ಗುಬ್ಬಿ :
ತುಮಕೂರಿನಿಂದ 5 ಜಿಲ್ಲೆಗಳನ್ನು ಸಂಪರ್ಕಿಸುವ ಏಕೈಕ ರಾಷ್ಟ್ರೀಯ ಹೆದ್ದಾರಿ ಎನ್‍ಹೆಚ್ 206 ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಉತ್ತರಕನ್ನಡ, ಉಡುಪಿ ಜಿಲ್ಲೆಗಳನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ ಇದಾಗಿದೆ. ಈಗಾಗಲೇ ಈ ಹೆದ್ದಾರಿ ಸಂಖ್ಯೆ ಬದಲಾಗಿ ಮಲ್ಲಸಂದ್ರದಿಂದ ಶಿವಮೊಗ್ಗದವರೆಗೆ ಚತುಷ್ಪಥ ರಸ್ತೆ ಕಾಮಗಾರಿ ಪ್ರಾರಂಭವಾಗಿದೆ.
ಗುಬ್ಬಿ, ತಿಪಟೂರು ಅರಸೀಕೆರೆಗಳಲ್ಲಿ ಊರಿನ ಹೊರಭಾಗ ರಸ್ತೆ ಹಾದು ಹೋಗುವುದರಿಂದ ಇಲ್ಲಿ ಹಾಲಿ ಇರುವ ರಸ್ತೆಯನ್ನು ಇಲಾಖೆಯವರು ಈಗಲೇ ಕಣ್ಣೆತ್ತಿ ನೋಡದಂತಾಗಿದ್ದಾರೆ.
ನೂರಾರು ಕೋಟಿ ಹಣ ವ್ಯಯ ಮಾಡಿ ನಿರ್ಮಾಣ ಆಗುತ್ತಿರುವ ರಸ್ತೆಗೆ ಈಗಿರುವ ಮೂಲ ರಸ್ತೆಯ ಕೊಂಡಿಯನ್ನು ಕಡೆಗಣಿಸಿದರೆ ಹೇಗೆ ಎಂಬುದು ಎಂದು ಸಾರ್ವಜನಿಕರ ಪ್ರಶ್ನೆಯಾಗಿದೆ ಇದಕ್ಕೆ ಉದಾಹರಣೆಯಾಗಿ ಗುಬ್ಬಿಯಿಂದ ಹಾದು ಹೋಗಿರುವ ಹೆದ್ದಾರಿಯಲ್ಲಿ ಹೇರೂರು ಗ್ರಾಪಂ ಸಮೀಪ ಯಾವುದೇ ಕಾಡು ಮೃಗ ಅವಿತು ಕೂತರೂ ಸಹ ಕಾಣುವುದಿಲ್ಲ. ಎರಡು ಬದಿ ದಟ್ಟ ಪೆÇದೆ ಬೆಳದು ನಿಂತಿದ್ದು, ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ.
ಅಧಿಕಾರಿಗಳು ನಿತ್ಯ ಅಭಿವೃದ್ಧಿಯಾಗುತ್ತಿರುವ ರಸ್ತೆಯ ವೀಕ್ಷಣೆಗೆ ಈ ಮಾರ್ಗವಾಗಿಯೇ ಹಾದು ಹೋಗಬೇಕು ಆದರೇ ಬೆಳೆದಿರುವ ಪೊದೆ ಇವರುಗಳ ಗಮನಕ್ಕೆ ಬಂದಿಲ್ಲವೇ ಅಥವಾ ದಿವ್ಯ ನಿರ್ಲಕ್ಷವೇ ತಿಳಿಯುತ್ತಿಲ್ಲ. ಇನ್ನಾದರೂ ಅಧಿಕಾರಿಗಳು ಎಚ್ಚೆತ್ತು ಹಳೇ ಸಂಪರ್ಕ ರಸ್ತೆಗಳ ಎರಡು ಬದಿಯ ಬೇಲಿಯನ್ನು ತೆರವುಗೊಳಿಸಿ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕಾಗಿ ಸಾರ್ವಜನಿಕರು ಆಗ್ರಹಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ