ಗುಬ್ಬಿ :
ತಾಲ್ಲೂಕು ಕಾರ್ಮಿಕ ಇಲಾಖೆ ವತಿಯಿಂದ ನೋಂದಾಯಿತ ಕೂಲಿ ಕಾರ್ಮಿಕರಿಗೆ, ಕಟ್ಟಡ ಕೆಲಸಗಾರರಿಗೆ ಹಾಗೂ ಇತರ ಕಾರ್ಮಿಕರಿಗೆ ಕೊರೋನ ಸಂಕಷ್ಟದ ಸಮಯದಲ್ಲಿ ಸರ್ಕಾರದ ವತಿಯಿಂದ ಕೊಡುವ ದಿನಸಿ ಕಿಟ್‍ಗಳಿಗೆ ಮಂಗಳವಾರ ಕಾರ್ಮಿಕ ಇಲಾಖೆ ಕಚೇರಿಯಲ್ಲಿ ನೋಂದಣಿ ಮಾಡಿಕೊಳ್ಳಲಾಯಿತು.
ತಾಲ್ಲೂಕಿನ ಮೂಲೆ ಮೂಲೆಯಿಂದ ಬಂದಿದ್ದಂತಹ ಕಾರ್ಮಿಕರಲ್ಲಿ ಕೆಲವರು ಮಾಸ್ಕ್‍ಗಳನ್ನು ಸಹ ಧರಿಸಿರಲಿಲ್ಲ, ಯಾವುದೆ ಅಂತರವಿಲ್ಲದೆ ಸುಮಾರು ಅರ್ಧ ಕಿಮೀಯಷ್ಟು ಸಾಲುಗಟ್ಟಿ ಕಾರ್ಮಿಕರು ನಿಂತಿದ್ದರು.
ಈ ಬಗ್ಗೆ ಇಲಾಖೆಯವರನ್ನು ಕೇಳಿದರೆ ಸಮರ್ಪಕವಾಗಿ ಉತ್ತರಿಸಲಿಲ್ಲ. ಅನ್‍ಲಾಕ್ ಆಗಿ ಎರಡು ದಿನ ಕಳೆದಿದ್ದು ಕೊರೋನ ಸಂಕಷ್ಟವಿನ್ನು ಜನರನ್ನು ತೊರೆದಿಲ್ಲ ಆದ ಕಾರಣ ಅಧಿಕಾರಿಗಳು ಜನರಿಗೆ ತಿಳಿ ಹೇಳಬೇಕು ಎಚ್ಚರಿಕೆ ವಹಿಸದೆ ಅಸಡ್ಡೆಯಿಂದ ವರ್ತಿಸಿದರೆ ಮುಂದಿನ ದಿನಗಳಲ್ಲಿ ಕೊರೋನಾ ಸೋಂಕು ವಿಕೋಪಕ್ಕೆ ಹೋಗುವುದರಲ್ಲಿ ಯಾವುದೇ ಸಂದೇಹವಿಲ್ಲ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ