಕಿನಲ್ಲಿ ಎಲ್ಲರಿಗೂ ಲಸಿಕೆ ನೀಡುವ ಅಭಿಯಾನಕ್ಕೆ ತಹಶೀಲ್ದಾರ್ ಡಾ||ಪ್ರದೀಪ್‍ಸ್ವಾಮಿ ಚಾಲನೆ ನೀಡಿದರು. ತಾಲ್ಲೂಕಿಗೆ ಜೂ.21 ರಂದು 4000 ಲಸಿಕೆಗಳು ಬಂದಿದ್ದು, ತಾಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ 18 ವರ್ಷ ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ನೀಡಲಾಯಿತು.
ಪೊಲೀಸ್ ಬಂದೋಬಸ್ತ್‍ನಲ್ಲಿ ಅಂತರ ಕಾಯ್ದು ಕೊಂಡು ಲಸಿಕೆ ನೀಡಲಾಯಿತು. ಲಸಿಕಾ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ ಎದ್ದು ಕಾಣುತ್ತಿತ್ತು. ಈ ಬಗ್ಗೆ ತಾಲ್ಲೂಕು ವೈದ್ಯಾಧಿಕಾರಿಗಳನ್ನು ಕೇಳಿದ್ದಕ್ಕೆ ಸಮರ್ಪಕ ಉತ್ತರ ಸಿಗಲಿಲ್ಲ. ಗ್ರಾಮೀಣ ಪ್ರದೇಶಗಳಲ್ಲಿ ಯುವಕರು ಮುಗಿಬಿದ್ದು ಲಸಿಕೆ ಹಾಕಿಸಿಕೊಳ್ಳುತ್ತಿದ್ದರು. 45 ವರ್ಷ ಮೇಲ್ಪಟ್ಟ ಜನರ ಪಾಡು ಹೇಳತೀರದಾಗಿದ್ದು, ವಯಸ್ಸಾದವವರು ಅಲ್ಲಲ್ಲೆ ಸುಸ್ತಾಗಿ ಕುಳಿತಿರುವ ದೃಶ್ಯ ಸಾಮಾನ್ಯವಾಗಿತ್ತು.

ಅಭಿಯಾನದಲ್ಲಿ ಪ.ಪಂ.ಅಧ್ಯಕ್ಷ ಅಣ್ಣಪ್ಪಸ್ವಾಮಿ, ಪೊಲೀಸ್ ಇನ್ಸ್ಪೆಕ್ಟರ್ ನದಾಫ್, ಸಿಡಿಪಿಓ ಹೊನ್ನೆಶಪ್ಪ, ಪ.ಪಂ.ಮುಖ್ಯಾಧಿಕಾರಿ ಯೋಗೇಶ್, ಕಂದಾಯ ತನಿಖಾಧಿಕಾರಿ ರಮೇಶ್‍ಕುಮಾರ್ ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








