ಕೆಸರು ಗದ್ದೆಯಾದ ಸಂತೆಬೀದಿ ; ಗ್ರಾ.ಪಂ.ವಿರುದ್ಧ ಆಕ್ರೋಶ!!!

ಗುಬ್ಬಿ : 

     ತಾಲ್ಲೂಕಿನ ನಿಟ್ಟೂರಿನ ಸಂತೆಬೀದಿ ಸೇರಿದಂತೆ ಹಲವು ಬೀದಿಗಳು ಮಳೆಯಿಂದಾಗಿ ಕೆಸರುಗದ್ದೆಯಂತಾಗಿದ್ದು, ದುರಸ್ತಿಗೆ ಮುಂದಾಗದ ನಿಟ್ಟೂರು ಗ್ರಾಪಂ ವಿರುದ್ಧ ಗ್ರಾಮಸ್ಥರು ಆಕ್ರೋಶಗೊಂಡಿದ್ದಾರೆ.

      ಗ್ರಾಮದ ಹಳೇ ಬಿ.ಹೆಚ್.ರಸ್ತೆಯು ಸಂತೆಬೀದಿಯಾಗಿ ಮಾರ್ಪಾಟಾಗಿದೆ. ಕೆಸರಿನಿಂದ ಹದಗೆಟ್ಟ ಸಂತೆಬೀದಿಯನ್ನು ಸ್ವಚ್ಛಗೊಳಿಸಲು ನಿಟ್ಟೂರು ಗ್ರಾಪಂ ಆಡಳಿತವರ್ಗ ವಿಫಲವಾಗಿದೆ ಎಂದು ಸ್ಥಳೀಯರು ದೂರಿದ್ದಾರೆ. ಸಂತೇಬೀದಿಯ ತುಂಬಾ ಮಣ್ಣು ಆವರಿಸಿದ್ದು, ಮಳೆ ಬಂತೆಂದರೆ ಕೆಸರು ಮಣ್ಣು ಎದ್ದು ಕಾಣುತ್ತಿದ್ದು, ಕೆಸರು ಮಣ್ಣಿಗೆ ಜನರು ಜಾರಿ ಬಿದ್ದೆದ್ದು ಹೋದ ನಿದರ್ಶನಗಳಿವೆ.

ಗ್ರಾಪಂ ಅಧ್ಯಕ್ಷರು ಆರಂಭದಲ್ಲಿ ಗ್ರಾಮದಲೆಲ್ಲಾ ಸುತ್ತಾಡಿ ರಸ್ತೆ ದುಸ್ಥಿತಿಯ ನಡುವೆಯೂ ರಸ್ತೆಯಲ್ಲಿ ಕೆಸರು ಕಂಡುಬಂದಿಲ್ಲವೆಂದು ಹೇಳಿರುವುದು ಗ್ರಾಮದ ಗ್ರಾಮಸ್ಥರಲ್ಲಿ ಅಸಮಾಧಾನ ಮೂಡಿಸಿದೆ. ಗ್ರಾಮದ ವೃದ್ಧ-ವೃದ್ಧೆಯರು ಕೆಸರಿನ ಬೀದಿಯಲ್ಲಿ ತಿರುಗಾಡಲು ಭಯ ಭೀತಿಗೊಂಡಿದ್ದಾರೆ. ಗಬ್ಬೆದ್ದಿರುವ ಗ್ರಾಮದ ಪ್ರಮುಖ ರಸ್ತೆಗಳನ್ನು ದುರಸ್ತಿಗೊಳಿಸುವಲ್ಲಿ ಶಾಸಕರಾಗಲಿ, ಇನ್ನಿತರ ಜನಪ್ರತಿನಿಧಿಗಳಾಗಲಿ ಕ್ರಮಕೈಗೊಂಡಿಲ್ಲ. ನಿಟ್ಟೂರು ಗ್ರಾಮದಲ್ಲಿ ಹಲವಾರು ಸಮಸ್ಯೆಗಳಿದ್ದು, ಗ್ರಾಮದ ಸಮಸ್ಯೆಗಳ ಕಡೆ ಶಾಸಕರು, ಗ್ರಾಪಂ ಜನಪ್ರತಿನಿಧಿಗಳು ಕಣ್ಣಾಯಿಸಬೇಕೆಂದು ಗ್ರಾಮದ ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link